ಹೇ ಚೆಂದುಳ್ಳಿ .....

ತನನಾನ ... ನಾನ ನನ ತಾನನ
ತನ ನಾನ ತಾನ ನನ....  ತನನನ ....

ಹುಡ್ಗ : ಹೇ ಚೆಂದುಳ್ಳಿ .....
          ನಿನ್ನ ಪ್ರೀತಿ ಮಾಡಲೆಂದೆ ಜನಿಸಿ ಬಂದೆನಾ ...?
          ನನ ಪ್ರೀತಿ ನಿನಗಾಗಿಯೆ ನಿನ್ನ ಬಿಡೆನಾ ..!

ಹುಡ್ಗಿ : ಹೇ ಹೋಗಯ್ಯ .....
          ನಿನ್ನ ಕಾಟ ತಡೆಯದಿರೆ  ಬೇಸತ್ತು ಹೋದೆನಾ ..?
          ನಿನ್ನ ಮಾಟಮಾತಿಗೆ ಸಿಕ್ಕಿ ಬೀಳೆನಾ ...!
          ಏಟಿಗಾಗಿ ಕಾಯುತ್ತಿರು ಸ್ವಲ್ಪ ನಿಲ್ಲು ನೀ ....
          ಬೇಟೆ ಮಾಡಿ ಮುಗಿಸಿಬಿಡುವೆ  ಓಡಿ  ಹೋಗು ನೀ ..

ಹುಡ್ಗ : ಹೇ ಹೂ ಬಳ್ಳಿ ....
          ಮೋಸಮಾಡಲಾರೆ , ನಿನ್ನ ಮೇಲೆತ್ತಿ ಕುಣಿವೆ ನಾ ...!
          ಹೃದಯದಲ್ಲಿ ಬಂದು ಸೇರು ಈ ಪ್ರೇಮಗಾರನ ...!
          ಓ ಮೊಗ್ಗು ಮಲ್ಲಿಗೆ ... ಬೇಗ ಬಾರೆ ಇಲ್ಲಿಗೆ ...( ನಾ ನಿನ್ನ ಪ್ರೇಮಿ ಕಣೆ...   )

ಹುಡ್ಗಿ : ಅಯ್ಯಯ್ಯೋ .............. ಛೆ ...
          ಪೀಸು ಪೀಸು ಮಾಡಿ ಬಿಡುವೆ ನನ್ನ ತೊಟ್ಟರೆ ...
          ಮೂತಿ ಒಡೆದು ಸೀಳಿ ಬಿಡುವೆ ಕೋಪಗೊಂಡರೆ .....
          ಬೇಸು...  ನನ್ನ ದಾರಿ ಬಿಟ್ಟು ಓಡಿ ಹೋದರೆ ... ಹುಂ ....!

ಹುಡ್ಗ : ಅಯ್ಯ್ಯಯ್ಯೋ ... ಬೇಡ ಕಣೇ .....!
          ಏ ಹಳ್ಳಿ ಹುಡುಗಿ.....  ನೀ ನನ್ನ ಬೆಡಗಿ ....
          ರಾತ್ರಿ ಹಗುಲು ನೆನೆದು ಆಗುತಿಹೆ ಎಡೆಬಿಡಂಗಿ ...
          ನೀ ಪಂಚರಂಗಿ , ಚಂದ್ರಮುಖಿ , ಹುಚ್ ಮಾಡ್ದೆ ಎದೆ ಕುಲುಕಿ ..! ( ಕನಸಿಗೆ ಜಾರ್ತಾನೆ )

ಹುಡ್ಗಿ : ಹೇ ... ಹ್ಹ ಹ್ಹ ಹ್ಹ ... ಹ್ಹಾ ... ಹ್ಹಿ ಹ್ಹಿ ಹ್ಹಿ ....(ನಗು)
          ನಮ್ಮೂರ್ ಹುಡ್ಗ ಪ್ರೀತಿ ಹುಡ್ಗ ,,,,,
           ನಾ ಮುದ್ದು ಮಾಡಿ ಹೊದ್ದುಕೊಳುವೆ ... ಚಟ ಪಟ ಬೇಗ ...
          ರಾಜ ... ಹಿಡಿದಪ್ಪಿಕೋ ... ಮುತ್ತು ಕೊಟ್ಟು ಸಿಹಿತುಟಿಯ ಒರೆಸಿಕೋ .... ಹ್ಹ ಹ್ಹ ಹ್ಹ

ಹುಡ್ಗ : ಉಮ್ಮ ಉಮ್ಮ ಉಮ್ಮ ಉಮ್ಮ , ಮುತ್ತಿನ ಸಾಲಮ್ಮ
          ಸುಸ್ತಾಗಿ ಹೋಗಲಾರೆ ಎತ್ತಿ ನಡೆದರೂ ...
          ಸಿಹಿಯಾದ ಸಂತೋಷದ ಜೇನ ಹನಿ ನೀ ....

ಹುಡ್ಗಿ : ಹೇ ....... ಮುದ್ದು ರಾಜ .....
         ಒಪ್ಪಿಕೊಂಡೆ ನಿನ್ನ ಪ್ರೀತಿ ಸಾವಿರ ಜನರ ಮುಂದೆ .....
         ತಬ್ಬಿಕೊಂಡೆ ನಿನ್ನ ಮನದಿ ... ಕುಣಿದು ಕುಣಿದು ಜಗದಿ
         ಹೇ ಮುದ್ದು ರಾಜ ...... ಹೇ ಮುದ್ದು ರಾಜ ...... ಹೇ ಮುದ್ದು ರಾಜ ...... (ಕನಸಿಂದ ಏಳ್ತಾನೆ)


ಹುಡ್ಗ : ಹೇ ಚೆಂದುಳ್ಳಿ .....
          ನಿನ್ನ ಪ್ರೀತಿ ಮಾಡಲೆಂದೆ ಜನಿಸಿ ಬಂದೆನಾ ...?
          ನನ ಪ್ರೀತಿ ನಿನಗಾಗಿಯೆ ನಿನ್ನ ಬಿಡೆನಾ ..!


        ಲಿರಿಕ್ಸ್ : ಅಂಜಾರು ಮಾಧವ ನಾಯ್ಕ್


       
         






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.