ಕಾಲೇಜು ಲೈಫು

ಕಾಲೇಜು ಹೋಗಲು ಸಂತೋಷವೆಲ್ಲಾ
ಪಾಠ ಕೇಳಲು ಉಲ್ಲಾಸವಿಲ್ಲಾ
ಸಿನೆಮಾ ನೋಡಲು ಸೇರಿದೆವೆಲ್ಲಾ
ನಮ್ಮಿ ಕಾಲೇಜು ಹುಡುಗರೆಲ್ಲಾ  ....

ದೂರದಿ ಕಾಣೋ ಟೀನೇಜು ಹುಡುಗಿಯ
ಸೀಟಿ ಹೊಡೆದು ಕರೆದೆವೆಲ್ಲಾ ...
ಹತ್ತಿರ ಬಂದು ಕೆಂಪು ಮುಖದಿ
ಕ್ಯಾಕರಿಸಿ ಉಗುಳಿ ಹೋದಳಲ್ಲಾ ....

ಗುಂಪು ಹುಡುಗರು ನೋಡಿ ನಗಲು
ಚೆಂದುಳ್ಳಿ ಅವಳು ತಿರುಗಿ ಹೋಗಲು
ಹಿಂಬಾಲಿಸಿ ಹೋದರು ತರುಣರೆಲ್ಲಾ  
ತಿರುಗೇ ಬಿಟ್ಟಳು ನಮ್ ಸೈಡೆಲ್ಲಾ ...

ಅಯ್ಯೋ ...! ಎಂದು ಕಾಲ್ಕೆರೆದವಳು ...
ಎದ್ದು ಬಿದ್ದು ಓಡೋಡಿ ಹೋದರು ..
ತರುಣರ ಗುಂಪು ಚದುರಿ ಹೋದರು
ಕ್ಷಣದಿ ಬಂದು ಸೇರಿದರೆಲ್ಲಾ ...

ಪ್ರಾಂಶುಪಾಲರು ಬಂದೇ ಬಿಟ್ರು
ಆಪೀಸಿಗೆ ಕೆಲವರ ಕರೆದೇ ಬಿಟ್ರು
ಅಪ್ಪ ಅಮ್ಮಗೆ ಹೊರೆ ಅಂದೇ ಬಿಟ್ರು
ಕೊರೆದು ಕೊರೆದು ಬಿಟ್ಟರಲ್ಲಾ ...

ಮನೆಗೆ ವಿಷ್ಯ ತಿಳಿಯಿತಲ್ಲಾ
ಬೈಗುಳ ಸುರಿಮಳೆ ಹರಿಯಿತಲ್ಲಾ
ಪಾಕೆಟು ಮನಿ ಇಲ್ಲವೇ ಇಲ್ಲಾ
ಕಾಲೇಜು ಹೋಗಲು ಸಂತೋಷವೇ ಇಲ್ಲಾ ...:)

                            - ಅಂಜಾರು ಮಾಧವ ನಾಯ್ಕ್ 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.