ಆ ಕಾಲ ..ಈ ಕಾಲ

ಬೆಳಗಾಗಲು ತಂದೆ ತಾಯಿ ಪಾದ ಪೂಜೆಯ,  ಆ ಕಾಲ
ಅವಸರದಿ ಎದ್ದು ಹಲ್ಲುಜ್ಜದೆ ಮೊಬೈಲಂತರ್ಜಾಲ ನೋಡುವ,  ಈ ಕಾಲ

ಬಸ್ಸಲಿ ಪಯಣಿಸಿ ಸಂತೋಷಪಡುತ್ತಿದ್ದ,   ಆ ಕಾಲ
ಸಾಲ ಸೋಲ ಮಾಡಿ ಬೈಕು ಸವಾರಿಯ,  ಈ ಕಾಲ

ಮನೆಮಂದಿಗೆ ಬಿಸಿಯಾದ ಔತಣದ, ಆ ಕಾಲ
ಮನೆ ಮನೆಗೆ  ಕೆ . ಎಫ್ .ಸಿ ತಿನ್ನೋ ಚಟದ, ಈ ಕಾಲ

ಮೈ ತುಂಬಾ ಬಟ್ಟೆ ಧರಿಸಿ ಓಡಾಡುವ,  ಆ ಕಾಲ
ಶರೀರ ಉಬ್ಬು ತಗ್ಗು ಎತ್ತಿ ತೋರಿಸುವ,  ಈ ಕಾಲ

ಹಾಲು ಮೊಟ್ಟೆ ಪಾನಕ ಕುಡಿಯುವ,  ಆ ಕಾಲ
ಕೋಕ ಕೋಲ  ಪೆಪ್ಸಿ ಟೋಪಿಕಾನ ಕುಡಿಯೋ ಈ ಕಾಲ

ಬದಲಾಗಿದೆ ದಿನಚರಿ ಆ ಕಾಲಕ್ಕಿಂತ ಈ ಕಾಲ
ಇನ್ನಾದರೂ ಮರುಕಳಿಸಲಿ ಶಿಸ್ತಿನ ದಿನ ಬರೋ ಕಾಲ

                          - ಅಂಜಾರು ಮಾಧವ ನಾಯ್ಕ್




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ