ಹೊಸ ಹುಮ್ಮಸ್ಸು
ಪಡುತಿಹೆನು ಜಿಗುಪ್ಸೆ ಹರಸಾಹಸದ ಬದುಕಲಿ
ವ್ಯರ್ಥವೆನಿಸುವುದು ಜೀವನ ಕಲ್ಲು ಮುಳ್ಳಿನ ಹಾದಿಯಲಿ
ಅದೇನೋ ಹಂಬಲ ಎನಗೆ ನಾಳೆಗಾಗಿ ಬದುಕುವ ಛಲ
ನೀಡುತ್ತಿದೆ ಹೊಸ ಚಿಗುರು ಸಹನೆಯೆಂಬ ಪ್ರತಿಫ಼ಲ
ಹಸನಾಗಿರಲಿ ಪ್ರತಿಕ್ಷಣ , ತುಂಬಿ ಹರಿಯಲಿ ಉಲ್ಲಾಸವು
ಮುಳುಗದಿರಲಿ ಎಂದಿಗೂ ವಿಶ್ವಾಸದ ಬಾಳ ನೌಕೆಯು
ಕೆಲಬಾರಿ ಮನಮುದುಡುವುದು , ಸಾಕಾಯಿತೆನಗೆ ಬದುಕೆಂದು
ಆಶಿಸುವೆ ಬರುತಿರಲಿ, ಹೊಸ ಹುಮ್ಮಸ್ಸು ಪುಟಿಯಲೆಂದು
- ಅಂಜಾರು ಮಾಧವ ನಾಯ್ಕ್ .

Comments
Post a Comment