ಫೇಸ್ಬುಕು
ಅದೊಂದಿತ್ತು ಕಾಲ ಅಮ್ಮ ಹೇಳುತ್ತಿದ್ದರು
ಅಟೋಟವು ಮುಗಿದರೆ ಹಿಡಿದುಕೊ ಬೂಕು
ಕೇಳಿಯೂ ಕಿವಿಕೊಡದೆ ಆಡುತ್ತಿದ್ದರು
ಅಮ್ಮಿ ಚುಮ್ಮಿ ಟಿಂಕು ಮತ್ತು ಎಂಕು !
ಆದರಿಂದು ಎಲ್ಲರೂ ಮುಗಿಬೀಳುವರು
ಮಾಯಾಜಾಲವಿದು ಹೊಸಯುಗದ ಫೇಸ್ಬುಕು
ಯಾರ‍್ಯಾರದೋ ಪೋಸ್ಟು, ಕಮೆಂಟು , ಲೈಕು , ಶೇರುಗಳು
ಅರ್ಥವಾಗದೆನಗೆ ಯುವಜನಗೇಕಿದೆ ಇದರ ವಿಪರೀತ ಸೋಂಕು ?
- ಅಂಜಾರು ಮಾಧವ ನಾಯ್ಕ್
Comments
Post a Comment