ಎನ್ನ ಉಸಿರಿನ ಅಮ್ಮ

ಎನ್ನ ಉಸಿರಿನ ಆರಂಭ ನಿನ್ನಿಂದಲೇ ಅಮ್ಮ
ಲೋಕವ ತೋರಿಸಿದ ದೇವತೆಯೇ ನೀನಮ್ಮ

ಭೂಸ್ಪರ್ಶ ಮಾಡಿಸಿ ಬಲಪಡಿಸಿದೆಯಮ್ಮ
ಪ್ರಾಪಂಚ ಬುದ್ದಿಯ ಕಲಿಸುವುದೇ ಅಮ್ಮ

ಎದ್ದರೂ....... ಬಿದ್ದರೂ... ಅತ್ತರೂ .. ನೋವಾದರೂ
ಹೂವಂತೆ ನೋಡುವೆ , ಬಂಗಾರ ಎನ್ನಮ್ಮ ...

ಮನೋ ಧೈರ್ಯ , ಸಾಧನೆ ಪ್ರೋತ್ಸಾಹ ನಿನದಮ್ಮ
ಕಷ್ಟವಿದ್ದರೂ ಸಂತೋಷದಿ ಬಾಳ ಹೇಳಿದ ಕೀರ್ತಿ ನಿನದಮ್ಮ

ಎಲ್ಲಾ ಮನೋವೆದನೆಗೆ ಬುದ್ಧಿ "ಕಲ್ಯಾಣಿ" ನೀನಮ್ಮ
ಕೋಪದಿ ಮಾಡಿದ ತಪ್ಪು ತಿದ್ದಿದ ಕೀರ್ತಿ ನಿನದಮ್ಮ ..

ಬಾಳಲಿ ಮುನ್ನುಗ್ಗಲು ನೀನು ನನಗೆ ಬೇಕಮ್ಮ ...
ನಿನ್ನ ಬಿಟ್ಟು ದೂರವಿರಲು ನನಗಾಗೋದಿಲ್ಲಮ್ಮ ...

ನಿನ್ನ ಕೊಂಡಾಡಲು ಎನ ನಾಲಗೆ ಸಾಲದಮ್ಮ
ನೀನು ಕೊಟ್ಟ ಜನ್ಮಕೆ "ಮಾಧವ" ಎಂದಾಗಿರುವೆನಮ್ಮ

ಅಮ್ಮ ನಿನ್ನ ಬಾಳು ಸುಖವಾಗಿರಲಮ್ಮ ....
ಆಶೀರ್ವಾದ ನನ್ನೊಂದಿಗೆ ಸದಾ ಇರಲಮ್ಮ ....

                     - ಅಂಜಾರು ಮಾಧವ ನಾಯ್ಕ್





Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ