ಮದುವೆಯಾಗಿ

ಮದುವೆಯಾಗಿ ಮೂರು ತಿಂಗಳು
ಪತಿಯನ್ನು ಪೂಜಿಸಿದಳು
ನಾಲ್ಕನೇ ತಿಂಗಳು ಆರಂಭದಲ್ಲೇ
ಅತ್ತೆ ಮಾವನ ದೂಷಿಸಿದಳು
ಕಳೆದು ಹೋಯ್ತು ಆರು ತಿಂಗಳು
ಸ್ವಂತ ಮನೆ ಬೇಕೆಂದಳು
ಆ ಕಳೆದ ಎಂಟು ತಿಂಗಳು
ಗಂಡನ ದಿನಾ  ಕಾಡಿದಳು

ಮದ್ವೆಯಾಗಿ ಹನ್ನೆಡರು ತಿಂಗಳು
ಈಗ ಮಗು ಬೇಡವೆಂದಳು
ಹದಿಮೂರನೇ ತಿಂಗಳು
ನಾದಿನಿಯ ಬೈಯೋಕೆ ನಿಂತಳು
ಹದಿನಾಲ್ಕನೇ  ತಿಂಗಳು ಕಾದಳು
ಬಟ್ಟೆ ಬರೆ ಕಟ್ಟಿದಳು
ನಾನು ಇನ್ನು ಬರಲ್ಲ ...ಅಂತಾನೆ
ತಾಯಿ ಮನೆಗೆ ಹೋದಳು

ಮಗಳ ಪೆಟ್ಟಿಗೆ ನೋಡಿಯೇ
ತಾಯಿ ಕರಗಿ ಹೋದಳು
ತಂದೆ ಸ್ವಲ್ಪ ಗಟ್ಟಿಯಾಗಿ
ನೀ ನಮ್ಮ ಮಗಳಾಗಿದ್ದರೂ
ಗಂಡನೇ ನಿನಗೆ ಕಾವಲು
ಆತುರ ಬೇಡ ಸುಮ್ಮನೆ
ತಿರುಗಿ ಹೋಗು ಹೇಳಿದರು

ಹೋದವಳಿಗೇನೋ ಕಸಿವಿಸಿ
ತಲೆಯಾಯ್ತು ಬಿಸಿ ಬಿಸಿ
ಅಪ್ಪ ಅಮ್ಮ ಬೇಕು ನನಗೆ
ಗಂಡನಂತೂ ಬೇಕೇ ಎನಗೆ
ಇನ್ನು ಸುಮ್ಮನಾದರೆ
ಬಹಳ ಕಷ್ಟ ಇನ್ನೂ ಕೊನೆಗೆ
ಪತಿ ಪತ್ನಿಯ ಮುಗುಳು ನಗೆ
ಸಿಹಿ ಕಹಿಯಂತೆ ಬಗೆ ಬಗೆ .
           - ಮಾಧವ ಅಂಜಾರು














 


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ