ಹೊಸ ಹುಮ್ಮಸ್ಸು..........

ಪಡುತಿಹೆನು ಜಿಗುಪ್ಸೆ ಹರಸಾಹಸದ ಬದುಕಲಿ
ವ್ಯರ್ಥವೆನಿಸುವುದು ಜೀವನ ಕಲ್ಲು ಮುಳ್ಳಿನ ಹಾದಿಯಲಿ

ಅದೇನೋ ಹಂಬಲ ಎನಗೆ ನಾಳೆಗಾಗಿ ಬದುಕುವ ಛಲ
ನೀಡುತ್ತಿದೆ ಹೊಸ ಚಿಗುರು ಸಹನೆಯೆಂಬ ಪ್ರತಿಫ಼ಲ

ಹಸನಾಗಿರಲಿ ಪ್ರತಿಕ್ಷಣ , ತುಂಬಿ ಹರಿಯಲಿ ಉಲ್ಲಾಸವು
ಮುಳುಗದಿರಲಿ ಎಂದಿಗೂ ವಿಶ್ವಾಸದ ಬಾಳ ನೌಕೆಯು

ಕೆಲಬಾರಿ ಮನಮುದುಡುವುದು , ಸಾಕಾಯಿತೆನಗೆ ಬದುಕೆಂದು
ಆಶಿಸುವೆ ಬರುತಿರಲಿ, ಹೊಸ ಹುಮ್ಮಸ್ಸು  ಪುಟಿಯಲೆಂದು

                                               - ಅಂಜಾರು ಮಾಧವ ನಾಯ್ಕ್ .

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ