'ವಿಘ್ನ ವಿನಾಶಕ'
ಓಂ ಶ್ರೀ ಮಹಾಗನಪತಯೇ ನಮಃ ।।೩।।
ವಿಘ್ನ ವಿನಾಶಕ.. ನಮ್ಮಯ ರಕ್ಷಕ...
ಭಕುತರ ಪಾಲಿಸೋ ವಿನಾಯಕ.... ।।೧।।
ಮೊದಲ ಪೂಜೆಯ ಪಡೆಯುವ ದೇವನೇ...
ಸಿದ್ಧಿ -ಬುದ್ಧಿ ಪ್ರದಾಯಕ ಗಣನೇ... ।।೧।।
ರಕ್ತಚಂದನದಲಿ ಅಭಿಷೇಕ ಮಾಡುತ....
ಚೌತಿಯ ದಿನವಿಂದು ನಿನ್ನ ಪೂಜೆ ಮಾಡುವೆ... ।।೧।।
ಮೋದಕಪ್ರಿಯನೇ... ಗಜಮುಖ ದೇವನೆ....
ಲಡ್ಡು, ಗರಿಕೆ ಪ್ರಿಯ ಮೂಷಿಕವಾಹನನೆ ।।೧।।
ಶಿವ ಪಾರ್ವತಿಯರ ಪ್ರಿಯ ಪುತ್ರನೇ ..
ನಂಬಿದ ಭಕ್ತಗೆ ಜಯನೀಡೋ ಗಣಪನೇ .. ।।೧।।
ರಕ್ಷಿಸೆನ್ನ ಗಜವದನ.... ಏಕದಂತನೇ ..
ಶಕ್ತಿ ನೀಡೆನಗೆ ಹೇ ಲಂಬೋದರನೇ.. ।।೧।।
-ಅಂಜಾರು ಮಾಧವ ನಾಯ್ಕ್
ವಿಘ್ನ ವಿನಾಶಕ.. ನಮ್ಮಯ ರಕ್ಷಕ...
ಭಕುತರ ಪಾಲಿಸೋ ವಿನಾಯಕ.... ।।೧।।
ಮೊದಲ ಪೂಜೆಯ ಪಡೆಯುವ ದೇವನೇ...
ಸಿದ್ಧಿ -ಬುದ್ಧಿ ಪ್ರದಾಯಕ ಗಣನೇ... ।।೧।।
ರಕ್ತಚಂದನದಲಿ ಅಭಿಷೇಕ ಮಾಡುತ....
ಚೌತಿಯ ದಿನವಿಂದು ನಿನ್ನ ಪೂಜೆ ಮಾಡುವೆ... ।।೧।।
ಮೋದಕಪ್ರಿಯನೇ... ಗಜಮುಖ ದೇವನೆ....
ಲಡ್ಡು, ಗರಿಕೆ ಪ್ರಿಯ ಮೂಷಿಕವಾಹನನೆ ।।೧।।
ಶಿವ ಪಾರ್ವತಿಯರ ಪ್ರಿಯ ಪುತ್ರನೇ ..
ನಂಬಿದ ಭಕ್ತಗೆ ಜಯನೀಡೋ ಗಣಪನೇ .. ।।೧।।
ರಕ್ಷಿಸೆನ್ನ ಗಜವದನ.... ಏಕದಂತನೇ ..
ಶಕ್ತಿ ನೀಡೆನಗೆ ಹೇ ಲಂಬೋದರನೇ.. ।।೧।।
-ಅಂಜಾರು ಮಾಧವ ನಾಯ್ಕ್
Comments
Post a Comment