ಕಣ್ಣಂಚಲಿ

ಕಣ್ಣಂಚಲಿ ಬಿಳೋ
ಕಣ್ಣೀರ ಹನಿಗೆ
ಅರಿವಿರದೇ ಇರುವುದೇ
ಇಳಿವಾಗ ಧರೆಗೆ ,

ಕಣ್ಣ ತುಂಬಾ
ಕಣ್ಣೀರು ಇದ್ದರೇ
ಮಿಟುಕಿಸದಿರುವುದೇ
ಕಣ್ಣ ರೆಪ್ಪೆ ಕೊನೆಗೆ ,

ಹೃದಯದ ಹಗುರಕೆ
ಅದೇ ದಾರಿಯು ಕೊನೆಗೆ
ಕಣ್ಣಂಚನ್ನುಜ್ಜಲು
ಕೈ ಮಾತ್ರ ಕೊನೆಗೆ,

ಹೃದಯದ ಅಳುವಿಗೆ
ಕಣ್ಣಿನ ಸಹಾಯ
ಕಣ್ಣೀರ ರಭಸಕೆ
ಕೈ ಮಾಡೋದು ಸಹಾಯ ,

ಸೋಲದಿರು ಎಂದಿಗೂ
ಓ ನನ್ನ ಮನವೇ
ಹೃದಯವ ಭದ್ರಗೊಳಿಸಿ
ನಿನ್ನೊಂದಿಗೆ ಇರುವೆ ,
   - ಮಾಧವ ನಾಯ್ಕ್ ಅಂಜಾರು




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ