ಅಂದ - ಕಂದ
ನೀ ನೋಡಲು ಚೆಂದ
ನಾ ಪಡುವೆ ಆನಂದ ..!
ನಿನ್ನ ಕಣ್ಣಿನ ರೆಪ್ಪೆಯಾಟ ಅಂದ
ದುಂಡು ತುಟಿಗಳ, ಮುತ್ತು ಬಲು ಮಧುರ ..!
ಮೃದು ಕೈಯ ಸ್ಪರ್ಶ ಬಂಧ
ಕಾಲ್ಗೆಜ್ಜೆಯ ನಡುಗೆ ಚೆಂದ ..!
ಜಿಂಕೆ ಮರಿಯಂತೆ ಓಟ ಅಂದ
ಎನ್ನ ಮುದ್ದಿಸುವ ಹೃದಯ ಅಮರ ..!
ನೀ ಹೇಗಿದ್ದರೂ ಬಲು ಚೆಂದ
ಸುಖವಾಗಿರು ಓ ನನ್ನ ಮುದ್ದು ಕಂದ ..!
- ಅಂಜಾರು ಮಾಧವ ನಾಯ್ಕ್
ನಾ ಪಡುವೆ ಆನಂದ ..!
ನಿನ್ನ ಕಣ್ಣಿನ ರೆಪ್ಪೆಯಾಟ ಅಂದ
ದುಂಡು ತುಟಿಗಳ, ಮುತ್ತು ಬಲು ಮಧುರ ..!
ಮೃದು ಕೈಯ ಸ್ಪರ್ಶ ಬಂಧ
ಕಾಲ್ಗೆಜ್ಜೆಯ ನಡುಗೆ ಚೆಂದ ..!
ಜಿಂಕೆ ಮರಿಯಂತೆ ಓಟ ಅಂದ
ಎನ್ನ ಮುದ್ದಿಸುವ ಹೃದಯ ಅಮರ ..!
ನೀ ಹೇಗಿದ್ದರೂ ಬಲು ಚೆಂದ
ಸುಖವಾಗಿರು ಓ ನನ್ನ ಮುದ್ದು ಕಂದ ..!
- ಅಂಜಾರು ಮಾಧವ ನಾಯ್ಕ್
Comments
Post a Comment