Posts

Showing posts from 2014

ನನ್ನ ಮನವೇ

ನನ್ನ ಮನವೇ  ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ನೊಂದ ಹೃದಯಕೆ ನೀ ಬಲವಾಗು ಜಗದಿ ನಡೆವಾಟಕೆ ದನಿಯಾಗು ಸುಖ ಸಂತೋಷದ ಬಾಳಲಿ ನೀನು ಜೇನಿನ ಹನಿಯ ಸವಿಯಾಗು ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ಅಂಧರ ಕಣ್ಣಿಗೆ ಬೆಳಕು ನೀನಾಗು .. ಪ್ರೀತಿ ತೋರೋ ಜನಕೆ ಒಳಿತಾಗು ಬಾಳು ....ಬಲು ನಿಖರ ... ನಿರಾಧಾರ .... ನಿರಾಧಾರ ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ಸ್ನೇಹವ ಬೆಸೆದು ಒಂದಾಗು ನೀ .. ಬಾಳಲಿ ಎಂದಿಗೂ ಸ್ಥಿರವಾಗು ಬಿಸಿಯುಸಿರ ಜೀವಕೆ ತಂಗಾಳಿಯಾಗು ಕರುಣೆಯ ಹೃದಯಕೆ ಸ್ನೇಹಿತನಾಗು ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ಬಾಳು ....ಬಲು ನಿಖರ ... ನಿರಾಧಾರ .... ನಿರಾಧಾರ ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ...                  - ಅಂಜಾರು ಮಾಧವ ನಾಯ್ಕ್

ಏಳು ಸಾಗರದಾಚೆಗೆ

ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ ನೂರಾರು ಆಸೆಗಳಿಗು ನಾ ನಡೆದು ಬಂದ ನಡೆಗೂ ಸಿಗೋದಿಲ್ಲವೇ ಕೊನೆಗೂ ಎನ ಪ್ರೀತಿ ಮಾತಿಗು ಬೆಲೆಯು ಓ ಗೆಳತಿ , ಮರೆಯಬೇಡ ಎನ್ನ ತುಂಬಾ ಪ್ರೀತಿಸುವೆ ನಿನ್ನ ಬಿಸಿಲಲ್ಲೂ ಮರಳಲ್ಲೂ ಅನಿವಾರ್ಯತೆಯ   ಪಯಣ ಆವರಿಸಿತು ಹೃದಯವು ದುಗುಡದ ಭಯವು ಅಲುಗಾಡದೆ ಇರಬಯಸಿದೆ ಪ್ರೀತಿ ಅಕ್ಕರೆಯ ನೆನೆದು ಸವಿಸಕ್ಕರೆಯ ನೀಡಲು ದಿನವೆಲ್ಲಾ ದುಡಿದು ಸಾವಿರ ಕನಸಿನ , ಒಂದು ಅರಮನೆಯ ಕಟ್ಟಲೆಂದು ಇನ್ನಿರುವ ಬದುಕು ಸಂತೋಷವಾಗಿರಲೆಂದು ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ ಓಡೋಡಿ ಬರಲು ಬಯಕೆ , ತಬ್ಬಿ ಕುಣಿಯುವ ಹರುಷಕೆ ಕಾಡು ನೋಡುತ್ತಿರುವೆ ಆ ದಿನವನು ಬೇಗ ನಡೆಯಲಿ ಹರಕೆ ಓ ನನ್ನ ನಲ್ಲೆ ನಾನಿರುವೆ ಇಲ್ಲೆ ನನ ಮಾತು ಕೇಳೆ ... ಮುದ್ದಾಗಿ ನಿನ್ನ ಸದ್ದಾಗದೆ ಬಂದು ಸೇರುವೆ ....  ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ                                   ...

ನಿನ್ನ ಬರುವಿಕೆ

ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಕಾಲುದಾರಿಯ ಸ್ವಚ್ಚವಾಗಿಸಿ ಕಲ್ಲು ಮುಳ್ಳನು ದೂರ ಸರಿಸಿ ಸುಖ ಪಯಣ ಬಯಸುತಿಹೆ ನಿನ್ನ ಬಾಳಲಿ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಕೈ ತುಂಬಾ ಹೂ ಗುಚ್ಛ ಅಂಗಳದಿ ರಂಗೋಲಿ ಎದೆ ತುಂಬಾ ಪ್ರೀತಿ ಭರಿಸಿ ನಿನ್ನ ಸ್ವಾಗತಿಸುವೆ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಮನೆತುಂಬಾ ಸಂತೋಷದ ಕಾಲ್ಗೆಜ್ಜೆ ದನಿಯ ಪಸರಿಸಿ ಎನ್ನ ಒಡಲಲಿ ಸೇರು ಬಾ ಓ ನನ್ನ ಗೆಳತಿ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಹಾಯಾಗಿರಲಿ ನಮ್ಮ ಬದುಕು ನನಸಾಗಲಿ ಕನಸುಗಳು ಸೇರಿ ನಡೆಯೋಣ ಬಾಳರಥದ ದಾರಿಯಲಿ ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ                      - ಅಂಜಾರು ಮಾಧವ ನಾಯ್ಕ್

ಸಾವಿರ ಜನುಮ

ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ ..  ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ  ಗಲ್ಲದ ಮೇಲೆ ಕೈಯನಿಟ್ಟು  ಕೈಯ ತುಂಬಾ ಬಳೆಯ ಧರಿಸಿ  ಪಾತರಗಿತ್ತಿಯ ಚಲನೆ ನಿನ್ನಲಿ  ಹುಬ್ಬನು ಏರಿಸಿ ನೋಡುವ ರೀತಿ  ನಿನ್ನ ನೋಟಕೆ ಬಲಿಯಾದೆ ಓ ಪ್ರಿಯೇ  ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ ..  ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ  ಹಗಲಿರುಳು ನಿನ್ನದೇ ನೆನಪು  ಹೃದಯದಿ ಈ ಸ್ನೇಹ ನಮಗೂ  ಸುಖವಾಗಲಿ ನಮ್ಮಿ ಮಿಲನ  ಬಾಳೊಂದು ಸುಂದರ ಬದುಕು  ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ ..  ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ                        - ಅಂಜಾರು ಮಾಧವ ನಾಯ್ಕ್ 

ಹೇ ದೇವನೇ ....

ವಜ್ರ ವೈಡುರ್ಯವಿಲ್ಲ ,ನನ್ನಲಿ ನಿನಗೆ ಕಿರೀಟ ಧಾರಣೆ ಮಾಡಲು ಘಂಟೆ ತಂಬೂರಿ ಇಲ್ಲ , ನನ್ನಲಿ ನಿನ್ನ ಪೂಜೆ ಮಾಡಲು ಹೂ ಸಿಂಗಾರಗಳಿಲ್ಲ , ನನ್ನಲಿ ನಿನ್ನ ಸಿಂಗಾರ ಮಾಡಲು ಜೇನು ತುಪ್ಪದ ಹನಿ ಇಲ್ಲ, ನನ್ನಲಿ ನಿನಗೆ ಭೋಗ ನೀಡಲು ಪಲ್ಲಕಿ ತೋರಣ ಇಲ್ಲ , ನನ್ನಲಿ ನಿನ್ನ ಹೊತ್ತು ನಡೆಯಲು                     - ಅಂಜಾರು ಮಾಧವ ನಾಯ್ಕ್

ನಾಚಿಕೆ ದಾಯೆ..?

ಮಲ್ಲಿಗೆ ಪೂವೇ... ಈಯೇ ನಿಕ್ಕ್ ಈತ್ ನಾಚಿಕೆ ದಾಯೆ .. ಏತೊಂಜಿ ನಿನ್ನ ಮಾಯೇ ... ಎನ್ನ ತೆಲಿಕೆ ಪೂರ ಈಯೆ ..! ಪೊರ್ಲು, ಕೇದಗೆ ಪೂವೇ ಈಯೆ .. ನಿನ್ನ ಮೋಕೆ ಪರಿಮಳದ  ಮಾಯೆ ತೂವಂದೆ ಪೋಪ ಈಯೆ ನಿಕ್ಕ್ ಈತ್ ನಾಚಿಕೆ ದಾಯೆ .. ಮಲ್ಲಿಗೆ ಪೂವೇ... ಈಯೇ ನಿಕ್ಕ್ ಈತ್ ನಾಚಿಕೆ ದಾಯೆ .. ಏತೊಂಜಿ ನಿನ್ನ ಮಾಯೇ ... ಎನ್ನ ತೆಲಿಕೆ ಪೂರ ಈಯೆ ..! ನಿನ್ನ ಮಿತ್ತೆಂಕ್ ಮೋಕೆ ದಾಯೆ ಎನ ಉಡಲ್ ಪೂರ ಈಯೆ .. ಒರ ತೂದ್ ಪೋಲ ಈಯೆ ನಿಕ್ಕ್ ಈತ್ ನಾಚಿಕೆ ದಾಯೆ .. ಮಲ್ಲಿಗೆ ಪೂವೇ... ಈಯೇ ನಿಕ್ಕ್ ಈತ್ ನಾಚಿಕೆ ದಾಯೆ .. ಏತೊಂಜಿ ನಿನ್ನ ಮಾಯೇ ... ಎನ್ನ ತೆಲಿಕೆ ಪೂರ ಈಯೆ ..!         -ಅಂಜಾರು ಮಾಧವ ನಾಯ್ಕ್

ಪುದರ್

ಮೋಕೆದುಡಲ್ ನಿಕ್ಕಾದೆ ಯಾನುಲ್ಲೆ ಪೂ ಮನಸ್ ಕಾತೊಂದುಲ್ಲೆ ನಿನ್ನ ಮೋಹ ಈ ಎನ್ನ ಬಾಳ್ ಮೋಕೆದ ಬಳ್ಳಿ ನಿನ್ನ ನೆಂಪು ತಪ್ಪಂದಿ ಪಾತೆರ ಸಂಸಾರೋದ ಕಣ್ಣ್ ಮೋಕೆದ ಸೆಲೆ

ಕಣ್ಣ ತುಂಬಾ ನಿನ್ನ ನೋಟ...

ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ನಿನ್ನೀ ತುಳುಕು ನಡೆಯು.....  ಎನ್ನ... ಹೃದಯ ಸ್ಪರ್ಶ ಮಾಡುತಿದೆ.... ನಿನ್ನ ರೆಪ್ಪೆ ನೋಟ ಅಂದ ... ಉಸಿರ ಚಲನೆ ಆಗುತಿದೆ .. ಕಣ್ಣ ತುಂಬಾ ನಿನ್ನ ನೋಟ... ರಾತ್ರಿ ಹಗಲೆಲ್ಲಾ ಕಾಡುತಿದೆ .. ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ತಬ್ಬಿಕೋ ಬಾ...  ಮುದ್ದಿಸೂ ನನ್ನ ...  ಈ ಜೀವ ನಿನಗಾಗಿ ಕಾಯುತಿದೆ.....  ಒಪ್ಪಿಕೋ ಗೆಳತೀ ... ನನ್ನೀ ಪ್ರೀತಿಯ ...  ಅಪ್ಪಿಕೋ ಗೆಳತೀ ... ಈ ಪ್ರೇಮಿಯ ..  ಮನ ನೋಯುವುದು  .. ನೀ ಒಲ್ಲೆ ಅಂದರೇ ......  ತಿಳಿದು ಸೇರಿಕೋ ... ಎನ ಬಂಗಾರ ...  ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ಪುಟ್ಟ  ಹೃದಯ...  ತಡೆಯಲಾರದು... ಸ್ವಚ್ಛ ಮನಸು .... ತಾಳಲಾರದು .. ನಿನ್ನ ಮುದ್ದು ಮಾಡೋ ... ಆಸೆ ಎನಗೆ .. ಮುತ್ತಾಗಿ ಬಾ ... ಏಳು ಜನುಮಕೂ .. ನಿನ್ನ ಬಿಡದೇ ... ಸುತ್ತಿ ಕಟ್ಟಿ... ಮುದ್ದಾಡಿ ಪಾಲಿಸುವೆ ... ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿ...

"ಎನ್ನ ಉಡಲ್"

ಲಲ ಲಾಲಲಾ ... ಲಲ ಲಾಲಲಾ... ಲಾಲಾ ಲಾಲ ಲಾಲ ಲಾಲಲ ........ ಎನ್ನ  ಉಡಲ್ ಗ್ ..... ನಿನ್ನ ಉಡಲ್ ಲಾ ...... ಸೇರ್ದ್  ಒಂಜಾಂಡ್ ನಮ್ಮ ಜೀವಲಾ ನಿನ್ನ ಮೋಕೆಲಾ ... ನಿನ್ನ ತೆಲಿಕೆಲಾ ..... ಜಾಸ್ತಿ    ಮಲ್ತ್ಂಡೆನ್ನ  ಮೋಹಲಾ .... ನಿಕ್ಕಾದೆ ಯಾನುಲ್ಲೆ  .... ಎನ ಜೀವನೊಡೀ  ಮಲ್ಲೆ.... ನಿನ್ನ ಮೊಕೆದ ಬಲೊಟ್ ..... ಯಾನ್ ಬದುಕೊಂದುಲ್ಲೆ ... ಬಲ ಎನ್ನ ಕೈತಲ್ ... ಈ  ಜೀವ ಮೀಸಲ್ .... ನಿಕ್ಕಾದೆ ಯಾನುಲ್ಲೆ  .... ಎನ ಜೀವನೊಡೀ  ಮಲ್ಲೆ.... ಎನ್ನ  ಉಡಲ್ ಗ್ ..... ನಿನ್ನ ಉಡಲ್ ಲಾ ...... ಸೇರ್ದ್  ಒಂಜಾಂಡ್ ನಮ್ಮ ಜೀವಲಾ ನಿನ್ನ ಮೋಕೆಲಾ ... ನಿನ್ನ ತೆಲಿಕೆಲಾ ..... ಜಾಸ್ತಿ   ಮಲ್ತ್ಂಡೆನ್ನ  ಮೋಹಲಾ .... ರಾತ್ರೆ ಪಗೆಲ್ ನಿನ್ನನೆ ನೆಂಪು .... ಕೊರ್ಪುಂಡೆನ್ನ   ಉಡಲ್  ಗ್  ಇಂಪು ... ನಿನನೇ  ನೆಂಪು  ಮಲ್ತ್o ಡ ... ಎನ  ಜೀವೊಡೇರುಂಡು ಕಂಪು ... ಓ ಎನ್ನ ಬಂಗಾರಿ .... ಈ ಎನ್ನ   ಐಸಿರಿ .... ನಿನ ಸೇರ್ದ್ ಬದ್ಕಾಂಡ್ , ಎನ ಬಾಳ್ ಬಂಗಾರ್... ಎನ್ನ  ಉಡಲ್ ಗ್ ..... ನಿನ್ನ ಉಡಲ್ ಲಾ ...... ಸೆರ್ ದ್  ಒಂಜಾಂಡ್ ನಮ್ಮ ಜೀವಲಾ ನಿನ್ನ ಮೊಕೆಲಾ ... ನಿನ್ನ ತೆಲಿಕೆಲಾ ..... ಜಾಸ್ತಿ   ...

ಎನ್ನ ಉಸಿರಿನ ಅಮ್ಮ

ಎನ್ನ ಉಸಿರಿನ ಆರಂಭ ನಿನ್ನಿಂದಲೇ ಅಮ್ಮ ಲೋಕವ ತೋರಿಸಿದ ದೇವತೆಯೇ ನೀನಮ್ಮ ಭೂಸ್ಪರ್ಶ ಮಾಡಿಸಿ ಬಲಪಡಿಸಿದೆಯಮ್ಮ ಪ್ರಾಪಂಚ ಬುದ್ದಿಯ ಕಲಿಸುವುದೇ ಅಮ್ಮ ಎದ್ದರೂ....... ಬಿದ್ದರೂ... ಅತ್ತರೂ .. ನೋವಾದರೂ ಹೂವಂತೆ ನೋಡುವೆ , ಬಂಗಾರ ಎನ್ನಮ್ಮ ... ಮನೋ ಧೈರ್ಯ , ಸಾಧನೆ ಪ್ರೋತ್ಸಾಹ ನಿನದಮ್ಮ ಕಷ್ಟವಿದ್ದರೂ ಸಂತೋಷದಿ ಬಾಳ ಹೇಳಿದ ಕೀರ್ತಿ ನಿನದಮ್ಮ ಎಲ್ಲಾ ಮನೋವೆದನೆಗೆ ಬುದ್ಧಿ "ಕಲ್ಯಾಣಿ" ನೀನಮ್ಮ ಕೋಪದಿ ಮಾಡಿದ ತಪ್ಪು ತಿದ್ದಿದ ಕೀರ್ತಿ ನಿನದಮ್ಮ .. ಬಾಳಲಿ ಮುನ್ನುಗ್ಗಲು ನೀನು ನನಗೆ ಬೇಕಮ್ಮ ... ನಿನ್ನ ಬಿಟ್ಟು ದೂರವಿರಲು ನನಗಾಗೋದಿಲ್ಲಮ್ಮ ... ನಿನ್ನ ಕೊಂಡಾಡಲು ಎನ ನಾಲಗೆ ಸಾಲದಮ್ಮ ನೀನು ಕೊಟ್ಟ ಜನ್ಮಕೆ "ಮಾಧವ" ಎಂದಾಗಿರುವೆನಮ್ಮ ಅಮ್ಮ ನಿನ್ನ ಬಾಳು ಸುಖವಾಗಿರಲಮ್ಮ .... ಆಶೀರ್ವಾದ ನನ್ನೊಂದಿಗೆ ಸದಾ ಇರಲಮ್ಮ ....                      - ಅಂಜಾರು ಮಾಧವ ನಾಯ್ಕ್

ಹೇ ಚೆಂದುಳ್ಳಿ .....

ತನನಾನ ... ನಾನ ನನ ತಾನನ ತನ ನಾನ ತಾನ ನನ....  ತನನನ .... ಹುಡ್ಗ : ಹೇ ಚೆಂದುಳ್ಳಿ .....           ನಿನ್ನ ಪ್ರೀತಿ ಮಾಡಲೆಂದೆ ಜನಿಸಿ ಬಂದೆನಾ ...?           ನನ ಪ್ರೀತಿ ನಿನಗಾಗಿಯೆ ನಿನ್ನ ಬಿಡೆನಾ ..! ಹುಡ್ಗಿ : ಹೇ ಹೋಗಯ್ಯ .....           ನಿನ್ನ ಕಾಟ ತಡೆಯದಿರೆ  ಬೇಸತ್ತು ಹೋದೆನಾ ..?           ನಿನ್ನ ಮಾಟಮಾತಿಗೆ ಸಿಕ್ಕಿ ಬೀಳೆನಾ ...!           ಏಟಿಗಾಗಿ ಕಾಯುತ್ತಿರು ಸ್ವಲ್ಪ ನಿಲ್ಲು ನೀ ....           ಬೇಟೆ ಮಾಡಿ ಮುಗಿಸಿಬಿಡುವೆ  ಓಡಿ  ಹೋಗು ನೀ .. ಹುಡ್ಗ : ಹೇ ಹೂ ಬಳ್ಳಿ ....           ಮೋಸಮಾಡಲಾರೆ , ನಿನ್ನ ಮೇಲೆತ್ತಿ ಕುಣಿವೆ ನಾ ...!           ಹೃದಯದಲ್ಲಿ ಬಂದು ಸೇರು ಈ ಪ್ರೇಮಗಾರನ ...!           ಓ ಮೊಗ್ಗು ಮಲ್ಲಿಗೆ ... ಬೇಗ ಬಾರೆ ಇಲ್ಲಿಗೆ ...( ನಾ ನಿನ್ನ ಪ್ರೇಮಿ ಕಣೆ...   ) ಹುಡ್ಗಿ : ಅಯ್ಯಯ್ಯೋ .............. ಛೆ ...           ಪೀಸು ಪೀಸು ಮಾಡಿ ಬಿಡುವೆ ನನ್ನ ತೊಟ್ಟರೆ ...  ...

ಲಕ್ಕ್ ಲೆಕ್ಕ ಲಕ್ಕಾ ಕ....

hello mike testing .... hello one, two.. ಚೆಕ್...  ಚೆಕ್...  ಚೆಕ್ ...  hello one,  two...hello one,  two three, four.... hello one,  two...hello one,  two three, four.... two note melody on the dance floor... feel the rhythm shake it once more two note melody on the dance floor... feel the rhthem shake it once more ಲಕ್ಕ್ ಲೆಕ್ಕ ಲಕ್ಕಾ ಕ ... ಲಕ್ ದ್  ಕುಲ್ಲೇ ಕಾ ...  ಟೀವಿದೆದುರ್ ಕುಲ್ಲುಂಡಾ ಲೋಕ ಪೂರ ಮಾಯಕ ...  ಲಕ್ಕ್ ಲೆಕ್ಕ ಲಕ್ಕಾ ಕ ... ಲಕ್ ದ್  ಕುಲ್ಲೇ ಕಾ ...  ಟೀವಿದೆದುರ್ ಕುಲ್ಲುಂಡಾ ಲೋಕ ಪೂರ ಮಾಯಕ ...  ಇಜ್ಜಿ ಅಕ್ಕ, ಅಂದ್ ಅಕ್ಕ ,ಕಾಸಾಂಡ 'ಮೇನಕ '... ಲಕ್ಕ್ ಲೆಕ್ಕ ಲಕ್ಕಾ ಕ ... ಲಕ್ ದ್  ಕುಲ್ಲೇ ಕಾ ...  ಟೀವಿದೆದುರ್ ಕುಲ್ಲುಂಡಾ ಲೋಕ ಪೂರ ಮಾಯಕ ...  ಇಜ್ಜಿ ಅಕ್ಕ ಅಂದ್ ಅಕ್ಕ ಕಾಸಾಂಡ 'ಮೇನಕ '...  ಬಲ ಬಲ.... buffalo ... ದ್ರಾಕ್ಷಿ ಬಾರಿ ಪುಳಿ ...  ತೆಲಿಪಡೆ ಪ್ಲೀಸ್ ... ದಾದಂಡ ಎಡ್ಡೇ  ಮಲ್ಪುಲೆ ..  ದೇವೆರ್ ಕೊರ್ತಿ ಪೊರ್ತು ಕಮ್ಮಿ ... ಬೇಗ ಮಿತ್ ಏರ್ಲೇ ....  ಇಜಾಂಡ ಅವ್ವೆ ದೇವೆರ್ ದೀಪೆರ್ ಮೂಂಕುಡ್ ಪರ್ತಿ ....  ...

'ಮಹಾಗಣಪತಿ'

'ಓಂ ಶ್ರೀ ಮಹಗಣೇಶಾಯ ನಮಃ ' ಬನ್ನಿರೆಲ್ಲ .. ಮಹಾಗಣಪತಿಯ ಪೂಜೆಯ ಮಾಡೋಣ .. ಬನ್ನಿರೆಲ್ಲ , ಭಕುತರು ಸೇರಿ ಹರುಷದಿ ನಲಿಯೋಣ ...।।೧।। ಚೌತಿಯ ದಿನದಲಿ ಏಕದಂತನ ಸೇವೆಯ ಮಾಡೋಣ ಫಲಪುಷ್ಪಗಳ ಸಿಂಗರಿಸಿ ಆರತಿ ಎತ್ತೋಣ ..।।೧।। ಲೋಕವ ಕಾಯುವ ಮೂಷಿಕವಾಹನಗೆ ಜೈಕಾರ ಹಾಕೋಣ ಭಕ್ತಿಯಿಂದ ಚರಣಕೆ ತಲೆಬಾಗಿ ನಮಿಸೋಣ ..।।೧।। ಎಲ್ಲರು ಸೇರಿ ಲೋಕಕಲ್ಯಾಣಕ್ಕೆ ಪ್ರಾರ್ಥನೆ ಮಾಡೋಣ ಈ ಲೋಕಕೆ ಬರೋ ವಿಘ್ನಗಳ ದೂರ ಮಾಡೋಣ ..।।೧।। ಬಾಳಿಗೆ ಸುಖ ಸಂತೋಷವ ಬೇಡಿ ಪಡೆಯೋಣ ವಿಘ್ನ ವಿನಾಶಕನ ಕೃಪೆಗೆ ಪಾತ್ರರಾಗೋಣ ..।।೧।। ಬನ್ನಿರೆಲ್ಲ .. ಮಹಾಗಣಪತಿಯ ಪೂಜೆಯ ಮಾಡೋಣ .. ಬನ್ನಿರೆಲ್ಲ , ಭಕುತರು ಸೇರಿ ಹರುಷದಿ ನಲಿಯೋಣ ...।।೧।। ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ ಮೋರ್ಯ ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ ಮೋರ್ಯ                                 - ಅಂಜಾರು ಮಾಧವ ನಾಯ್ಕ್

'ಏತೊಂಜಿ ಪೊರ್ಲು'

ಏತೊಂಜಿ ಪೊರ್ಲುಯೆ ನಮ  ತುಳುನಾಡ್ ಯೆ ಪೊರ್ತು ಯಾವಂದ್ ಪನೆರೆ ನಮ ಸಾರ ಕೀರ್ತಿಯೆ ।।೧।। ಮೊಕೆದ ನಲ್ಕೆ ಬಾನೊದ ತೆಲಿಕೆ ಸೇರ್ದ್ ನಡಪುನ ನಮ್ಮಕ್ಲೆ  ಜಾಗೆ ।।೧।। ಪೂ ಪಿಂಗಾರೊದ ಸ್ವಾಗತ ಗೋಪುರ ಮಾತೆರೆಗ್ಲ ಕೊರ್ಪ ನಮ ಪೂರ ಪೂರ ।।೧।। ಬತ್ತಿಂಚಿ ಬಿನ್ನೆರೇ ಸ್ಥಾನಮಾನದ ... ಗೌರವ ಗೊಬ್ಬು ನಮ್ಮುಡಲ್ದ ಗೊಬ್ಬು ।।೧।। ಈರ್ಲಾ ಬಲೆ ನಮ್ಮಕ್ಲೆ ಒಟ್ಟುಗೆ ನಲಿತೊಂದು ಉಪ್ಪುಲೆ ಜೋಕ್ಲೆನ ಒಟ್ಟುಗೆ ।।೧।। ಜೋಕ್ಲಾದ್ ನಮ ಒಂಜಾದ್ ಉಪ್ಪುವ ತುಳುವಪ್ಪೆ ಪುದಾರ್ನ್ ಉಡಲೊರ್ಮೆ ಪನ್ಪ .. ।।೧।। ಸುಗಿಪುಗ ಅಮ್ಮನ ಸಾರ ಮೋಕೆನ್ ಒಂಜಾದ್ ಕೈ  ಪತ್ ದ್ ಬಲೆ ನಮ ನಲಿಪುಗ ।।೧।।                    - ಅಂಜಾರು ಮಾಧವ ನಾಯ್ಕ್

ವೀರಭದ್ರನೆ

ಹರಸು ನೀ ಪರಮ ಪಾವನ ವೀರಭದ್ರನೆ ಅಡಕವಾಗಲಿ ನಿನ್ನ ಪಾದಕೆ..  ಎನ್ನ ಜೀವನ ಲೀನವಾಗಲಿ ಲೋಕಜನರ..  ಕಷ್ಟ ಕಾರ್ಪಣ್ಯವು ಜಯಗಳಿಸಲಿ ಜೀವನಾಟದ..  ನೋವು ನಲಿವು ಸದಾ ನಿನ್ನ ಪೂಜಿಸುವೆ ... ಭಕ್ತಿ ಪೂರ್ವದಿ , ನೀಡೆನಗೆ ಸೌಭಾಗ್ಯ ಓ ದೇವನೇ ಇಷ್ಟಾರ್ಥವ ಸಿದ್ದಿಸುವ ಲೋಕನಾಥನೆ ಶಕ್ತಿ ನೀಡನಗೆ ಬಾಳಲು ವೀರಭದ್ರನೆ

'ಕಲಾಂಜಲಿ '

ಕಲೆಯ ಸಾತ್ವಿಕತೆ ಹೊಂದಿ .. ಜನರ ಮನ ಸೇರಿಸುವ ಗೀತೆ 'ಕಲಾಂಜಲಿ ' ಕಲಾಕಾರನ ಕಲೆಯು ಹೊಮ್ಮಲು ಸಕಲ ಸಾಕಾರ ಕಲಾ ಸ್ಫೂರ್ತಿ 'ಕಲಾಂಜಲಿ ' ಬನ್ನಿ ಕಲಾ ರಸಿಕರೇ,ಇದುವೇ ನಿಮ್ಮ ಪ್ರತಿಭೆಗೆ ವೇದಿಕೆ 'ಕಲಾಂಜಲಿ ' ಹೊಸತು ಉತ್ಸಾಹ ನಿಮ್ಮದು ಆ  ಉತ್ಸಾಹದ ಉತ್ಸವ ಮಾಡುವುದೆ 'ಕಲಾಂಜಲಿ '                      - ಅಂಜಾರು ಮಾಧವ ನಾಯ್ಕ್

'ವಿಘ್ನ ವಿನಾಶಕ'

ಓಂ ಶ್ರೀ ಮಹಾಗನಪತಯೇ  ನಮಃ ।।೩।। ವಿಘ್ನ ವಿನಾಶಕ..  ನಮ್ಮಯ  ರಕ್ಷಕ... ಭಕುತರ ಪಾಲಿಸೋ ವಿನಾಯಕ.... ।।೧।। ಮೊದಲ ಪೂಜೆಯ ಪಡೆಯುವ ದೇವನೇ... ಸಿದ್ಧಿ -ಬುದ್ಧಿ  ಪ್ರದಾಯಕ ಗಣನೇ...  ।।೧।। ರಕ್ತಚಂದನದಲಿ ಅಭಿಷೇಕ ಮಾಡುತ.... ಚೌತಿಯ ದಿನವಿಂದು ನಿನ್ನ ಪೂಜೆ ಮಾಡುವೆ...  ।।೧।। ಮೋದಕಪ್ರಿಯನೇ...   ಗಜಮುಖ ದೇವನೆ.... ಲಡ್ಡು,  ಗರಿಕೆ  ಪ್ರಿಯ  ಮೂಷಿಕವಾಹನನೆ ।।೧।। ಶಿವ ಪಾರ್ವತಿಯರ ಪ್ರಿಯ ಪುತ್ರನೇ .. ನಂಬಿದ ಭಕ್ತಗೆ ಜಯನೀಡೋ ಗಣಪನೇ .. ।।೧।। ರಕ್ಷಿಸೆನ್ನ ಗಜವದನ....  ಏಕದಂತನೇ .. ಶಕ್ತಿ ನೀಡೆನಗೆ ಹೇ ಲಂಬೋದರನೇ.. ।।೧।।                                     -ಅಂಜಾರು ಮಾಧವ ನಾಯ್ಕ್

ಓಂ ಗಂ ಗಣಪತಯೇ ನಮಃ

ಓಂ ಗಂ ಗಣಪತಯೇ ನಮಃ ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ... ಜೈ ಗಣೇಶ ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ  ಎನ್ನಿರೋ ಭಕ್ತಿ ಭಾವದಿಂದ ಅವನ ನಾಮ ಸ್ಮರಣೆ ಮಾಡಿರೋ ..।।೧।। ಬತ್ತಿ ಕರ್ಪೂರ ದೀಪ ಭಕ್ತಿಯಿಂದ ಬೆಳಗಿರೋ .. ನಿತ್ಯ ವಿನಾಯಕನ ಕೃಪೆಗೆ ಪಾತ್ರರಾಗಿರೋ ..  ।।೧।। ಫಲ ಪುಷ್ಪಗಳಿಂದ ಅಲಂಕಾರ ಮಾಡಿರೋ .. ಮನದಿ ಬರೋ ಅಹಂಕಾರ ದೂರ ಮಾಡಿರೋ ..।।೧।। ಚೌತಿಯ ದಿನವಿಂದು ನಕ್ಕು ನಲಿಯಿರೋ ... ಘಂಟಾ ಘೋಷದಿ ಅವನ ಕೊಂಡಾಡಿರೋ ...।।೧।। ಶಿವ ಪಾರ್ವತಿ ಪುತ್ರನ ನಿತ್ಯ ನೆನೆಯಿರೋ ... ವಿದ್ಯೆ ಬುದ್ಧಿ  ಗಳಿಸಿ ನೀವು ಗಣ್ಯರಾಗಿರೋ ..।।೧।। ವಿಘ್ನವಿನಾಶಕಗೆ ಹೃದಯದಲ್ಲಿ ಸ್ಮರಿಸಿರೋ .. ಸಕಲ ಕಷ್ಟ ಕಾರ್ಪಣ್ಯವ  ದೂರ ಮಾಡಿರೋ ..।।೧।। ಬಂಧು ಬಳಗ ಎಲ್ಲ ಸೇರಿ ಸಿಹಿಯ ಹಂಚಿರೋ ದೇವಪ್ರಸಾದ ಸವಿದು ಹರುಷರಾಗಿರೋ.. ।।೧।। ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ..  ಜೈ ಗಣೇಶ ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ  ಮೋರ್ಯ                            - ಅಂಜಾರು ಮಾಧವ ನಾಯ್ಕ್

'ನಮ್ಮ ಸಂಸ್ಕೃತಿ '

ತುಳುವೆರ್ ನಮ .. ತೆರಿಯೋನ್ಗ ನಮ  ಸಂಸ್ಕೃತಿದ  ನಾಡ್ ಒರಿಪಾಗ ನಮ ।।೧।। ಪರಶುರಾಮ ದೇವೆರ್ ಸೃಷ್ಟಿ ಮಲ್ತಿ ಭೂಮಿ ತರೆಬಗ್ಗಾದ್ ನಮಿಪುಗ ಈ ಪುಣ್ಯ  ಮಣ್ಣ್ ಗ್ ।।೧।। ಸತ್ಯದ ಜೋಕುಲೆನ ಈ ನಮ್ಮ ನಾಡ್ ಸಾರ ವರ್ಸೊದ  ಇತಿಹಾಸದ ಬೀಡ್ ।।೧।। ಮಾತ ಜಾತಿ ಬಾಂಧವೆರೆ ಜನ್ಮದ ಕೀರ್ತಿ ತುಳುವಪ್ಪೆ ಜೋಕುಲು ನಮ ಸುಗಿಪುಗ ಪೂರ್ತಿ ।।೧।। ಯಕ್ಷಗಾನದ ಗೊಬ್ಬು ನಮ್ಮಕ್ಲೆ ಊರುಡು ತಾಸೆ ಚೆಂಡೆಗ್ ಪಿಲಿ ನಲ್ಪುವ ಒಟ್ಟುಗು ।।೧।। ಜೈನೆರ್ ನೆಲೆಯಾಯಿ ಪಡ್ಡಾಯಿ ಊರು ಕಾರ್ಕಳ , ಬೆದ್ರೆ , ವೇಣೂರ್ದ ಬೀಡ್ ।।೧।। ಶ್ರೀ ಕೃಷ್ಣ ದೇವೆರೇನ್  ಕಡಲ್ಡ್ ಕೊನೊತು ನೆಲೆಮಲ್ತಿನಾರ್  ಮದ್ವಾಚಾರ್ಯೆರ್ ।।೧।। ನಾಗದೆವರೆ ತನುಪರಂದ್ ಸೆವೆನ್.. ಕೊರ್ಪ ಪುಣ್ಯ ಪ್ರಸಾದೊನ್ ದೆತೊಂದ್ ಬರ್ಪ ।।೧।। ಗದ್ದುಗೆ ಅಮ್ಮಗ್ ಗೊಂದೊಲು  ಸೇವೆನ್ ಕೊರ್ಪ .. ಮಾತೆರ್ಲ ನಲಿತೊಂದು ಕೊಂಡಾಟ ಮಲ್ಪುವ .. ।।೧।। ಅತ್ತೂರ  ಜಾತ್ರೆಡ್ ಇಷ್ಟಾರ್ಥ ನಟ್ಟುವ .. ಜಾತಿ ಭೇದ ದಾಂತೆ ಒಂಜಾದ್ ಉಪ್ಪುವ .. ।।೧।। ದರ್ಗಾ ಮಸೀದಿ  ಸಂಘ ಮಿತ್ರೆರೆ ಪ್ರಾರ್ಥನೆ ಮಲ್ತೊಂದ್ ಇಪ್ಪುನ ಈ ಪುಣ್ಯ ಜಾಗ .. ।।೧।।                    -ಅಂಜಾರು ಮಾಧವ ನಾಯ್ಕ್ ...

'ಶಿವ ದೇವ 'ಸ್ತುತಿ

ನಾ ನಿನ್ನ ಧ್ಯಾನದೊಳು ಗಂಗಾಧರನೇ ... ಸಲಹೆನ್ನ ಲೋಕದಿ ಶಿವಶಂಕರನೇ ನಾ ನಿನ್ನ ಚರಣಕೆ ಶಿರಬಾಗಿ ಎರಗುವೇ ಸ್ವಾಮೀ...  ಕರುಣೆಯ ತೋರೆನ್ನ ಭಕುತಿಗೆ ... ಈ ಎನ್ನ ಜೀವವು ನಿನ್ನ ಸೇವೆ ಮಾಡಲು ಪ್ರತಿ ನಿತ್ಯ ಪೂಜಿಪೆ, ಪಾದ ಪೂಜೆ ಮಾಡುವೆ ಈಶ್ವರ , ಮುರುಡೇಶ್ವರ  ... ಕೈ ಬಿಡದಿರೆನ್ನ ಕರುಣಾ ಸಾಗರ ... ಸಾಸಿರ ನಾಮದ ನೀಲ ಕಂಠನೇ .. ಸ್ತುತಿಸಲೆನ್ನ ನಾಲಗೆ ನಿನ್ನ ನಾಮ ಹರನೇ ಜಯದೇವ ಜಯದೇವ ಜಯಮಹಾದೇವ ಜಯದೇವ ಜಯದೇವ ಜಯಮಹಾದೇವ                - ಅಂಜಾರು ಮಾಧವ ನಾಯ್ಕ್

ಕಾಲೇಜು ಲೈಫು

ಕಾಲೇಜು ಹೋಗಲು ಸಂತೋಷವೆಲ್ಲಾ ಪಾಠ ಕೇಳಲು ಉಲ್ಲಾಸವಿಲ್ಲಾ ಸಿನೆಮಾ ನೋಡಲು ಸೇರಿದೆವೆಲ್ಲಾ ನಮ್ಮಿ ಕಾಲೇಜು ಹುಡುಗರೆಲ್ಲಾ  .... ದೂರದಿ ಕಾಣೋ ಟೀನೇಜು ಹುಡುಗಿಯ ಸೀಟಿ ಹೊಡೆದು ಕರೆದೆವೆಲ್ಲಾ ... ಹತ್ತಿರ ಬಂದು ಕೆಂಪು ಮುಖದಿ ಕ್ಯಾಕರಿಸಿ ಉಗುಳಿ ಹೋದಳಲ್ಲಾ .... ಗುಂಪು ಹುಡುಗರು ನೋಡಿ ನಗಲು ಚೆಂದುಳ್ಳಿ ಅವಳು ತಿರುಗಿ ಹೋಗಲು ಹಿಂಬಾಲಿಸಿ ಹೋದರು ತರುಣರೆಲ್ಲಾ   ತಿರುಗೇ ಬಿಟ್ಟಳು ನಮ್ ಸೈಡೆಲ್ಲಾ ... ಅಯ್ಯೋ ...! ಎಂದು ಕಾಲ್ಕೆರೆದವಳು ... ಎದ್ದು ಬಿದ್ದು ಓಡೋಡಿ ಹೋದರು .. ತರುಣರ ಗುಂಪು ಚದುರಿ ಹೋದರು ಕ್ಷಣದಿ ಬಂದು ಸೇರಿದರೆಲ್ಲಾ ... ಪ್ರಾಂಶುಪಾಲರು ಬಂದೇ ಬಿಟ್ರು ಆಪೀಸಿಗೆ ಕೆಲವರ ಕರೆದೇ ಬಿಟ್ರು ಅಪ್ಪ ಅಮ್ಮಗೆ ಹೊರೆ ಅಂದೇ ಬಿಟ್ರು ಕೊರೆದು ಕೊರೆದು ಬಿಟ್ಟರಲ್ಲಾ ... ಮನೆಗೆ ವಿಷ್ಯ ತಿಳಿಯಿತಲ್ಲಾ ಬೈಗುಳ ಸುರಿಮಳೆ ಹರಿಯಿತಲ್ಲಾ ಪಾಕೆಟು ಮನಿ ಇಲ್ಲವೇ ಇಲ್ಲಾ ಕಾಲೇಜು ಹೋಗಲು ಸಂತೋಷವೇ ಇಲ್ಲಾ ...:)                             - ಅಂಜಾರು ಮಾಧವ ನಾಯ್ಕ್ 

' ತುಳು - ಸಾಗರ '

ನದಿಯು  ಸಾಗರವನೆ  ಸೇರಿತು 'ಸಾಗರ'  ತುಳುಜನರ ಸೇರಿಸಿತು ಪಟ್ಟಣಗಳ  ನಡುವೆ ನಮ್ಮೂರ ಬಂಡಿ ಸಾಗುತಿದೆ ತುಳು ಸೇವೆಗೆ ಎಲ್ಲರ ತುಂಬಿ ಅದೆಷ್ಟೋ ವರುಷಗಳ ಇತಿಹಾಸ ಇದಕೆ ಓಗೊಟ್ಟು ಬರುವುದು ನಮ್ಮ ಪ್ರತಿ ಕರೆಗೆ ಸಾಗರ ಮನದ ಈ 'ಸಾಗರ ಸಾರಿಗೆ ' ತುಳುವನಾಡ  ಜನಸೇವೆಗೆ ಗೆಲ್ಗೆ ಸಾಗರವು  'ಮಹಾಸಾಗರ' ವಾಗಲಿ ಶುಭಹಾರೈಕೆ ಸಹಸ್ರ ಸಾವಿರವಾಗಲಿ                  - ಅಂಜಾರು ಮಾಧವ ನಾಯ್ಕ್

'ನಿನ್ನ ಕಣ್ಣ ನೋಟ'

ನಿನ್ನ ಕಣ್ಣ ನೋಟ ಹೃದಯ ಬಡಿತದ ಓಟ ಹೆಚ್ಚು ಮಾಡಲು ಆಸೆ ಎನಗೆ ನಿನ್ನ ಮುದ್ದಾಟ ಕಂದನ ಹೋಲುವ ನಿನ್ನಯ ಮನಸು ತೀರಿಸಲಾಗದೆ ಆ ಋಣವ ಚಡಪಡಿಸಿ ಕಾಯುತಿದೆ ನೀ ಬಾಳಿಗೆ ಬರೋ ಕ್ಷಣ ..! ರಕ್ತ ಕಣವು ನಿನ್ನ ಕಾಯಲು ಮೈ ಬಿಸಿ ಏರುತ ಹೋಗಲು ಉಸಿರ ವೇಗ ದೂಡುತಿದೆ ಕೂಗಿ ಕರೆಯೋದು ಎನ್ನ ಒಡಲು ನೀ ಬೇಗನೆ ಬಂದು ಸೇರೆನ್ನ ..! ಬಯಲು ಸೀಮೆಯ ಮರದ ಕೆಳಗೆ ತಂಗಾಳಿ ಸವಿದಂತಿದೆ ನಿನ್ನ ಮಾತು ದೂರದಿ ಕಂಗೊಳಿಸುವ ನಿನ್ನ ಕಣ್ಣು ಸೆಳೆಯುತಿದೆನ್ನ ಉಯ್ಯಾಲೆ ಆಟಕೆ ನೀಲಾಕಾಶದಲಿ ನಕ್ಷತ್ರವ ನೋಡಿ ನಗುವೆ ನಾ ನಿನ್ನ ಮೊಗ ಊಹಿಸಿ ಕರೆದೊಯ್ಯು ನಿನ್ನ ಜೊತೆ ಮಿನುಗು ನಕ್ಷತ್ರವಾಗಲು ನಿನ್ನಲಿ ..! ನಿನ್ನ ಕಣ್ಣ ನೋಟ ಹೃದಯ ಬಡಿತದ ಓಟ ಹೆಚ್ಚು ಮಾಡಲು ಆಸೆ ಎನಗೆ ನಿನ್ನ ಮುದ್ದಾಟ                   -ಅಂಜಾರು ಮಾಧವ ನಾಯ್ಕ್ 

'ಮತ್ತೆ ಬಾ ಮಧುರ ಬಾಲ್ಯ'

ಕಣ್ಣಾಮುಚ್ಚಾಲೆ ಆಡೋವಾಗ ಅವಿತು ಕುಳಿತು ಇರೋ ಜಾಗ ಪತ್ತೆ ಹಚ್ಚಿ ನೀ ಸಿಕ್ಕಿದಾಗ ಅಚ್ಚರಿಯಾದೆ ನನ್ನ ನೋಡಿ ಬೆಚ್ಚಿ ಕಿರುಚಿದೆ ಮುಟ್ಟುವಾಗ ..! ತಟ್ಟನೆ ಎದ್ದು ಓಡಿಬಿಟ್ಟೆ ನಿನ್ನ ಹಿಂಬಾಲಿಸಿ ಬಂದು ಬಿಟ್ಟೆ ಮುಟ್ಟಿ ಕಟ್ಟಿ ತಿರುಗಿಸಿ ಬಿಟ್ಟೆ ಬೆಟ್ಟಕೆ ನಗುವ ಕಳುಹಿಸಿ ಬಿಟ್ಟೆ ನನ್ನೆದೆ ಬಡಿತವ ಹೆಚ್ಚಿಸಿ ಬಿಟ್ಟೆ ..! ಅಮ್ಮನ ಕೂಗು ದೂರದ ಕೋಣೇಲಿ ಮೈ ಜುಮ್ಮೆನಲು ಕೇಳಿ ನಮಗೂ ತಮ್ಮನ ಕೂಡಿ ಓಡಿದೆ ಆಗ ತಿಂಡಿಯ ಕೊಟ್ಟು ಬಿಟ್ಟಳು ಬೇಗ ತಟ್ಟೆಯ ಖಾಲಿಯೆ ನನ್ನಯ ವೇಗ ...! ಗಾನ ಕೋಗಿಲೆಯ  ಇನಿದು ರಾಗ ಅಂಗಳದಿ ಕರುವಿನ ಓಟದ ನೋಟ ನೋಡುತ ಕುಳಿತೆ ಖುಷಿಯ ಆಟ ಎನ್ನ ಮನವು ಕಲಿಯಿತು ಪಾಠ ಬಾಲ್ಯದ ದಿನಗಳ ರಂಗಿನ ಆಟ...!                  - ಅಂಜಾರು ಮಾಧವ ನಾಯ್ಕ್ ,

'ನಿನ್ನ ಪಾದಕೆ'

ದಾರವ ಕಟ್ಟಿ , ಹಾರಿಬಿಟ್ಟರೂ ಬಾನೆತ್ತರಕೆ ಕತ್ತರಿಯ ಹಾಕದಿರಿ ದಾರಕೆ  , ಪಾಪ ಲೋಕದಲಿ ನಿಂದು...! ಮಳೆ ಸುಂಟರಗಾಳಿಗೆ ಸಿಕ್ಕಿ ನಲುಗಿದರೂ ನಾ ನೇರ ಬಂದು ಬೀಳುವೆ, ಶ್ರೀ ಕೃಷ್ಣ  ನಿನ್ನ ಪಾದಕೆ.....!                       - ಅಂಜಾರು ಮಾಧವ ನಾಯ್ಕ್                                         

'ಸೊಲ್ಮೆಲ್ ತುಳು ಕುಟುಂಬ '

'ಸೊಲ್ಮೆಲ್ ತುಳು ಕುಟುಂಬ ' ಮರುಭೂಮಿದ ನಡುಟ್ , ಸಾರ ಮೋಕೆದ ಮರೋಟ್ ..! ತಿಕ್ಕೊನ್ದುಂಡೆಂಕ್  ತುಳುವ   ಮಣ್ಣ  ಕಮ್ಮೆನ  ...! ಅರಳಂಡ್  ಎನ್ನ ಮನಸ್  , ಉಪ್ಪಡಿಂಚೆನೇ ಈ ಕಡಲ್ .... ಇರ್ಲ್  ಪಗೆಲ್ ಮೋಕೆ ಮಲ್ಪುವೆ , ದಿಂಜಾವೆ ಎನ್ನ ಉಡಲ್ ...! ಅಣ್ಣನಕುಲು ನಿಕುಲೇ , ಅಕ್ಕನಕುಲು ನಿಕುಲೇ.... ಮುಲ್ಪ ಅಪ್ಪ ಅಮ್ಮನ ಸ್ಥಾನೋಡ್ ಉಪ್ಪುನಕುಲು ನಿಕುಲೇ ...! ಎನ್ನ  ಮನಸ್ದೊಲಾಯಿ ನಿಕ್ಲೆ ಮಾತೆರೆ ನೆಂಪು ...! 'ಪಟ' ಪನ್ಪಿ ಈ ಪುಟೊಟ್, ನಿಕ್ಲು ಕೊರ್ಪರೆಂಕ್ ಇಂಪು ..! ಮಾತೆರೆಗ್ಲಾ ಸೊಲ್ಮೆಲ್  ..,ತಪ್ಪಂದೆ ಉಪ್ಪಡ್ ಈ ಅಭಿಮಾನ ...! ನಿಕ್ಲು  ಕೊರ್ಪಿನ ಆಶೀರ್ವಾದನೇ ಆವಡ್  ಎಂಕ್ ಸಮ್ಮಾನ  ...!                                    - ಅಂಜಾರು ಮಾಧವ ನಾಯ್ಕ್

ಹೊಸ ಹುಮ್ಮಸ್ಸು

ಪಡುತಿಹೆನು ಜಿಗುಪ್ಸೆ ಹರಸಾಹಸದ ಬದುಕಲಿ ವ್ಯರ್ಥವೆನಿಸುವುದು ಜೀವನ ಕಲ್ಲು ಮುಳ್ಳಿನ ಹಾದಿಯಲಿ ಅದೇನೋ ಹಂಬಲ ಎನಗೆ ನಾಳೆಗಾಗಿ ಬದುಕುವ ಛಲ ನೀಡುತ್ತಿದೆ ಹೊಸ ಚಿಗುರು ಸಹನೆಯೆಂಬ ಪ್ರತಿಫ಼ಲ ಹಸನಾಗಿರಲಿ ಪ್ರತಿಕ್ಷಣ , ತುಂಬಿ ಹರಿಯಲಿ ಉಲ್ಲಾಸವು ಮುಳುಗದಿರಲಿ ಎಂದಿಗೂ ವಿಶ್ವಾಸದ ಬಾಳ ನೌಕೆಯು ಕೆಲಬಾರಿ ಮನಮುದುಡುವುದು , ಸಾಕಾಯಿತೆನಗೆ ಬದುಕೆಂದು ಆಶಿಸುವೆ ಬರುತಿರಲಿ, ಹೊಸ ಹುಮ್ಮಸ್ಸು  ಪುಟಿಯಲೆಂದು                                                - ಅಂಜಾರು ಮಾಧವ ನಾಯ್ಕ್ .
ದಾರವ ಕಟ್ಟಿ,  ಹಾರಿಬಿಟ್ಟರೆನ್ನ ಬಾನೆತ್ತರಕೆ ,  ಕತ್ತರಿಯ ಹಾಕದಿರಿ ದಾರಕೆ  ,ಎನ್ನ  ಸಂಗಡ ನಿಂದು..! ಮಳೆ ಸುಂಟರಗಾಳಿಗೆ ಸಿಕ್ಕಿ , ನಲುಗಿದರೂ ನಾ ನೇರ ಬಂದು ಬೀಳುವೆನು  , ಶ್ರೀಕೃಷ್ಣ ನಿನ್ನ ಪಾದಕೆ ... !                                  - ಅಂಜಾರು ಮಾಧವ ನಾಯ್ಕ್

'ಹರೀಶ 'ನೀತ

ನೋಡಿ ಕಲಿಯಬೇಕು,ಇವನಂತೆ ಇರಬೇಕು ಅನಿಸುತಿದೆ ಎನಗೆ, ಇದ್ದರೇ ಹೀಗಿರಬೇಕು ...! ಮಾತು ಬೆಳ್ಳಿ,ಮೌನ ಬಂಗಾರ ಎಂಬರ್ಥವ, ಅರಿತು ಬಾಳುತ್ತಿರುವ ನಮ್ಮ ಪ್ರಿಯ ಗೆಳೆಯ....! ಮಿತ ಮಾತಲಿ ಮನಗೆಲುವ ಕುಮಾರನೀತ ಹಿತವಾಗಿ ಬದುಕಲು ಕಲಿತ  ಗುಣವಿನೀತ ...! ಪಾಕ ಶಾಸ್ತ್ರ ಚತುರನೀತ,ಧೀರನೀತ ಹೃದಯದಲಿ, ಮೊಸರು ಬೆಣ್ಣೆಯಂತೆ ಬೆರೆಯುವನು ಎಲ್ಲರಲಿ...! ಹೆಸರ ಹೋಲುವ ಸನ್ನಡತೆಯು ಇವನಲಿ  ..! ನಮ್ಮೆಲ್ಲೆರ ಮುದ್ದಿನ ಗೆಳೆಯ 'ಹರೀಶ 'ನೀತ                         *****'ಹುಟ್ಟುಹಬ್ಬದ ಶುಭಾಶಯಗಳು '*****                    - ಅಂಜಾರು ಮಾಧವ ನಾಯ್ಕ್

ಸೊಲ್ಮೆಲ್ ನಾಸಿರ್

ನಮಸ್ಕಾರ                        ಸಂಘಮಿತ್ರೆರೆ   ಜೀವನ  ಒಂಜಿ ಪೊರ್ಲುದ ಪ್ರಯಾಣ ಇತ್ತಿಲೆಕ್ಕ . ನಮ ಪೋಪುನ ಸಾದಿಡ್  ಮಸ್ತ್ ಜನ ನಮ್ಮೊಟ್ಟುಗ್ ಸಹಪ್ರಯಾಣೊಗ್ ಸಿಕ್ಕುವೆರ್ . ನಮ ಅಕ್ಲೆಡ ಪರಿಚಯ ಮಲ್ತೊನುವ , ತೆಲಿಪುವ, ನಲಿಪುವ, ನಮ್ಮ ಉಡಲ್ದ  ಪಾತೆರ ಪನ್ಪ ,  ಗುರ್ತ ಪರಿಚಯನೇ ಇಪ್ಪಾಂದಿನಕುಲ್  ಎತ್ ಕೈತಲ್ ಬರ್ಪ. ಅಂಚನೆ ನಮ, ನಿಲ್ದಾಣ ಬತ್ತಿನಲ್ಪ ಜತ್ತದ್ ಪೋಪ . ಆ ಎಲ್ಯ ಪೊರ್ತುಲ ಮನಸಡ್ ನೆಂಪಾದ್  ಒರಿವುಂಡು . ಅಂಚಿತ್ತಿನ  ಪೊರ್ಲುದ ನೆಂಪೇ ನಮ್ಮ ನಾಸಿರ್ .  ಉದ್ಯೋಗೊಗಾದ್ ಕುವೈಟ್ ಗ್ ಬತ್ತದ್ ಮಾತೆರ್ನ ಒಟ್ಟುಗ್ ಭಾವ ಬಂಧೊಡ್ ಬೆಸೆದ್ ಇತ್ತಿನಾರ್  ತುಳು ಕೂಟದ ಬೊಳ್ಳಿ ನಾಸಿರ್'ಮೆರೆನ  ಬೀಳ್ಕೊಡುಗೆ ಸಮಾರಂಭೊ ಈ ಸಭಾ ಕಾರ್ಯಕ್ರಮೊನ್ ನಡಪಾದ್ ಕೊರ್ರೆಗ್ ವೇದಿಕೆ ಪಜ್ಜೆದೀವೊಡಿಂದ್ ವಿನಂತಿ ಮಲ್ಪುವೆ, ಕೂಟದ ಅದ್ಯಕ್ಷೆರಾಯಿನ ಶ್ರೀ ತಾರೇಂದ್ರ.  ಪಿ . ಶೆಟ್ಟಿಗಾರ್ , ಉಪಾದ್ಯಕ್ಸೆರಾಯಿನ   ಹರೀಶ್ ಭಂಡಾರಿ , ಸಲಹೆಗಾರರಾಯಿನ ಶ್ರೀ ಸುಧಾಕರ್ ಶೆಟ್ಟಿ , ಶ್ರೀ ರಮೇಶ್ ಕಿದಿಯುರ್ ಬೊಕ್ಕ ಶ್ರೀಮತಿ ಸ್ವರ್ಣ ಶೆಟ್ಟಿ ಮೆರೆನ್  ವೇದಿಕೆಗ್ ಪಜ್ಜೆದೀನ ಮಾತ ಹಿರಿಯೆರೆಗ್ ಮೋಕೆದ ಸ್ವಾಗತ ...

ಶ್ರೀ ಕೃಷ್ಣ ನಿನ್ನ ಚರಣಕೆ ..!

ಸೌಖ್ಯವೋ  ...! ಅಸೌಖ್ಯವೋ ...! ಕಾಲ ಘಟ್ಟದ ಪ್ರಾಮುಖ್ಯವೋ..! ಮುಖ್ಯ ಕಾರ್ಯಗಳ ಸಮರ್ಥಕತೆಯೋ ..! ನಿತ್ಯ ಕ್ಷಣದ ಆನಂದವೋ ..! ಲಕ್ಷ್ಯವಿಲ್ಲದ ಜೀವಕೆ  ಅಕ್ಷಿ ಪಟಗಳ ಕಮ್ಮಟವೋ..! ಭಿಕ್ಷುಕನಾಗಿ ಬಂದಿಹೆ ನಾ  ಶ್ರೀ ಕೃಷ್ಣ ನಿನ್ನ ಚರಣಕೆ ..! ರಕ್ಷಿಸೆನ್ನ ನಿನ್ನ ಪೂಜಿಸಲು  ಪ್ರಾಣ ಪಕ್ಷಿ ಹಾರಿದರೂ  ..!                           - ಅಂಜಾರು ಮಾಧವ ನಾಯ್ಕ್                       

ವೈದ್ಯ ನಾಯಕ

ವೈದ್ಯರು ಇವರು ಜೀವ ಉಳಿಸುವರು 'ಕಾಪಾಡಿ' ಎಂದರೆ ಓಡೋಡಿ ಬರುವರು ಇವರಿಗಿಲ್ಲ ಅಹಂಕಾರ , ಅಂತಸ್ತಿನ ಅಂತರ ಜನಸೇವೆ ಮಾಡುತಲಿ ಆಗುತಿಹರು ಗುರಿಕಾರ ಕರ್ತವ್ಯ  ಮರೆಯದೆ ನೀಡುವರು ಸಾಂತ್ವನ ನಾ ಒಲ್ಲೆ ' ಅನ್ನರು ಕೇಳಿದರೆ ಸಹಕಾರ ಸಮಾಜಸೇವೆ  ಶುಚಿಯು ಕಾಣುತಿದೆ ರುಚಿಯೂ ಜಗದೀಶ ಮಾಡಿಹನು ಇವರನ್ನ ಸತ್ಪ್ರಜೆಯು ಸುಖವಾಗಿರಲಿ ನಡೆಯು ಪ್ರೀತಿವಾತ್ಸಲ್ಯವು ಬೆಳಗಲಿ 'ಸುರೇಂದ್ರ ನಾಯಕ'ರ ಬದುಕು                 - ಅಂಜಾರು ಮಾಧವ ನಾಯ್ಕ್

ಒಪ್ಪಲಾರದು ಈ ಮನ....

ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ...! ತಪ್ಪೆಂದು ತಿಳಿದು ತಪ್ಪು ಮಾಡಿದರೆ ಒಪ್ಪಲಾರದು ಈ ಮನ ತಪ್ಪಿತಸ್ಥನಿಗೆ ಕಪ್ಪು ಬಳಿಯುವ ತನಕ ....!                            - ಅಂಜಾರು ಮಾಧವ ನಾಯ್ಕ್ 

ರೋನಿ , ರೋನಿ ರೋನಿ

ಏತೊಂಜಿ ಮೋಕೆ ಏತೊಂಜಿ ನಿಯತ್ತ್ ದೂರೊಡು ತೂವೊಂದಿತ್ತಿ ಜೀವ ನನಲಾತ್ ಕೈತಲ್ ಎಂಕಾಂಡ್ ಖುಷಿ ಮೆರೆನ ತೆಲಿಕೆದ ದೊಸ್ತಿಕತೆಗ್ ಅರಪಾಯೇರ್ ಬಾಕಿಲ್ ತುಳು ಬಣ್ಣ ಸಿಂಗಾರೊಗ್ 'ಜೋಕ್ಲೆನ ತೆಲಿಕೆ ' ಮೈ ತುಂಬಾ ನಲಿಕೆ ಪಗೆಲ್ ರಾತ್ರೆ ಪನಂದೆ ಒಂಜಾತ್ ಮೋಕೆ ಜಕ್ಕ ಜವನೆರೆಗ್ ತಕ್ಕ ಮೆರೆನ ಸಂಪರ್ಕ ಉಡಲ್ದಿಂಜಿ ಪಾತೆರ ತೊಜುಂಡು ಪಕ್ಕ ಗಮ್ಮತ್ ಗೊಬ್ಬುಡ್ ಉಪ್ಪಂದೆ ಇಜ್ಜಿ ಈ ನಮ್ಮ ಮೊಕೆದ ರೋನಿ , ರೋನಿ ರೋನಿ .!              - ಅಂಜಾರು ಮಾಧವ ನಾಯ್ಕ್ 

ದೀಪ - ಪ್ರದೀಪ

ದುಗುಡವೆಲ್ಲ  ಮರೆತು ನಗು ಮೊಗವ ತೆರೆದು ಸುಲಲಿತ ಸುಮಧುರ ಬೆಳಗುವ ದೀಪ ನೇರನುಡಿ , ಹಾವಭಾವದಲಿ ಇರದು ಅಂತರ ಗುರಿಮುಟ್ಟಲು ಕೆಚ್ಚೆದೆಯಿಂದ ಮುನ್ನುಗ್ಗುವ ದೀಪ ನೂರು ಆಸೆಯ ಸ್ಪುರಣ ಚೇತನ ಸುಕುವರ ಮೂಡಿ ಬರುವನು ಹಸನ್ಮುಖ ಸ್ನೇಹ ಜೀವಿ ದೀಪ ಜಾರೋ ಕಲ್ಲಲಿ ಸರಾಗ ನಡಿಗೆಯ ಮೇರು ಮನುಜ ಬೀಳೋ ಹನಿಗೆ ಬೊಗಸೆಯಾಗುವ ಪ್ರೀತಿ ದೀಪ ಬಿಸಿಗಾಳಿಗೆ ಕಡಲ ಹೃದಯ ತೆರೆವ ಭಾವಜೀವ ತಂಗಾಳಿಯಲಿ ಎದೆಯೊಡ್ಡಿ ಬಳುಕುವ ಲಾಸ್ಯ ದೀಪ ಹೂವಿಗೆ ಹೂವಂತೆ , ಮುಳ್ಳಿಗೆ ಮುಳ್ಳಂತೆ ಬೀರೋ ಪ್ರತಿಬಿಂಬ ಇಂತೀ ಚರಿತೆಯ ನಮ್ಮೆಲ್ಲರ ಪ್ರಿಯ ಗೆಳೆಯ  'ಪ್ರದೀಪ '                            - ಅಂಜಾರು ಮಾಧವ ನಾಯ್ಕ್

ಮೊಕೆದ ತುಳುನಾಡು ......

ಸಾವಿರ ಜನ್ಮದ ಪುಣ್ಯದ ಫಲ , ಬಂಗಾರ್ ಪನ್ಪಿನ ತುಳುನಾಡ ಮಣ್ಣ್ ।।೧।। ಏತೊಂಜಿ ಎಡ್ಡೆ ಮನಸ್ , ನಮ್ಮಕ್ಲೆ ಜನ್ಮ ಒಂಜಿ ಪಂಡ್ದ್ ತೋಜಾವುನು  ಈ ಮಣ್ಣ್ದ ಮರ್ಮ।।೧।। ಸತ್ಯ ಧರ್ಮೊಗ್ ತರೆ ಬಗ್ಗಾವ , ಅಸತ್ಯ ಗೊಬ್ಬುನು ಕೊಡಿ ಮುಟ್ಟಾವ।।೧।। ನಂಕಿಜ್ಜಿ ಅಹಂಕಾರ , ಕೊರ್ಪ ಸಹಕಾರ ಮೋಕೆ ಸಿಂಗಾರ ಬಾಳೊಂಜಿ ಪೊರ್ಲುದ ವರ..।।೧।। ದೇವೆರೆ ಸಾಯ ನಂಕುಂಡ್ ಎಪಲಾ ಒಂಜಾದ್ ಉಪ್ಪುಗ ತುಳು ಜೋಕುಲು ಮಾತೆರ್ಲ।।೧।।                     - ಅಂಜಾರು ಮಾಧವ ನಾಯ್ಕ್

ಹರಿ - ಈಶ = ಹರೀಶ

ಹೆಸರಲ್ಲೇನಿದೆ ! ಅನಬೇಡಿ ಯಾರಿಗೂ ... ಹೆಸರಲ್ಲೇ ಹುದುಗಿದೆ ಸಜ್ಜನತೆಯ ಸೊಬಗು ನೋಡುವ ನೋಟ ಸರಿಯಾಗಿರಲಿ ಇಲ್ಲಿ ನಿನ್ನೊಂದಿಗೆ ಬರುವುದು ಹಲನಾಮಗಳ ಬಳ್ಳಿ ನಿಸ್ವಾರ್ಥ ಸೇವೆಯ ಮನೋಭಾವದ ಜನ್ಮ ಮಾಡುವುದ ಕಂಡೆ ಮರುಭೂಮಿಲಿ ನಿಮ್ಮ ಗಳಿಕೆಗೇ ..! ಹುಟ್ಟಲ್ಲ ನಮ್ಮೆಲ್ಲ ನಡೆಯು ತಿಳಿದು ಬಾಳುತ್ತಿರುವರು ಹರಿನಾಮದ ಮರ್ಮ ಎಂದೆಂದಿಗೂ ಇರಲಿ ಈ ಸ್ನೇಹ ಭಾವ ಹರಿ - ಈಶನಂತೆ ಇರಲಿ ನಮ್ಮ ' ಹರೀಶ್  'ರ ಪ್ರಭಾವ ..!                        - ಅಂಜಾರು ಮಾಧವ ನಾಯ್ಕ್

ತುಳುಕೂಟ ..

ಪ್ರೀತಿ ಗೆಳೆಯರ ಸಂಪುಟ ಭಂಡಾರ ತುಳುವ ಜನರಿಗೆ ಸ್ವಾಗತ ಗೋಪುರ ಇಲ್ಲಿರದು ಅಂತರ ಸಜ್ಜನರ ಸಾಗರ ಸ್ನೇಹಜೀವಿಗಳ ಮಹಾಪೂರ ನಿರಂತರ ಮರುಭೂಮಿಯ ನಡುವಲಿ ಈ ನಮ್ಮ ಕೂಟ ತುಳು ಕೊಂಡಿಯ ಸೇರಿಸಲಿ ಆಡುತ ಆಟ ನಮಿಸೋಣ ನಾವು ತುಳು ಹೃದಯಸ್ಪರ್ಶಿಗಳ ಬೆಳೆಸೋಣ ಇನ್ನೂ ನಾಡಿನ ಆದರ್ಶಗಳ ನೀವೆಲ್ಲರೂ ಬನ್ನಿ ಇತರರನು  ಕರೆತನ್ನಿ ಒಂದಾಗೋಣ ಬನ್ನಿ ನಾವು ತುಳುವರೆನ್ನಿ               - ಅಂಜಾರು ಮಾಧವ ನಾಯ್ಕ್

ಮೌನ ಪ್ರೇಮ

ಕಲ್ಲರಳಿ ಹೂವಾಗಿ ಗಿಡಬೆಳೆದು ಮರವಾಗಿ ಬೆಟ್ಟವೆಲ್ಲಾ ಹಸಿರಾಗಿ ನದಿನೀರು ತುಂಬಿ ಹರಿದು ಭೂಮಿ ತಾಯಿ ಹಸನಾಗಿ ನಗು ನಗುತಿರಲು ಮನವೆಲ್ಲಾ ಸಂತೋಷದ ಹೊಳೆ ಹರಿಯುವ ಭಾಸ ಹಕ್ಕಿಗಳ ಚಿಲಿಪಿಲಿ ಶಬ್ದನಾದಗಳ ನಡುವೆ ನನಗೆದ್ದು  ಉಲ್ಲಾಸದ ದಿನ ಆರಂಭಿಸಲು ತವಕ ನಿಷ್ಕಲ್ಮಶ ತಂಪು  ಗಾಳಿ ಸವಿಯುತ ಮೋಡಗಳ ಆಸರೆಯಲಿರಲು ಎಷ್ಟು ಸುಂದರ ನೀ ಎನ್ನ ಪ್ರೀತಿಸುವ ಪರಿ ನೆನೆಯುತ ಮುದವಾಯಿತು ಮನ ಮೌನ ಪ್ರೇಮಕೆ           - ಅಂಜಾರು ಮಾಧವ ನಾಯ್ಕ್

ನಿನ್ನ ಮೊಗ...

ತಂಪು ಗಾಳಿ ಸಂಜೆಯಲಿ ಬೆಟ್ಟ ತುದಿಯ ಅಂಚಿನಲಿ ಹನಿ ಮಳೆ ಸಿಂಚನದ ಹೃದಯ ಸ್ಪರ್ಶ ಆಸೆಯ ಆಗುತಿಹೆನಗೆ ನಿನ್ನ ಮೊಗ ಕಂಡಾಗ  ಎನ್ನ ಸೇರಿಕೊ ಪ್ರೀತಿಲಿ ಬಂಗಾರ               - ಅಂಜಾರು ಮಾಧವ ನಾಯ್ಕ್ 

ಅಂದ - ಕಂದ

ನೀ ನೋಡಲು ಚೆಂದ ನಾ ಪಡುವೆ ಆನಂದ ..! ನಿನ್ನ ಕಣ್ಣಿನ ರೆಪ್ಪೆಯಾಟ ಅಂದ ದುಂಡು ತುಟಿಗಳ, ಮುತ್ತು ಬಲು ಮಧುರ ..! ಮೃದು ಕೈಯ ಸ್ಪರ್ಶ ಬಂಧ ಕಾಲ್ಗೆಜ್ಜೆಯ ನಡುಗೆ ಚೆಂದ ..! ಜಿಂಕೆ ಮರಿಯಂತೆ ಓಟ ಅಂದ ಎನ್ನ ಮುದ್ದಿಸುವ ಹೃದಯ ಅಮರ ..! ನೀ ಹೇಗಿದ್ದರೂ ಬಲು ಚೆಂದ ಸುಖವಾಗಿರು ಓ ನನ್ನ ಮುದ್ದು ಕಂದ ..!              - ಅಂಜಾರು ಮಾಧವ ನಾಯ್ಕ್ 

'ತೆಲಿಕೆದ ಬೊಳ್ಳಿ'ಲು

'ತೆಲಿಕೆದ ಬೊಳ್ಳಿ'ಲು  ನಮ ಮಾತೆರ್ಲ ಎಲ್ಲೆ ಪೋವೊಂದುಲ್ಲ, ಈಲ ತೋವೆರೆಗ್ ಬಲ್ಲ ತುಳು ಅಭಿಮಾನ ತೋಜುಂಡು ನಮ್ಮಕ್ಲೆಡ ಏಪಲ ತುಳುವೆರ್ ಒಂಜಾದ್ ಉಲ್ಲ ..! ಉಪ್ಪಡ್ ಇಂಚನೆ ನಮ್ಮಕ್ಲೆನ ಸಂಘ ಜಾತಿ ಭೇದ ದಾಂತೆ ಬೆರೆಪುಗ ಏಪಲ ..! ಒಂಜಾದ್  ಬದ್ಕ್ ಗ  ತುಳುವಪ್ಪೆ ಜೋಕುಲು ಕೈ ಜೋಡಾದ್ ನಡಪುಗ ಪ್ರತಿ ಕಲೆಗ್ ಎಂಕುಲು ..!!               - ಅಂಜಾರು  ಮಾಧವ ನಾಯ್ಕ್

ಶಿವನೇ ಬಲ್ಲ....

ಜ್ಞಾನಿಯು ಅಲ್ಲ , ಅಜ್ಞಾನವು ಇಲ್ಲ ಕಲ್ಲು ಸಕ್ಕರೆಯಂತೆ ಸಿಹಿಯಾಗಿಲ್ಲ .. ಬೇವು ಬೆಲ್ಲದ ನಡುವೆ ಜೀವನವು ಎಲ್ಲಾ .. ಕಲ್ಲು ಮುಳ್ಳಿನ ದಾರೀಲಿ ನಡೆಯುವೆ ಮೆಲ್ಲ .. ಸುಳ್ಳು ಕಂತೆಯನು ಹೇಳುವುದಿಲ್ಲ .. ಚಳ್ಳೆ ಹಣ್ಣು ತಿನಿಸಿ ಓಡುವುದಿಲ್ಲ ...! ಪರರ ಜೀವಕೆ ಮುಳ್ಳಾಗಿರುವುದಿಲ್ಲ .. ಸತ್ಯ ಬದುಕನು ಬಾಳಿ ಬಸವಳಿದೆಯಲ್ಲ ..! ಎಲ್ಲರಲಿ ಬೆರೆತು ಇರಬಯಸುವೆನಲ್ಲ  .. ದಿನ ರಾತ್ರಿ ಎನದೆ ಸಂತೋಷವೆಲ್ಲ ಆ ಶಿವನೇ ಬಲ್ಲ ಎನ್ನ ಬದುಕೆಲ್ಲ ವಿಶ್ವಾಸವು ಎನಗೆ ದೇವ ಕೈ ಬಿಡಲ್ಲ ...!!        -ಅಂಜಾರು ಮಾಧವ ನಾಯ್ಕ್ 

ಇಂದನ್ನು ಬಾಳು ....

ದಿನಕಳೆದ ಮೇಲೆ ಮರುಗದಿರು ನಿರಂತರ ನಾಳೆ ಬರುವ ಮೊದಲು ಬೆದರದಿರು ಒಂಥರಾ ತಿಳಿದುಕೋ ಇರುವುದು ಬಾಳ್ವೆ , ಈ ಕ್ಷಣ ಈ ವರೆಗೆ ...! ಇಲ್ಲದ ನಾಳೆಗೆ ಯಾಕಾಗಿ ಭಯಪಟ್ಟಿರುವೆ ..! ಕರಗಿಸಿಕೋ ಒಡಲಲಿ ಪ್ರೀತಿ ಸಾಗರ ಕೈ ಬೀಸಿ ಕರೆದುಕೋ ಸ್ನೇಹಜೀವಿಯ ಬಾಳ ಪಯಣವು  ಸುಂದರ.. ಪ್ರೀತಿಯಿದ್ದರೆ ಬಾಳ ದಾರಿಯ ಸರಿಯಾಗಿಸು ತಪ್ಪಿ ಬಿದ್ದರೂ ..! ಜಯವಾಗಲಿ , ಜೀವನದ ಗುರಿ ಮುಟ್ಟಲಿ .. ಕೊನೆಯುಸಿರ ಎದೆಬಡಿತವು ಪ್ರೀತಿ ಸಹನೆ ತುಂಬಿರಲಿ ...!                         - ಅಂಜಾರು ಮಾಧವ ನಾಯ್ಕ್

ನನ್ನ ಪ್ರೀತಿಯ ಸೂರಿ ....

 ನೀಲಿ ಬಾನಲಿ ತೇಲೊ ಸಮಯದಲಿ  ಸ್ನೇಹವಾಯಿತೆನಗೆ  ತುಳುವ ಚಿಂತಕ ಸ್ಪೂರ್ತಿಯು ..! ಯೋಗಕ್ಷೇಮ ವಿಚಾರಧಾರೆ ಚಿಂತನ ಮಂಥನ ... ಅದರೊಂದಿಗೆ ಎರೆದೆ  ಎನ್ನ ಸಂಕ್ಷಿಪ್ತ ಬಾಳ ಪುಟವ ..! ತೆರೆದರು ತುಳುವಿನ ಬಾಗಿಲನು ಸಂತಸದಲಿ ... ಆಯಿತೆನಗೆ ಹರುಷವೋ ಹರುಷ ಕ್ಷಣಮಾತ್ರದಲಿ ..! ಕೇಳಿದರೊಂದು ಪ್ರಶ್ನೆ ಪಯಣಿಸುತಿರುವಂತೆ ನೀ ಬೇಗನೆ ಬರುವೆಯ ತುಳು ಮಂಚಕೆ  ..! ತಟ್ಟನೆ ಒದರಿದು ನಾಲಗೆ "ನನಗೇನು ಪ್ರಯೋಜನ " 'ಹತ್ತು ಹಲವಾರು ' ಉತ್ತರ ಎನ್ನ ಕಿವಿಗೆ ಬಿತ್ತರ ..!! ಮರಭೂಮಿಯ ಸ್ಪರ್ಶಿಸಲು ಅರಿವಾಯಿತೆನಗೆ .? ಸ್ನೇಹದ ಕಡಲೊಂದು ಸಿಕ್ಕಿರುವುದು ನಿನಗೆ .. ಗಟ್ಟಿಯಾಯಿತು ಭಾವನೆ ವರುಷವು ಕಳೆದಂತೆ ಒಂದಾಗಿರುವೆ ಇಂದಿಗೂ ಉಸಿರಂತೆ ಇರುವೆ .. ಹೇಳದೇ ಹೋದರೆ ಇರಲಾರದು ಹೆಮ್ಮೆ ... ನಗುಮೊಗವ ತೋರುವ 'ಸೂರಿ'ಯ ಒಲುಮೆ ಕರೆವರು ಎಲ್ಲರೂ 'ಸೂರಿ ' ಎಂದು ಪ್ರೀತಿಯಲಿ ಬೆಳಗಲಿ ಸೂರ್ಯನಂತೆ ಜೀವನವು ಸು-ರಸದಲಿ ....                     - ಅಂಜಾರು ಮಾಧವ ನಾಯ್ಕ್

'ಶಾಪಿಂಗ್ ಮಾಲ್ ನಲಿ' ನನ್ನಾಕೆ ....

ಅದೊಂದು ಕ್ಷಣ ನೆನೆಸಿಕೊಂಡಳು ನನ್ನಾಕೆ...! ಬಾಲ್ಯದಲಿ ಆಡಿದ ತುಂಟಾಟಗಳ ..! ಮೊನ್ನೆ ನಡೆದಾಡಿದಳು 'ಶಾಪಿಂಗ್ ಮಾಲಿನಲಿ'  ಈಕೆ .... ಟ್ರಾಲಿಯ ದೂಡುತ ಕೇಳಿದಳು ನನ್ನ....., ಇದರಲಿ ಹಾರ್ನ್ ಇಲ್ಲ ಯಾಕೆ ! ಅಯ್ಯೋ ಅಂತ ನನಗೆನಿಸಿತು  , ಇನ್ನೂ ಮರೆಯಬಾರದು ಯಾಕೆ . ತಿರುಗಿ ಯೋಚಿಸಿ ತಿಳಿದೆ , ಜೀವನದ ಆಟಕೆ ಪ್ರಾಯದ ಅಂತರವಿಲ್ಲ ಜೋಕೆ ...!!                - ಅಂಜಾರು ಮಾಧವ ನಾಯ್ಕ್

ಆ ಕಾಲ ..ಈ ಕಾಲ

ಬೆಳಗಾಗಲು ತಂದೆ ತಾಯಿ ಪಾದ ಪೂಜೆಯ,  ಆ ಕಾಲ ಅವಸರದಿ ಎದ್ದು ಹಲ್ಲುಜ್ಜದೆ ಮೊಬೈಲಂತರ್ಜಾಲ ನೋಡುವ,  ಈ ಕಾಲ ಬಸ್ಸಲಿ ಪಯಣಿಸಿ ಸಂತೋಷಪಡುತ್ತಿದ್ದ,   ಆ ಕಾಲ ಸಾಲ ಸೋಲ ಮಾಡಿ ಬೈಕು ಸವಾರಿಯ,  ಈ ಕಾಲ ಮನೆಮಂದಿಗೆ ಬಿಸಿಯಾದ ಔತಣದ, ಆ ಕಾಲ ಮನೆ ಮನೆಗೆ  ಕೆ . ಎಫ್ .ಸಿ ತಿನ್ನೋ ಚಟದ, ಈ ಕಾಲ ಮೈ ತುಂಬಾ ಬಟ್ಟೆ ಧರಿಸಿ ಓಡಾಡುವ,  ಆ ಕಾಲ ಶರೀರ ಉಬ್ಬು ತಗ್ಗು ಎತ್ತಿ ತೋರಿಸುವ,  ಈ ಕಾಲ ಹಾಲು ಮೊಟ್ಟೆ ಪಾನಕ ಕುಡಿಯುವ,  ಆ ಕಾಲ ಕೋಕ ಕೋಲ  ಪೆಪ್ಸಿ ಟೋಪಿಕಾನ ಕುಡಿಯೋ ಈ ಕಾಲ ಬದಲಾಗಿದೆ ದಿನಚರಿ ಆ ಕಾಲಕ್ಕಿಂತ ಈ ಕಾಲ ಇನ್ನಾದರೂ ಮರುಕಳಿಸಲಿ ಶಿಸ್ತಿನ ದಿನ ಬರೋ ಕಾಲ                           - ಅಂಜಾರು ಮಾಧವ ನಾಯ್ಕ್

ಕಪಟ ಭಕುತಿ ಇದು ..!!!

ನೂರು ತರಹದ ಶೃಂಗಾರ ಮಾಡಿ ಕೂಗಿ ಕರೆದು ಪ್ರಸಾದವ ನೀಡಿ , ಸಾಲು ಸಾಲಾಗಿ ಭಕುತರ ನಿಲಿಸಿದರೂ ಪಾಪದ ಹೊರೆಹೊತ್ತ ಮನುಜರು ಕೂಸಂತೆ ನಟಿಸಿದರೇ ? ಏನಿಹುದು ಅರ್ಥ ಜಗದಲಿ ನಡೆವ ಲೇಸಿನಾಟಕೆ ...               - ಅಂಜಾರು ಮಾಧವ ನಾಯ್ಕ್

ಹೌದಲ್ಲವೇ ..?

ಪರಿವರ್ತನೆ ಜಗದ ನಿಯಮ ಎನುತ...!  ದಿನ ಬಿಡದೆ ಪಾಪ ಕರ್ಮವ ಮಾಡುವರು                                  ........  ಜನರು ಪಡೆದು ಬಂದ ಭಾಗ್ಯ ನಮದು ಎನುತ ...! ತಡೆದು ನಿಲ್ಲಿಸಿ ಬಡಿದು ತುಳಿವರು                               ........  ಜನರು ಹಲವು ವೇಷವ ಹಾಕಿ ಧರ್ಮವನು ಸಾರುವರು ..! ಅಧರ್ಮ ಮಾಡಿ ವೇಷ ಬದಲಿಸಿ ತಿರುಗುವರು ,                                .......ಜ಼ನರು                                                   - ಅಂಜಾರು ಮಾಧವ ನಾಯ್ಕ್

ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು ..

ನ್ಯಾಯಕ್ಕೆಂದೇ....  ಅಲೆದಾಡುವರು ಕೋರ್ಟು ಕಛೇರಿ ಅನ್ಯಾಯಕ್ಕೆಂದೇ ... ಜನಿಸಿ ಬಿಡುವರು ಬೀದಿ ಬೀದಿಯಲಿ ಕೈ ಮುಗಿಯಲೆಂದೇ ಓಡಾಡುವರು ದೇಗುಲಗಳ ಮನದ , ಮನೆಯ ದೇವರನೇ ಮರೆವರು ಜನರು ಅಧಿಕಾರಿಯು ನಾನು , ನೀ ಎನ್ನ ಚೇಲನಯ್ಯ ಎನುವರು ನಾಯಿ ಬಾಲದಂತೆ ಅಲ್ಲಾಡುವರು , ಮೇಲಧಿಕಾರಿಯ ಕಂಡು ಕೆಲವರು ಡೊಂಬರಾಟ ಮಾಡುವರು ನಾಯಿ ಕುನ್ನಿಗಳ ಸೇರಿಸಿ ಕಂಡ ತ್ಯಾಜ್ಯ , ಮಾಂಸವ ಕಚ್ಚಿ ತಿನುವರು ಕಷ್ಟಪಟ್ಟ  ಪುಣ್ಯಕೆ..  ಮುತ್ತುಗಳ ಗಳಿಸುವೆ ನನ್ನಿಷ್ಟದಂತೆ ಹಾಯಾಗಿರುವೆ ತೃಪ್ತಿಯಲಿ ... ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು .. ನಿತ್ಯ ಆನಂದವಾಗಿರುವುದು ನಿನ್ನ  ಜೀವನವು                      - ಅಂಜಾರು ಮಾಧವ ನಾಯ್ಕ್

ಎಂಥವರಯ್ಯಾ .....!!!!

ಹೆತ್ತ ತಾಯಿ , ಸಾಕಿ ಸಲಹಿದ ತಂದೆಯ ಮರೆತು ನೀನೆಷ್ಟು ಗಳಿಸಿದರೂ , ತೃಪ್ತಿಯಾಗದು ನಿನ್ನ ಒಡಲು ಸತ್ಯ ಧರ್ಮದ, ಅರ್ಥವನರಿಯದ ಷಂಡ ಮನುಜನು ಸತ್ಯ ದೇವತೆಗೆ ನಿತ್ಯ ' ನೇಮ ' ಕೊಟ್ಟರೂ ವ್ಯರ್ಥವಯ್ಯ... ಅಣ್ಣ ತಮ್ಮನ  ಬಂಧವನರಿಯದ ಮನುಕುಲವು ಒಂದಾಗಿ ಬಂದು, ಕೊಂದು ತಿನ್ನಲು ಹವಣಿಪರು ...! ಅಂಥರಾತ್ಮದಲಿ ಒಂದಷ್ಟು ನಂಜು ಹೊಂದಿ ಬೆಣ್ಣೆಯಂತೆ ನಟಿಸುವರು ಕೆಲ ಬುದ್ದಿಜೀವಿಗಳು ನಿಜ ವಿಷಯ ಅರಿತು ಆಡಂಭರವ ಮಾಡಲು ಹೊರಟರೇ ತಂತ್ರಿ , ಭಟ್ಟರು ಮಾಡಿದ ಪೂಜೆಯು ವ್ಯರ್ಥವಯ್ಯ ಭೂತ ಕೋಲದ ನೆಪದಿ ಕಾಸುಗಳಿಸುವ ಪೂಜಾರಿಯು , ಸಹಾಯಕನು ಪೂಸಿ ಹೊಡೆದು ಹೆಂಡತಿಯ ಮಾರುವವನು ಆಗಿರಬಹುದಯ್ಯ ...! ದೈವ ದರ್ಶನದ ಶಕ್ತಿಯನರಿಯದ ಕರ್ಮಸುತನು ದುರುಪಯೋಗ ಮಾಡಿಕೊಳ್ಳುವರು ಹಿಂದೂ ಸಂಸ್ಕೃತಿಯ ದುಡ್ಡು ಕೊಟ್ಟರೆ, ಚಟ್ಟದ ಬಟ್ಟೆಯನು ಕಟ್ಟಿಕೊಂಡು .. ನಾ ಊರಿನ ಯಜಮಾನ , ಗುರಿಕಾರ ಎನುವರಯ್ಯ  ... ! ಸತ್ಯವನೆ.. ನಂಬಿ ಬದುಕಿದ  ನಿತ್ಯ ಜೀವನ ... ಸತ್ತು ಹೋದರೂ ತೃಪ್ತಿಯಾಗದು ಮನವು ಈ ಪಾಪಿ ಜಗದಲಿ.. ಇದುವೇ ಕಲಿಯುಗ .. ಇದುವೇ ಹೊಸಯುಗ .. ಇದುವೇ ಎನ್ನ ಅಂತರಾತ್ಮದ ತುಣುಕಯ್ಯಾ ....!!                   - ಅಂಜಾರು ಮಾಧವ ನಾಯ್ಕ್

ಫೇಸ್ಬುಕು

ಅದೊಂದಿತ್ತು ಕಾಲ ಅಮ್ಮ ಹೇಳುತ್ತಿದ್ದರು ಅಟೋಟವು ಮುಗಿದರೆ ಹಿಡಿದುಕೊ ಬೂಕು  ಕೇಳಿಯೂ ಕಿವಿಕೊಡದೆ ಆಡುತ್ತಿದ್ದರು  ಅಮ್ಮಿ  ಚುಮ್ಮಿ  ಟಿಂಕು ಮತ್ತು ಎಂಕು ! ಆದರಿಂದು  ಎಲ್ಲರೂ ಮುಗಿಬೀಳುವರು  ಮಾಯಾಜಾಲವಿದು ಹೊಸಯುಗದ ಫೇಸ್ಬುಕು  ಯಾರ‍್ಯಾರದೋ ಪೋಸ್ಟು, ಕಮೆಂಟು , ಲೈಕು , ಶೇರುಗಳು  ಅರ್ಥವಾಗದೆನಗೆ ಯುವಜನಗೇಕಿದೆ ಇದರ ವಿಪರೀತ ಸೋಂಕು ?                                                         - ಅಂಜಾರು ಮಾಧವ ನಾಯ್ಕ್ 

ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ .......

ಹಲವು ಜಾತಿ ಮತ ಪಕ್ಷಗಳು , ಒಂಥರಾ ವಿಚಿತ್ರ ಸತ್ಯಾಂಶ ತಿಳಿದೂ ಕುರುಡರಾಗಿ ಬಾಳುವರು , ಇದು ಸತ್ಯ...! ತನ್ನನ್ನು ಹೊಗಳಿಕೊಲ್ಳುವರು ಮೇಧಾವಿ , ಮೇಲ್ಜಾತಿಯೆಂದು ಪರರನು ತೆಗಳುವರು  ಹುಂಬನು , ಕೀಳ್ಜಾತಿಯೆಂದು ಸತ್ಯ ನಿತ್ಯ ಬದುಕಲಿ ಎದುರಾಗದು ಅಂತರ ಕೆಚ್ಚೆದೆಯಿಂದ ಬಾಳುವೆ ನೀ.., ಪ್ರೀತಿ ಹೃದಯದ ಸಂಸಾರ ತಿಳಿದುಕೋ ತಾ ಮೊದಲು ಮನುಜ ಜನ್ಮವು ನಶ್ವರ ಒಳಿತಾಗಿ ಬದುಕಲು ಕಲಿ , ಹುಟ್ಟಿ ಬಂದ ಪುಣ್ಯಕ್ಕೆ ..! ಎಲ್ಲಾ ಜಂಜಾಟಗಳ ತಾ  ಸೃಷ್ಟಿಸಿಕೊಂಡಿರುವೆ ಅತಿರೇಕಕೆ ಬಲಿಯಾಗದಿರು ದ್ರೋಹಿಸದಿರು ಆತ್ಮಕೆ ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ ವ್ಯರ್ಥ ಪ್ರಯತ್ನಕೆ ಕೈ ಹಾಕದಿರು ಒಳ್ಳೆ ಬುದ್ದಿ ಬಂದಾಗ                                  - ಅಂಜಾರು ಮಾಧವ ನಾಯ್ಕ್

ಹೊಸ ಹುಮ್ಮಸ್ಸು..........

ಪಡುತಿಹೆನು ಜಿಗುಪ್ಸೆ ಹರಸಾಹಸದ ಬದುಕಲಿ ವ್ಯರ್ಥವೆನಿಸುವುದು ಜೀವನ ಕಲ್ಲು ಮುಳ್ಳಿನ ಹಾದಿಯಲಿ ಅದೇನೋ ಹಂಬಲ ಎನಗೆ ನಾಳೆಗಾಗಿ ಬದುಕುವ ಛಲ ನೀಡುತ್ತಿದೆ ಹೊಸ ಚಿಗುರು ಸಹನೆಯೆಂಬ ಪ್ರತಿಫ಼ಲ ಹಸನಾಗಿರಲಿ ಪ್ರತಿಕ್ಷಣ , ತುಂಬಿ ಹರಿಯಲಿ ಉಲ್ಲಾಸವು ಮುಳುಗದಿರಲಿ ಎಂದಿಗೂ ವಿಶ್ವಾಸದ ಬಾಳ ನೌಕೆಯು ಕೆಲಬಾರಿ ಮನಮುದುಡುವುದು , ಸಾಕಾಯಿತೆನಗೆ ಬದುಕೆಂದು ಆಶಿಸುವೆ ಬರುತಿರಲಿ, ಹೊಸ ಹುಮ್ಮಸ್ಸು  ಪುಟಿಯಲೆಂದು                                                - ಅಂಜಾರು ಮಾಧವ ನಾಯ್ಕ್ .