'ಶಿವ ದೇವ 'ಸ್ತುತಿ

ನಾ ನಿನ್ನ ಧ್ಯಾನದೊಳು ಗಂಗಾಧರನೇ ...
ಸಲಹೆನ್ನ ಲೋಕದಿ ಶಿವಶಂಕರನೇ

ನಾ ನಿನ್ನ ಚರಣಕೆ ಶಿರಬಾಗಿ ಎರಗುವೇ
ಸ್ವಾಮೀ...  ಕರುಣೆಯ ತೋರೆನ್ನ ಭಕುತಿಗೆ ...

ಈ ಎನ್ನ ಜೀವವು ನಿನ್ನ ಸೇವೆ ಮಾಡಲು
ಪ್ರತಿ ನಿತ್ಯ ಪೂಜಿಪೆ, ಪಾದ ಪೂಜೆ ಮಾಡುವೆ

ಈಶ್ವರ , ಮುರುಡೇಶ್ವರ  ...
ಕೈ ಬಿಡದಿರೆನ್ನ ಕರುಣಾ ಸಾಗರ ...

ಸಾಸಿರ ನಾಮದ ನೀಲ ಕಂಠನೇ ..
ಸ್ತುತಿಸಲೆನ್ನ ನಾಲಗೆ ನಿನ್ನ ನಾಮ ಹರನೇ

ಜಯದೇವ ಜಯದೇವ ಜಯಮಹಾದೇವ
ಜಯದೇವ ಜಯದೇವ ಜಯಮಹಾದೇವ

               - ಅಂಜಾರು ಮಾಧವ ನಾಯ್ಕ್





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ