'ನಿನ್ನ ಕಣ್ಣ ನೋಟ'

ನಿನ್ನ ಕಣ್ಣ ನೋಟ ಹೃದಯ ಬಡಿತದ ಓಟ
ಹೆಚ್ಚು ಮಾಡಲು ಆಸೆ ಎನಗೆ ನಿನ್ನ ಮುದ್ದಾಟ

ಕಂದನ ಹೋಲುವ ನಿನ್ನಯ ಮನಸು
ತೀರಿಸಲಾಗದೆ ಆ ಋಣವ
ಚಡಪಡಿಸಿ ಕಾಯುತಿದೆ
ನೀ ಬಾಳಿಗೆ ಬರೋ ಕ್ಷಣ ..!

ರಕ್ತ ಕಣವು ನಿನ್ನ ಕಾಯಲು
ಮೈ ಬಿಸಿ ಏರುತ ಹೋಗಲು
ಉಸಿರ ವೇಗ ದೂಡುತಿದೆ
ಕೂಗಿ ಕರೆಯೋದು ಎನ್ನ ಒಡಲು
ನೀ ಬೇಗನೆ ಬಂದು ಸೇರೆನ್ನ ..!

ಬಯಲು ಸೀಮೆಯ ಮರದ ಕೆಳಗೆ
ತಂಗಾಳಿ ಸವಿದಂತಿದೆ ನಿನ್ನ ಮಾತು
ದೂರದಿ ಕಂಗೊಳಿಸುವ ನಿನ್ನ ಕಣ್ಣು
ಸೆಳೆಯುತಿದೆನ್ನ ಉಯ್ಯಾಲೆ ಆಟಕೆ

ನೀಲಾಕಾಶದಲಿ ನಕ್ಷತ್ರವ ನೋಡಿ
ನಗುವೆ ನಾ ನಿನ್ನ ಮೊಗ ಊಹಿಸಿ
ಕರೆದೊಯ್ಯು ನಿನ್ನ ಜೊತೆ
ಮಿನುಗು ನಕ್ಷತ್ರವಾಗಲು ನಿನ್ನಲಿ ..!

ನಿನ್ನ ಕಣ್ಣ ನೋಟ ಹೃದಯ ಬಡಿತದ ಓಟ
ಹೆಚ್ಚು ಮಾಡಲು ಆಸೆ ಎನಗೆ ನಿನ್ನ ಮುದ್ದಾಟ

                  -ಅಂಜಾರು ಮಾಧವ ನಾಯ್ಕ್ 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ