ನನ್ನ ಮನವೇ

ನನ್ನ ಮನವೇ 

ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ...

ನೊಂದ ಹೃದಯಕೆ ನೀ ಬಲವಾಗು
ಜಗದಿ ನಡೆವಾಟಕೆ ದನಿಯಾಗು

ಸುಖ ಸಂತೋಷದ ಬಾಳಲಿ ನೀನು
ಜೇನಿನ ಹನಿಯ ಸವಿಯಾಗು

ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ...

ಅಂಧರ ಕಣ್ಣಿಗೆ ಬೆಳಕು ನೀನಾಗು ..
ಪ್ರೀತಿ ತೋರೋ ಜನಕೆ ಒಳಿತಾಗು

ಬಾಳು ....ಬಲು ನಿಖರ ... ನಿರಾಧಾರ .... ನಿರಾಧಾರ

ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ...

ಸ್ನೇಹವ ಬೆಸೆದು ಒಂದಾಗು ನೀ ..
ಬಾಳಲಿ ಎಂದಿಗೂ ಸ್ಥಿರವಾಗು

ಬಿಸಿಯುಸಿರ ಜೀವಕೆ ತಂಗಾಳಿಯಾಗು
ಕರುಣೆಯ ಹೃದಯಕೆ ಸ್ನೇಹಿತನಾಗು

ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ...

ಬಾಳು ....ಬಲು ನಿಖರ ... ನಿರಾಧಾರ .... ನಿರಾಧಾರ
ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ...

                 - ಅಂಜಾರು ಮಾಧವ ನಾಯ್ಕ್




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ