ಓಂ ಗಂ ಗಣಪತಯೇ ನಮಃ

ಓಂ ಗಂ ಗಣಪತಯೇ ನಮಃ

ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ... ಜೈ ಗಣೇಶ

ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ  ಎನ್ನಿರೋ
ಭಕ್ತಿ ಭಾವದಿಂದ ಅವನ ನಾಮ ಸ್ಮರಣೆ ಮಾಡಿರೋ ..।।೧।।

ಬತ್ತಿ ಕರ್ಪೂರ ದೀಪ ಭಕ್ತಿಯಿಂದ ಬೆಳಗಿರೋ ..
ನಿತ್ಯ ವಿನಾಯಕನ ಕೃಪೆಗೆ ಪಾತ್ರರಾಗಿರೋ ..  ।।೧।।

ಫಲ ಪುಷ್ಪಗಳಿಂದ ಅಲಂಕಾರ ಮಾಡಿರೋ ..
ಮನದಿ ಬರೋ ಅಹಂಕಾರ ದೂರ ಮಾಡಿರೋ ..।।೧।।

ಚೌತಿಯ ದಿನವಿಂದು ನಕ್ಕು ನಲಿಯಿರೋ ...
ಘಂಟಾ ಘೋಷದಿ ಅವನ ಕೊಂಡಾಡಿರೋ ...।।೧।।

ಶಿವ ಪಾರ್ವತಿ ಪುತ್ರನ ನಿತ್ಯ ನೆನೆಯಿರೋ ...
ವಿದ್ಯೆ ಬುದ್ಧಿ  ಗಳಿಸಿ ನೀವು ಗಣ್ಯರಾಗಿರೋ ..।।೧।।

ವಿಘ್ನವಿನಾಶಕಗೆ ಹೃದಯದಲ್ಲಿ ಸ್ಮರಿಸಿರೋ ..
ಸಕಲ ಕಷ್ಟ ಕಾರ್ಪಣ್ಯವ  ದೂರ ಮಾಡಿರೋ ..।।೧।।

ಬಂಧು ಬಳಗ ಎಲ್ಲ ಸೇರಿ ಸಿಹಿಯ ಹಂಚಿರೋ
ದೇವಪ್ರಸಾದ ಸವಿದು ಹರುಷರಾಗಿರೋ.. ।।೧।।

ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ..  ಜೈ ಗಣೇಶ

ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ  ಮೋರ್ಯ

                           - ಅಂಜಾರು ಮಾಧವ ನಾಯ್ಕ್


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ