ಸಾವಿರ ಜನುಮ

ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ .. 
ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ 

ಗಲ್ಲದ ಮೇಲೆ ಕೈಯನಿಟ್ಟು 
ಕೈಯ ತುಂಬಾ ಬಳೆಯ ಧರಿಸಿ 
ಪಾತರಗಿತ್ತಿಯ ಚಲನೆ ನಿನ್ನಲಿ 
ಹುಬ್ಬನು ಏರಿಸಿ ನೋಡುವ ರೀತಿ 
ನಿನ್ನ ನೋಟಕೆ ಬಲಿಯಾದೆ ಓ ಪ್ರಿಯೇ 

ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ .. 
ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ 

ಹಗಲಿರುಳು ನಿನ್ನದೇ ನೆನಪು 
ಹೃದಯದಿ ಈ ಸ್ನೇಹ ನಮಗೂ 
ಸುಖವಾಗಲಿ ನಮ್ಮಿ ಮಿಲನ 
ಬಾಳೊಂದು ಸುಂದರ ಬದುಕು 

ಸಾವಿರ ಜನುಮಕು ಹೋಲಿಸಲಾಗದ ಈ ಅನುಬಂಧ .. 
ಪ್ರೀತಿ ಬೆಸುಗೆಯ ಬಲಪಡಿಸಿದ ಈ ಬಂಧ 

                      - ಅಂಜಾರು ಮಾಧವ ನಾಯ್ಕ್ 



Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ