ಶ್ರೀ ಕೃಷ್ಣ ನಿನ್ನ ಚರಣಕೆ ..!
ಸೌಖ್ಯವೋ ...! ಅಸೌಖ್ಯವೋ ...!
ಕಾಲ ಘಟ್ಟದ ಪ್ರಾಮುಖ್ಯವೋ..!
ಮುಖ್ಯ ಕಾರ್ಯಗಳ ಸಮರ್ಥಕತೆಯೋ ..!
ನಿತ್ಯ ಕ್ಷಣದ ಆನಂದವೋ ..!
ಲಕ್ಷ್ಯವಿಲ್ಲದ ಜೀವಕೆ
ಅಕ್ಷಿ ಪಟಗಳ ಕಮ್ಮಟವೋ..!
ಭಿಕ್ಷುಕನಾಗಿ ಬಂದಿಹೆ ನಾ
ಶ್ರೀ ಕೃಷ್ಣ ನಿನ್ನ ಚರಣಕೆ ..!
ರಕ್ಷಿಸೆನ್ನ ನಿನ್ನ ಪೂಜಿಸಲು
ಪ್ರಾಣ ಪಕ್ಷಿ ಹಾರಿದರೂ ..!
- ಅಂಜಾರು ಮಾಧವ ನಾಯ್ಕ್
Comments
Post a Comment