ಗಂಡನಿಂದ ತೃಪ್ತಿ

ಗಂಡನಿಂದ ತೃಪ್ತಿ ಇಲ್ಲವೆಂದು
ನಡು ದಾರಿಯಲ್ಲೇ ಬಿಟ್ಟು
ಇನೊಬ್ಬ ಗಂಡನ
ಹುಡುಕಾಟಕ್ಕೆ ತಡಕಾಡಿದ ಹೆಣ್ಣು
ಹೆಂಡತಿಯು ಸುಂದರಿಯಲ್ಲವೆಂದು
ತಾಳಿಯನು ಕಿತ್ತುಕೊಂಡು
ಮತ್ತೊಂದು  ಮದುವೆಗೆ
ತಯಾರಾದ ಗಂಡು

ಇಬ್ಬರಲೂ ತೃಪ್ತಿಗೆ ಮಾತ್ರ ಕೊರತೆ
ಅತೃಪ್ತಿಗೆ ಮಾತ್ರ ಮಹತ್ವ
ತೃಪ್ತಿಯನ್ನು ಬಯಸಿ ನಡೆದ
ಇಬ್ಬರಲು  ಮತ್ತದೇ ತೃಪ್ತಿಯ ಕೊರತೆ
ಜೀವನದ ದಾರಿಯುದ್ದಕ್ಕೂ
ತೃಪ್ತಿಯೇ ಲಬಿಸೋಲ್ಲವೆಂದು 
ಗೊತ್ತಾಗೋ ಸಮಯಕ್ಕೆ
ಮುಗಿದೋಯ್ತು ಅವರ
ಮಹತ್ವವುಳ್ಳ  ಸಮಯ ಸತ್ತು .
                   -ಮಾಧವ ಅಂಜಾರು .
             


 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ