ನ್ಯಾಯಾಲಯ
ನ್ಯಾಯಾಲಯ
ನ್ಯಾಯಾಲಯ ಒಂದು
ದೇವಾಲಯದಂತೆ
ನ್ಯಾಯಾಧೀಶರು
ದೇವರಿದ್ದಂತೆ
ನ್ಯಾಯವಾದಿಗಳು
ಅರ್ಚಕರಂತೆ
ಜನ ಸಾಮಾನ್ಯರು
ಭಕುತರಂತೆ ....
ದೇವರು ಇರೋ ಜಾಗದಲ್ಲಿ
ಅರ್ಚಕರ ಉದ್ಯೋಗವಷ್ಟೇ
ಭಕುತರ ಬೇಡಿಕೆಯಷ್ಟೇ
ದೇವರು ಒಲಿಯೋದು
ಬಹಳ ವಿರಳ
ಯಾಕೆಂದರೆ ? ಇದು
ಕಲಿಯುಗವಂತೆ...!
ಅರ್ಚಕರೆಲ್ಲರೂ ,
ಭಕ್ತರ ಬೇಡಿಕೆಯನ್ನು
ದೇವರ ಮುಂದೆ ಸ್ಪಟಿಸೋದು ಮಾತ್ರ
ದೇವರೆಲ್ಲರೂ
ಕಣ್ಣು ಮುಚ್ಚಿ ಆಲಿಸೋದು ಮಾತ್ರ
ಯಾಕೆಂದರೆ ? ಇದು
ಅಂತ್ಯ ಯುಗವಂತೆ .. !
ನ್ಯಾಯ ಅನ್ಯಾಯ
ದೇವರೂ ಮಾಡಿದ್ದಾರಂತೆ
ಅರ್ಚಕರೂ ಮಾಡುತ್ತಾರಂತೆ
ಭಕ್ತನಿಗೆ ಮಾತ್ರ
ಅರಿವೇ ಆಗೋದಿಲ್ಲ ..
ದೇವರ ಮುಂದೆ ಏನೆಲ್ಲಾ ಸಂತೆ ..
ಯಾಕೆಂದರೆ ,,,,? ಇದು
ಬಲಿಯುಗವಂತೆ ....
-ಮಾಧವ ಅಂಜಾರು
ನ್ಯಾಯಾಲಯ ಒಂದು
ದೇವಾಲಯದಂತೆ
ನ್ಯಾಯಾಧೀಶರು
ದೇವರಿದ್ದಂತೆ
ನ್ಯಾಯವಾದಿಗಳು
ಅರ್ಚಕರಂತೆ
ಜನ ಸಾಮಾನ್ಯರು
ಭಕುತರಂತೆ ....
ದೇವರು ಇರೋ ಜಾಗದಲ್ಲಿ
ಅರ್ಚಕರ ಉದ್ಯೋಗವಷ್ಟೇ
ಭಕುತರ ಬೇಡಿಕೆಯಷ್ಟೇ
ದೇವರು ಒಲಿಯೋದು
ಬಹಳ ವಿರಳ
ಯಾಕೆಂದರೆ ? ಇದು
ಕಲಿಯುಗವಂತೆ...!
ಅರ್ಚಕರೆಲ್ಲರೂ ,
ಭಕ್ತರ ಬೇಡಿಕೆಯನ್ನು
ದೇವರ ಮುಂದೆ ಸ್ಪಟಿಸೋದು ಮಾತ್ರ
ದೇವರೆಲ್ಲರೂ
ಕಣ್ಣು ಮುಚ್ಚಿ ಆಲಿಸೋದು ಮಾತ್ರ
ಯಾಕೆಂದರೆ ? ಇದು
ಅಂತ್ಯ ಯುಗವಂತೆ .. !
ನ್ಯಾಯ ಅನ್ಯಾಯ
ದೇವರೂ ಮಾಡಿದ್ದಾರಂತೆ
ಅರ್ಚಕರೂ ಮಾಡುತ್ತಾರಂತೆ
ಭಕ್ತನಿಗೆ ಮಾತ್ರ
ಅರಿವೇ ಆಗೋದಿಲ್ಲ ..
ದೇವರ ಮುಂದೆ ಏನೆಲ್ಲಾ ಸಂತೆ ..
ಯಾಕೆಂದರೆ ,,,,? ಇದು
ಬಲಿಯುಗವಂತೆ ....
-ಮಾಧವ ಅಂಜಾರು
Comments
Post a Comment