'ಮಹಾಗಣಪತಿ'

'ಓಂ ಶ್ರೀ ಮಹಗಣೇಶಾಯ ನಮಃ '

ಬನ್ನಿರೆಲ್ಲ .. ಮಹಾಗಣಪತಿಯ ಪೂಜೆಯ ಮಾಡೋಣ ..
ಬನ್ನಿರೆಲ್ಲ , ಭಕುತರು ಸೇರಿ ಹರುಷದಿ ನಲಿಯೋಣ ...।।೧।।

ಚೌತಿಯ ದಿನದಲಿ ಏಕದಂತನ ಸೇವೆಯ ಮಾಡೋಣ
ಫಲಪುಷ್ಪಗಳ ಸಿಂಗರಿಸಿ ಆರತಿ ಎತ್ತೋಣ ..।।೧।।

ಲೋಕವ ಕಾಯುವ ಮೂಷಿಕವಾಹನಗೆ ಜೈಕಾರ ಹಾಕೋಣ
ಭಕ್ತಿಯಿಂದ ಚರಣಕೆ ತಲೆಬಾಗಿ ನಮಿಸೋಣ ..।।೧।।

ಎಲ್ಲರು ಸೇರಿ ಲೋಕಕಲ್ಯಾಣಕ್ಕೆ ಪ್ರಾರ್ಥನೆ ಮಾಡೋಣ
ಈ ಲೋಕಕೆ ಬರೋ ವಿಘ್ನಗಳ ದೂರ ಮಾಡೋಣ ..।।೧।।

ಬಾಳಿಗೆ ಸುಖ ಸಂತೋಷವ ಬೇಡಿ ಪಡೆಯೋಣ
ವಿಘ್ನ ವಿನಾಶಕನ ಕೃಪೆಗೆ ಪಾತ್ರರಾಗೋಣ ..।।೧।।

ಬನ್ನಿರೆಲ್ಲ .. ಮಹಾಗಣಪತಿಯ ಪೂಜೆಯ ಮಾಡೋಣ ..
ಬನ್ನಿರೆಲ್ಲ , ಭಕುತರು ಸೇರಿ ಹರುಷದಿ ನಲಿಯೋಣ ...।।೧।।

ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ ಮೋರ್ಯ
ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ ಮೋರ್ಯ

                                - ಅಂಜಾರು ಮಾಧವ ನಾಯ್ಕ್



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ