ಮೌನ ಪ್ರೇಮ

ಕಲ್ಲರಳಿ ಹೂವಾಗಿ ಗಿಡಬೆಳೆದು ಮರವಾಗಿ
ಬೆಟ್ಟವೆಲ್ಲಾ ಹಸಿರಾಗಿ ನದಿನೀರು ತುಂಬಿ ಹರಿದು

ಭೂಮಿ ತಾಯಿ ಹಸನಾಗಿ ನಗು ನಗುತಿರಲು
ಮನವೆಲ್ಲಾ ಸಂತೋಷದ ಹೊಳೆ ಹರಿಯುವ ಭಾಸ

ಹಕ್ಕಿಗಳ ಚಿಲಿಪಿಲಿ ಶಬ್ದನಾದಗಳ ನಡುವೆ
ನನಗೆದ್ದು  ಉಲ್ಲಾಸದ ದಿನ ಆರಂಭಿಸಲು ತವಕ

ನಿಷ್ಕಲ್ಮಶ ತಂಪು  ಗಾಳಿ ಸವಿಯುತ
ಮೋಡಗಳ ಆಸರೆಯಲಿರಲು ಎಷ್ಟು ಸುಂದರ

ನೀ ಎನ್ನ ಪ್ರೀತಿಸುವ ಪರಿ ನೆನೆಯುತ
ಮುದವಾಯಿತು ಮನ ಮೌನ ಪ್ರೇಮಕೆ

          - ಅಂಜಾರು ಮಾಧವ ನಾಯ್ಕ್




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ