ಶಿವನೇ ಬಲ್ಲ....
ಜ್ಞಾನಿಯು ಅಲ್ಲ , ಅಜ್ಞಾನವು ಇಲ್ಲ
ಕಲ್ಲು ಸಕ್ಕರೆಯಂತೆ ಸಿಹಿಯಾಗಿಲ್ಲ ..
ಬೇವು ಬೆಲ್ಲದ ನಡುವೆ ಜೀವನವು ಎಲ್ಲಾ ..
ಕಲ್ಲು ಮುಳ್ಳಿನ ದಾರೀಲಿ ನಡೆಯುವೆ ಮೆಲ್ಲ ..
ಸುಳ್ಳು ಕಂತೆಯನು ಹೇಳುವುದಿಲ್ಲ ..
ಚಳ್ಳೆ ಹಣ್ಣು ತಿನಿಸಿ ಓಡುವುದಿಲ್ಲ ...!
ಪರರ ಜೀವಕೆ ಮುಳ್ಳಾಗಿರುವುದಿಲ್ಲ ..
ಸತ್ಯ ಬದುಕನು ಬಾಳಿ ಬಸವಳಿದೆಯಲ್ಲ ..!
ಎಲ್ಲರಲಿ ಬೆರೆತು ಇರಬಯಸುವೆನಲ್ಲ ..
ದಿನ ರಾತ್ರಿ ಎನದೆ ಸಂತೋಷವೆಲ್ಲ
ಆ ಶಿವನೇ ಬಲ್ಲ ಎನ್ನ ಬದುಕೆಲ್ಲ
ವಿಶ್ವಾಸವು ಎನಗೆ ದೇವ ಕೈ ಬಿಡಲ್ಲ ...!!
-ಅಂಜಾರು ಮಾಧವ ನಾಯ್ಕ್
ಕಲ್ಲು ಸಕ್ಕರೆಯಂತೆ ಸಿಹಿಯಾಗಿಲ್ಲ ..
ಬೇವು ಬೆಲ್ಲದ ನಡುವೆ ಜೀವನವು ಎಲ್ಲಾ ..
ಕಲ್ಲು ಮುಳ್ಳಿನ ದಾರೀಲಿ ನಡೆಯುವೆ ಮೆಲ್ಲ ..
ಸುಳ್ಳು ಕಂತೆಯನು ಹೇಳುವುದಿಲ್ಲ ..
ಚಳ್ಳೆ ಹಣ್ಣು ತಿನಿಸಿ ಓಡುವುದಿಲ್ಲ ...!
ಪರರ ಜೀವಕೆ ಮುಳ್ಳಾಗಿರುವುದಿಲ್ಲ ..
ಸತ್ಯ ಬದುಕನು ಬಾಳಿ ಬಸವಳಿದೆಯಲ್ಲ ..!
ಎಲ್ಲರಲಿ ಬೆರೆತು ಇರಬಯಸುವೆನಲ್ಲ ..
ದಿನ ರಾತ್ರಿ ಎನದೆ ಸಂತೋಷವೆಲ್ಲ
ಆ ಶಿವನೇ ಬಲ್ಲ ಎನ್ನ ಬದುಕೆಲ್ಲ
ವಿಶ್ವಾಸವು ಎನಗೆ ದೇವ ಕೈ ಬಿಡಲ್ಲ ...!!
-ಅಂಜಾರು ಮಾಧವ ನಾಯ್ಕ್
Comments
Post a Comment