'ಶಾಪಿಂಗ್ ಮಾಲ್ ನಲಿ' ನನ್ನಾಕೆ ....

ಅದೊಂದು ಕ್ಷಣ
ನೆನೆಸಿಕೊಂಡಳು ನನ್ನಾಕೆ...!
ಬಾಲ್ಯದಲಿ ಆಡಿದ
ತುಂಟಾಟಗಳ ..!

ಮೊನ್ನೆ ನಡೆದಾಡಿದಳು
'ಶಾಪಿಂಗ್ ಮಾಲಿನಲಿ'  ಈಕೆ ....
ಟ್ರಾಲಿಯ ದೂಡುತ ಕೇಳಿದಳು ನನ್ನ.....,
ಇದರಲಿ ಹಾರ್ನ್ ಇಲ್ಲ ಯಾಕೆ !

ಅಯ್ಯೋ ಅಂತ ನನಗೆನಿಸಿತು  ,
ಇನ್ನೂ ಮರೆಯಬಾರದು ಯಾಕೆ .
ತಿರುಗಿ ಯೋಚಿಸಿ ತಿಳಿದೆ ,
ಜೀವನದ ಆಟಕೆ ಪ್ರಾಯದ ಅಂತರವಿಲ್ಲ ಜೋಕೆ ...!!

               - ಅಂಜಾರು ಮಾಧವ ನಾಯ್ಕ್

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ