ಹೇ ದೇವನೇ ....

ವಜ್ರ ವೈಡುರ್ಯವಿಲ್ಲ ,ನನ್ನಲಿ
ನಿನಗೆ ಕಿರೀಟ ಧಾರಣೆ ಮಾಡಲು

ಘಂಟೆ ತಂಬೂರಿ ಇಲ್ಲ , ನನ್ನಲಿ
ನಿನ್ನ ಪೂಜೆ ಮಾಡಲು

ಹೂ ಸಿಂಗಾರಗಳಿಲ್ಲ , ನನ್ನಲಿ
ನಿನ್ನ ಸಿಂಗಾರ ಮಾಡಲು

ಜೇನು ತುಪ್ಪದ ಹನಿ ಇಲ್ಲ, ನನ್ನಲಿ
ನಿನಗೆ ಭೋಗ ನೀಡಲು

ಪಲ್ಲಕಿ ತೋರಣ ಇಲ್ಲ , ನನ್ನಲಿ
ನಿನ್ನ ಹೊತ್ತು ನಡೆಯಲು

                    - ಅಂಜಾರು ಮಾಧವ ನಾಯ್ಕ್


Comments