ಇಂದನ್ನು ಬಾಳು ....

ದಿನಕಳೆದ ಮೇಲೆ ಮರುಗದಿರು ನಿರಂತರ
ನಾಳೆ ಬರುವ ಮೊದಲು ಬೆದರದಿರು ಒಂಥರಾ

ತಿಳಿದುಕೋ ಇರುವುದು ಬಾಳ್ವೆ , ಈ ಕ್ಷಣ ಈ ವರೆಗೆ ...!
ಇಲ್ಲದ ನಾಳೆಗೆ ಯಾಕಾಗಿ ಭಯಪಟ್ಟಿರುವೆ ..!

ಕರಗಿಸಿಕೋ ಒಡಲಲಿ ಪ್ರೀತಿ ಸಾಗರ
ಕೈ ಬೀಸಿ ಕರೆದುಕೋ ಸ್ನೇಹಜೀವಿಯ

ಬಾಳ ಪಯಣವು  ಸುಂದರ.. ಪ್ರೀತಿಯಿದ್ದರೆ
ಬಾಳ ದಾರಿಯ ಸರಿಯಾಗಿಸು ತಪ್ಪಿ ಬಿದ್ದರೂ ..!

ಜಯವಾಗಲಿ , ಜೀವನದ ಗುರಿ ಮುಟ್ಟಲಿ ..
ಕೊನೆಯುಸಿರ ಎದೆಬಡಿತವು ಪ್ರೀತಿ ಸಹನೆ ತುಂಬಿರಲಿ ...!

                        - ಅಂಜಾರು ಮಾಧವ ನಾಯ್ಕ್



Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ