ಎಂಥವರಯ್ಯಾ .....!!!!

ಹೆತ್ತ ತಾಯಿ , ಸಾಕಿ ಸಲಹಿದ ತಂದೆಯ ಮರೆತು
ನೀನೆಷ್ಟು ಗಳಿಸಿದರೂ , ತೃಪ್ತಿಯಾಗದು ನಿನ್ನ ಒಡಲು

ಸತ್ಯ ಧರ್ಮದ, ಅರ್ಥವನರಿಯದ ಷಂಡ ಮನುಜನು
ಸತ್ಯ ದೇವತೆಗೆ ನಿತ್ಯ ' ನೇಮ ' ಕೊಟ್ಟರೂ ವ್ಯರ್ಥವಯ್ಯ...

ಅಣ್ಣ ತಮ್ಮನ  ಬಂಧವನರಿಯದ ಮನುಕುಲವು
ಒಂದಾಗಿ ಬಂದು, ಕೊಂದು ತಿನ್ನಲು ಹವಣಿಪರು ...!

ಅಂಥರಾತ್ಮದಲಿ ಒಂದಷ್ಟು ನಂಜು ಹೊಂದಿ
ಬೆಣ್ಣೆಯಂತೆ ನಟಿಸುವರು ಕೆಲ ಬುದ್ದಿಜೀವಿಗಳು

ನಿಜ ವಿಷಯ ಅರಿತು ಆಡಂಭರವ ಮಾಡಲು ಹೊರಟರೇ
ತಂತ್ರಿ , ಭಟ್ಟರು ಮಾಡಿದ ಪೂಜೆಯು ವ್ಯರ್ಥವಯ್ಯ

ಭೂತ ಕೋಲದ ನೆಪದಿ ಕಾಸುಗಳಿಸುವ ಪೂಜಾರಿಯು , ಸಹಾಯಕನು
ಪೂಸಿ ಹೊಡೆದು ಹೆಂಡತಿಯ ಮಾರುವವನು ಆಗಿರಬಹುದಯ್ಯ ...!

ದೈವ ದರ್ಶನದ ಶಕ್ತಿಯನರಿಯದ ಕರ್ಮಸುತನು
ದುರುಪಯೋಗ ಮಾಡಿಕೊಳ್ಳುವರು ಹಿಂದೂ ಸಂಸ್ಕೃತಿಯ

ದುಡ್ಡು ಕೊಟ್ಟರೆ, ಚಟ್ಟದ ಬಟ್ಟೆಯನು ಕಟ್ಟಿಕೊಂಡು ..
ನಾ ಊರಿನ ಯಜಮಾನ , ಗುರಿಕಾರ ಎನುವರಯ್ಯ  ... !

ಸತ್ಯವನೆ.. ನಂಬಿ ಬದುಕಿದ  ನಿತ್ಯ ಜೀವನ ...
ಸತ್ತು ಹೋದರೂ ತೃಪ್ತಿಯಾಗದು ಮನವು ಈ ಪಾಪಿ ಜಗದಲಿ..

ಇದುವೇ ಕಲಿಯುಗ .. ಇದುವೇ ಹೊಸಯುಗ ..
ಇದುವೇ ಎನ್ನ ಅಂತರಾತ್ಮದ ತುಣುಕಯ್ಯಾ ....!!

                  - ಅಂಜಾರು ಮಾಧವ ನಾಯ್ಕ್






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ