'ಮತ್ತೆ ಬಾ ಮಧುರ ಬಾಲ್ಯ'

ಕಣ್ಣಾಮುಚ್ಚಾಲೆ ಆಡೋವಾಗ
ಅವಿತು ಕುಳಿತು ಇರೋ ಜಾಗ
ಪತ್ತೆ ಹಚ್ಚಿ ನೀ ಸಿಕ್ಕಿದಾಗ
ಅಚ್ಚರಿಯಾದೆ ನನ್ನ ನೋಡಿ
ಬೆಚ್ಚಿ ಕಿರುಚಿದೆ ಮುಟ್ಟುವಾಗ ..!

ತಟ್ಟನೆ ಎದ್ದು ಓಡಿಬಿಟ್ಟೆ
ನಿನ್ನ ಹಿಂಬಾಲಿಸಿ ಬಂದು ಬಿಟ್ಟೆ
ಮುಟ್ಟಿ ಕಟ್ಟಿ ತಿರುಗಿಸಿ ಬಿಟ್ಟೆ
ಬೆಟ್ಟಕೆ ನಗುವ ಕಳುಹಿಸಿ ಬಿಟ್ಟೆ
ನನ್ನೆದೆ ಬಡಿತವ ಹೆಚ್ಚಿಸಿ ಬಿಟ್ಟೆ ..!

ಅಮ್ಮನ ಕೂಗು ದೂರದ ಕೋಣೇಲಿ
ಮೈ ಜುಮ್ಮೆನಲು ಕೇಳಿ ನಮಗೂ
ತಮ್ಮನ ಕೂಡಿ ಓಡಿದೆ ಆಗ
ತಿಂಡಿಯ ಕೊಟ್ಟು ಬಿಟ್ಟಳು ಬೇಗ
ತಟ್ಟೆಯ ಖಾಲಿಯೆ ನನ್ನಯ ವೇಗ ...!

ಗಾನ ಕೋಗಿಲೆಯ  ಇನಿದು ರಾಗ
ಅಂಗಳದಿ ಕರುವಿನ ಓಟದ ನೋಟ
ನೋಡುತ ಕುಳಿತೆ ಖುಷಿಯ ಆಟ
ಎನ್ನ ಮನವು ಕಲಿಯಿತು ಪಾಠ
ಬಾಲ್ಯದ ದಿನಗಳ ರಂಗಿನ ಆಟ...!

                 - ಅಂಜಾರು ಮಾಧವ ನಾಯ್ಕ್ ,


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ