ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು ..

ನ್ಯಾಯಕ್ಕೆಂದೇ....  ಅಲೆದಾಡುವರು ಕೋರ್ಟು ಕಛೇರಿ
ಅನ್ಯಾಯಕ್ಕೆಂದೇ ... ಜನಿಸಿ ಬಿಡುವರು ಬೀದಿ ಬೀದಿಯಲಿ

ಕೈ ಮುಗಿಯಲೆಂದೇ ಓಡಾಡುವರು ದೇಗುಲಗಳ
ಮನದ , ಮನೆಯ ದೇವರನೇ ಮರೆವರು ಜನರು

ಅಧಿಕಾರಿಯು ನಾನು , ನೀ ಎನ್ನ ಚೇಲನಯ್ಯ ಎನುವರು
ನಾಯಿ ಬಾಲದಂತೆ ಅಲ್ಲಾಡುವರು , ಮೇಲಧಿಕಾರಿಯ ಕಂಡು ಕೆಲವರು

ಡೊಂಬರಾಟ ಮಾಡುವರು ನಾಯಿ ಕುನ್ನಿಗಳ ಸೇರಿಸಿ
ಕಂಡ ತ್ಯಾಜ್ಯ , ಮಾಂಸವ ಕಚ್ಚಿ ತಿನುವರು

ಕಷ್ಟಪಟ್ಟ  ಪುಣ್ಯಕೆ..  ಮುತ್ತುಗಳ ಗಳಿಸುವೆ
ನನ್ನಿಷ್ಟದಂತೆ ಹಾಯಾಗಿರುವೆ ತೃಪ್ತಿಯಲಿ ...

ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು ..
ನಿತ್ಯ ಆನಂದವಾಗಿರುವುದು ನಿನ್ನ  ಜೀವನವು

                     - ಅಂಜಾರು ಮಾಧವ ನಾಯ್ಕ್

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ