ನನ್ನ ಪ್ರೀತಿಯ ಸೂರಿ ....

 ನೀಲಿ ಬಾನಲಿ ತೇಲೊ ಸಮಯದಲಿ
 ಸ್ನೇಹವಾಯಿತೆನಗೆ  ತುಳುವ ಚಿಂತಕ ಸ್ಪೂರ್ತಿಯು ..!

ಯೋಗಕ್ಷೇಮ ವಿಚಾರಧಾರೆ ಚಿಂತನ ಮಂಥನ ...
ಅದರೊಂದಿಗೆ ಎರೆದೆ  ಎನ್ನ ಸಂಕ್ಷಿಪ್ತ ಬಾಳ ಪುಟವ ..!

ತೆರೆದರು ತುಳುವಿನ ಬಾಗಿಲನು ಸಂತಸದಲಿ ...
ಆಯಿತೆನಗೆ ಹರುಷವೋ ಹರುಷ ಕ್ಷಣಮಾತ್ರದಲಿ ..!

ಕೇಳಿದರೊಂದು ಪ್ರಶ್ನೆ ಪಯಣಿಸುತಿರುವಂತೆ
ನೀ ಬೇಗನೆ ಬರುವೆಯ ತುಳು ಮಂಚಕೆ  ..!

ತಟ್ಟನೆ ಒದರಿದು ನಾಲಗೆ "ನನಗೇನು ಪ್ರಯೋಜನ "
'ಹತ್ತು ಹಲವಾರು ' ಉತ್ತರ ಎನ್ನ ಕಿವಿಗೆ ಬಿತ್ತರ ..!!

ಮರಭೂಮಿಯ ಸ್ಪರ್ಶಿಸಲು ಅರಿವಾಯಿತೆನಗೆ .?
ಸ್ನೇಹದ ಕಡಲೊಂದು ಸಿಕ್ಕಿರುವುದು ನಿನಗೆ ..

ಗಟ್ಟಿಯಾಯಿತು ಭಾವನೆ ವರುಷವು ಕಳೆದಂತೆ
ಒಂದಾಗಿರುವೆ ಇಂದಿಗೂ ಉಸಿರಂತೆ ಇರುವೆ ..

ಹೇಳದೇ ಹೋದರೆ ಇರಲಾರದು ಹೆಮ್ಮೆ ...
ನಗುಮೊಗವ ತೋರುವ 'ಸೂರಿ'ಯ ಒಲುಮೆ

ಕರೆವರು ಎಲ್ಲರೂ 'ಸೂರಿ ' ಎಂದು ಪ್ರೀತಿಯಲಿ
ಬೆಳಗಲಿ ಸೂರ್ಯನಂತೆ ಜೀವನವು ಸು-ರಸದಲಿ ....

                    - ಅಂಜಾರು ಮಾಧವ ನಾಯ್ಕ್












Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ