ನಿನ್ನ ಬರುವಿಕೆ

ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ
ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ

ಕಾಲುದಾರಿಯ ಸ್ವಚ್ಚವಾಗಿಸಿ
ಕಲ್ಲು ಮುಳ್ಳನು ದೂರ ಸರಿಸಿ
ಸುಖ ಪಯಣ ಬಯಸುತಿಹೆ
ನಿನ್ನ ಬಾಳಲಿ ...

ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ
ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ

ಕೈ ತುಂಬಾ ಹೂ ಗುಚ್ಛ
ಅಂಗಳದಿ ರಂಗೋಲಿ
ಎದೆ ತುಂಬಾ ಪ್ರೀತಿ ಭರಿಸಿ
ನಿನ್ನ ಸ್ವಾಗತಿಸುವೆ ...

ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ
ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ

ಮನೆತುಂಬಾ ಸಂತೋಷದ
ಕಾಲ್ಗೆಜ್ಜೆ ದನಿಯ ಪಸರಿಸಿ
ಎನ್ನ ಒಡಲಲಿ ಸೇರು ಬಾ
ಓ ನನ್ನ ಗೆಳತಿ ...

ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ
ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ

ಹಾಯಾಗಿರಲಿ ನಮ್ಮ ಬದುಕು
ನನಸಾಗಲಿ ಕನಸುಗಳು
ಸೇರಿ ನಡೆಯೋಣ
ಬಾಳರಥದ ದಾರಿಯಲಿ

ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ
ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ

                     - ಅಂಜಾರು ಮಾಧವ ನಾಯ್ಕ್








Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.