Posts

Showing posts from 2024

ಹೆಜ್ಜೆಯ ಫಲ

ನೀ ನನ್ನ ಜೊತೆಯಲಿರಲು ಕಾರಣ  ದೇವರು ಕೊಟ್ಟ ವರ  ನಾ ನಿನ್ನ ಜೊತೆಗಿರಲು ಕಾರಣ  ನಿನ್ನ ಪ್ರಾರ್ಥನೆಯ ಫಲ  ಗೆಳೆಯನಾಗಿಯೂ  ಗೆಳತಿಯಾಗಿಯೂ  ಸತಿಯಾಗಿಯೂ  ಸಂಬಂಧಗಳು ಉಳಿಯಲು ಕಾರಣ  ನಿನ್ನಲಿರುವ ತಾಳ್ಮೆಯ ಫಲ  ಇಂದು ನಾಳೆ ಎಂದೆಂದಿಗೂ  ಜೊತೆ ಜೊತೆಗೆ ಇರಬೇಕಾದರೆ  ನಾವಿಬ್ಬರು  ಹಾಕುವ  ಬದುಕಿನ ಹೆಜ್ಜೆಯ ಫಲ.        ✍️ಮಾಧವ. ಕೆ. ಅಂಜಾರು 

ನಾವು ಬೇಡವೆಂದರೆ

ನಮ್ಮೊಳಗೇ ನಾವು ಕಚ್ಚಾಡಿದರೆ  ನಮ್ಮವರಿಗೇ ಬೆಲೆ ಇರುವುದಿಲ್ಲ  ನಮ್ಮವರನ್ನೇ ನಾವು ವಧೆ ಮಾಡಿದರೆ  ಮಾಡುವ ಕೆಲಸಕ್ಕೆ ಬೆಲೆ ಇಲ್ಲ  ನಮ್ಮವರನ್ನೇ ನಾವು ಬೇಡವೆಂದರೆ  ನಮ್ಮವರು ಸೇರುವುದಿಲ್ಲ  ನಮ್ಮವರನ್ನೇ  ದುರುಪಯೋಗ ಮಾಡಿದರೆ  ನಾಳೆ ನಿಮಗೆ ಬೆಲೆ ಇಲ್ಲ  ನಮ್ಮವರನ್ನೇ ನಾವು ತುಳಿದರೆ  ನಾಳೆ ನಮ್ಮವರೇ ಇರುವುದಿಲ್ಲ  ನಮ್ಮವರೇಲ್ಲರೂ ಸೇರಿ ನಡೆದರೆ  ಯಾರಿಗೂ ಭಯವಿರುವುದಿಲ್ಲ.        ✍️ಮಾಧವ. ಕೆ ಅಂಜಾರು 

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

Image
 ಭಾರತೀಯ ರಾಯಭಾರಿ ಕುವೈಟ್ ನಲ್ಲಿ, ಹುಲಿಕುಣಿತ ತುಳು ಸಂಸ್ಕೃತಿಯ ಭಾಗವಾಗಿರುವ ಹುಲಿಕುಣಿತ ವಿದೇಶದಲ್ಲಿ ರಾರಾಜಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ, ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಮ್ಮ ಸಂಪ್ರದಾಯವನ್ನು ಬಿಟ್ಟು ಕೊಡುವುದಿಲ್ಲ, ನಮಸ್ಕಾರ ಊರುಡು ಒಲ್ಪ ದಿಂದ ಆರಂಭ ಆಗುವ ಸಂಭಾಷಣೆ, ಹುಲಿ ಕುಣಿತದಂತಹ ಅನೇಕ ಸಂಪ್ರದಾಯವನ್ನು ಬಹಳಷ್ಟು ಶೃದ್ದೆಯಿಂದ ಮತ್ತು ಶಿಸ್ತಿನಿಂದ ಮಾಡಿ ತುಳುವರ ಸಂಸ್ಕೃತಿಗೆ ಇನ್ನಷ್ಟು ಮೆರುಗು ಕೊಡುವ ತುಳು ಬಿಲ್ಲವ ಸಂಘದ ಸದಸ್ಯರ ತಂಡ ಅನೇಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಡಿರುತ್ತಾರೆ, ಒಟ್ಟಾರೆ ಹೆಚ್ಚಿನ ಕಲಾವಿದರು ಕುವೈಟ್ನಲ್ಲಿ ವಾಸವಾಗಿದ್ದಾರೆ ಹೇಳಬಹುದು.            ನೃತ್ಯ, ನಾಟಕ, ಪ್ರಹಸನ, ಹುಲಿವೇಷ, ಕರ್ನಾಟ/ ಭಾರತದ ಅನೇಕ ಇತಿಹಾಸದ ಸನ್ನಿವೇಶವನ್ನು ವೇದಿಕೆಯಲ್ಲಿ ನೋಡುವ ಅವಕಾಶವನ್ನು ಅನೇಕ ಸಂಘ ಸಂಸ್ಥೆಗಳು ನಿರಂತರ ಮಾಡುತ್ತಿರುವುದು ನಮಗೆಲ್ಲರಿಗೂ ಸಂತೋಷವನ್ನೂ ತಂದು ಕೊಡುತ್ತಲಿದೆ. ನಾವು ಚಿಕ್ಕವರಿದ್ದಾಗ ನಡೆಯುತ್ತಿದ ಹುಲಿ ಕುಣಿತಕ್ಕೊ, ಇಂದಿನ ದಿನದಲ್ಲಿ ನಡೆಯುವ ಕುಣಿತಕ್ಕೂ ಬಹಳಷ್ಟು ಬದಲಾವಣೆ ಕಂಡಿರುತ್ತೇನೆ.         ವೇಷಭೂಷಣೆ ಅತ್ಯಂತ ಸುಂದರ, ಹಾಕುವ ಹೆಜ್ಜೆ, ಎಲ್ಲವೂ ಬಹಳಷ್ಟು ಚೆನ್ನಾಗಿ ಮೂಡಿ ಬರುತ್ತದೆ. ಎಲ್ಲಾ ಕಲಾವಿದರಿಗೂ ಇನ್ನಷ್ಟು ಹೆಚ್ಚಿನ ಯಶಸ್ಸು ಮತ್ತು ಆಶೀರ್ವಾದ ಸ...

ಕ್ಷಣಿಕ

ಅತಿಯಾದ ಭಯ  ಏನನ್ನೂ ಕೊಡದು  ಅತಿಯಾದ ಚಿಂತೆ  ಸಮಸ್ಯೆಯನ್ನು  ಬಗೆಹರಿಸದು   ಬರುವುದೆಲ್ಲ ಬರಲಿ  ನಿನ್ನ ಶಕ್ತಿ ನಿನಗೆ  ಮಾತ್ರ ಗೊತ್ತಿರಲಿ  ಮತ್ತೆಲ್ಲವೂ ಕ್ಷಣಿಕ  ನೆನಪಿರಲಿ   ✍️ ಮಾಧವ. ಕೆ. ಅಂಜಾರು.

ಯೋಗವಿದ್ದರೂ ಯೋಗ್ಯತೆ ಬೇಕು

ಯೋಗವಿದ್ದರೂ ಯೋಗ್ಯತೆ ಬೇಕು  ಭಾಗ್ಯವಿದ್ದರೂ ಛಲವಿರಬೇಕು  ಸಾಧ್ಯವಿದ್ದರೂ ಮನಸಿರಬೇಕು  ಕೋಪವಿದ್ದರೂ ಹಿಡಿತವಿರಬೇಕು  ದ್ವೇಷವಿದ್ದರೂ ಮಿತವಿರಬೇಕು  ಕಾಸಿದ್ದರೂ ಗುಣವಿರಬೇಕು  ಲೋಪವಿದ್ದರೂ ಒಪ್ಪಿಕೊಳ್ಳಬೇಕು  ಬಡತನವಿದ್ದರೂ ನಗುವಿರಬೇಕು            ✍️ಮಾಧವ. ಕೆ. ಅಂಜಾರು            

ಜೊತೆಗೊಬ್ಬನಿದ್ದರೆ ಸಾಕು

ಜೊತೆಗೊಬ್ಬನಿದ್ದರೆ ಸಾಕು  ನೀತಿವಂತ  ಜೊತೆಗೂಬ್ಬನಿದ್ದರೆ ಸಾಕು  ನ್ಯಾಯವಂತ  ಜೊತೆಗೂಬ್ಬನಿದ್ದರೆ ಸಾಕು  ಸತ್ಯವಂತ  ಜೊತೆಗೂಬ್ಬನಿದ್ದರೆ ಸಾಕು  ಬುದ್ದಿವಂತ  ಜೊತೆಗೂಬ್ಬನಿದ್ದರೆ ಸಾಕು  ಧೈರ್ಯವಂತ  ಜೊತೆಗೂಬ್ಬನಿದ್ದರೆ ಸಾಕು  ವಿದ್ಯಾವಂತ  ಜೊತೆಗೊಬ್ಬನಿದ್ದರೆ ಸಾಕು  ಗುಣವಂತ  ಜೊತೆಗೊಬ್ಬನಿದ್ದರೆ ಸಾಕು  ಹೃದಯವಂತ      ✍️ಮಾಧವ. ಕೆ. ಅಂಜಾರು 

ನಿಂದಿಸುವವರೂ ಬೇಕು

ಸ್ಪಂದಿಸುವವರೂ ಬೇಕು  ನಿನ್ನ ನಿಂದಿಸುವವರೂ ಬೇಕು  ಹೊನ್ನ ತಟ್ಟೆಯಲಿ  ತಿನ್ನುವವರೂ ಬೇಕು  ಬೆನ್ನ ಹಿಂದೆ  ಮಾತಾಡುವವರೂ ಬೇಕು  ಕಣ್ಣ ಮುಂದೆ  ಆಟ ಆಡುವವರೂ ಬೇಕು  ಜಯಿಸುವವರೂ ಬೇಕು  ಸೋಲುವವರೂ ಬೇಕು  ಸೋತು ಸೋತು  ಗೆಲುವು ಕಾಣುವವರು ಬೇಕು  ನಿನ್ನ ಪ್ರತೀ ನಡೆಯನ್ನು  ಗಮನಿಸುವವರೂ ಬೇಕು,        ✍️ಮಾಧವ. ಕೆ ಅಂಜಾರು 

ಜಾಲ ತಾಣ

(ಲೇಖನ -128) ಲೇಖನ - 128( ಜಾಲ ತಾಣ ) ಸಾಮಾಜಿಕ ಜಾಲತಾಣದಲ್ಲಿ ವಾಟ್ಸಪ್ಪ್ ಫೇಸ್ಬುಕ್ ಇನ್ನಿತರ ಜಾಲ ತಾಣ ದಲ್ಲಿ ಮತ್ತು ಫೋನ್ ಕಾಲ್ ಗಳಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಗೊತ್ತಿದ್ದೂ ಗೊತ್ತಿಲ್ಲದೇ ನಡೆಯುವ ಸಂದರ್ಭಗಳು ಉದ್ದೇಶಪೂರ್ವಕ ಅಥವಾ ಉದ್ದೇಶವಿಲ್ಲದೆಯೂ ಮತ್ತೊಬ್ಬರಿಗೆ ವಿನಿಮಯವಾಗಿ, ನಿಮ್ಮನ್ನು ತೊಂದರೆಗೆ ಒಳಪಡಿಸುವ ಸಾಧ್ಯತೆ, ಹುನ್ನಾರಗಳನ್ನು ಅಲ್ಲಗಳೆಯುವಂತಿಲ್ಲ. ಕೆಲವು ವಿಚಾರಗಳು ಸರಿಯೆಂದು ತೋರಿದರೂ ಮತ್ತೊಬ್ಬರಿಗೆ ಸರಿಯಾಗಿ ಕಾಣದು ಮತ್ತು ಬೇರೆ ಬೇರೆ ಕಾರಣಗಳಿಂದ ಒಬ್ಬರನ್ನೊಬ್ಬರು ದ್ವೇಷ ಸಾಧನೆಗೆ ಉಪಯೋಗಿಸುವ ಸಾಧ್ಯತೆಗಳಿರಬಹುದು.  ತಾವುಗಳು ಮಾಡುತ್ತಿರುವ ಮೆಸೇಜ್ ಅಥವಾ ಕಾಲ್ ಗಳನ್ನು ತಿರುಚಿ ಅಥವಾ ತಿರುಚದೆ ಇನ್ನೊಬ್ಬರಿಗೆ ಕಳುಹಿಸಿ ಅವಾಂತರ ಸೃಷ್ಟಿಯಾಗುವ ಸಾಧ್ಯತೆಗಳಿರಬಹುದು. ನಾವುಗಳು ನಮ್ಮ ಮೊಬೈಲ್ ಉಪಯೋಗ ಮಾಡುವಾಗ ಎಚ್ಚರಿಕೆಯಿಂದ ಮೆಸೇಜ್ಗಳನ್ನು ಹಾಕಬೇಕಾಗುತ್ತದೆ. ಇಲ್ಲಿ ನಮ್ಮವೇರೆಂದು ತಿಳಿದುಕೊಂಡವರೇ ಇಕ್ಕಟ್ಟಿಗೆ ಸಿಲುಕಿಸುವ ಅಥವಾ ತೊಂದರೆಗೆ ಒಳಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.  ಸರಿ ತಪ್ಪುಗಳನ್ನು ನಾವುಗಳು ಸರಿಯಾದ ಜನರೊಂದಿಗೆ ಚರ್ಚೆ ಮಾಡಿದಾಗ ಮಾತ್ರ ಉತ್ತಮವಾದ ಅಂತ್ಯ ಕಾಣಬಹುದು ಅಥವಾ ಚರ್ಚೆಗೆ ಬೆಲೆ ಕೊಡುವ ಜನರೊಂದಿಗೆ ಮಾತ್ರ ನಿಮ್ಮ ಮಾತುಕತೆಯನ್ನು ಮುಂದುವರಿಸುವಂತೆ ಆಗಲಿ. ನಾವು ನಮ್ಮವರು ಯಾರೆಂದು ತಿಳಿಯುವ...

ಈಶ್ವರ ಮಲ್ಪೆ

ಇದ್ದರೆ ಇರಬೇಕು  ಈಶ್ವರ ಮಲ್ಪೆಯಂತೆ  ತನ್ನೆಲ್ಲಾ ನೋವನು ಬದಿಗಿಟ್ಟು  ಸಮಾಜದ ನೋವಿಗೆ ಕಿವಿಗೊಟ್ಟು  ನೊಂದವರ ಬಾಳಿಗೆ  ಸ್ಪಂದಿಸುವ ಜೀವ  ಇದ್ದರೆ ಇರಬೇಕು ಈಶ್ವರ ಮಲ್ಪೆಯಂತೆ  ಹಿತವಾದ ಮಾತು  ಮಿತವಾದ ಮಾತು  ಎಲ್ಲರೂ ನನ್ನವರೇ ಎಲ್ಲರಿಗೂ ಪ್ರೀತಿಯನು ಕೊಡಬಹುದು  ವಿಶಾಲವಾದ ಮನಸು  ನನಗಾಗಿ ಇನಿತು ಇದ್ದರೆ  ಸಾಕೆನ್ನುವವರಿವರು  ಇದ್ದರೆ ಇರಬೇಕು ಈಶ್ವರ ಮಲ್ಪೆಯಂತೆ  ಜನಸೇವೆಯಲಿ ದೇವರನು  ಕಂಡವರು  ಜನಸೇವೆಯಲಿ ನೋವನುಂಡವರು  ದಿನಬಿಡದೆ ನಮಗಾಗಿ  ದಿನಬಿಡದೆ ನಿಮಗಾಗಿ  ಹಲವು ಜೀವ ಉಳಿಸಿರುವವರೇ  ಕಲಿಯುಗದ ಈಶ್ವರನಾಗಿ  ಇದ್ದರೆ ಇರಬೇಕು ಈಶ್ವರ ಮಲ್ಪೆಯಂತೆ         ✍️ಮಾಧವ. ಕೆ ಅಂಜಾರು.

ವಕೀಲನಾಗಬೇಡ

ನಿನ್ನ ತಲೆಯನ್ನು ಕಡಿಯುವಷ್ಟು  ತಲೆ ಬಾಗಬೇಡ ನಿನ್ನ ಕಲೆಯನ್ನು ಮುಚ್ಚಿಸುವಷ್ಟು  ಶರಣಾಗಬೇಡ  ನಿನ್ನ ಗೌರವಕೆ ಕುತ್ತುಬರುವಷ್ಟು  ಸುಮ್ಮನಾಗಬೇಡ  ಸಂತೋಷಕ್ಕೆ ಚ್ಯುತಿಯಾಗುವಷ್ಟು  ಬೇಸರಿಸಬೇಡ  ಮತ್ತೊಬ್ಬರ ಮನೆ ಹಾಳುಮಾಡುವಷ್ಟು  ಕ್ರೂರಿಯಾಗಬೇಡ  ನಿನ್ನನು ನೀನೇ ಹೊಗಳುವಷ್ಟು  ಮೂರ್ಖನಾಗಬೇಡ  ಪೌರುಷ ಅಮಾಯಕರ ಮೇಲೆ  ತೋರಿಸಬೇಡ  ಜನ ಹಣ ಬಲದ ಕಡೆ  ವಕೀಲನಾಗಬೇಡ  ಹೆತ್ತವರ ಜರೆಯುವಷ್ಟು  ಬೆಳೆದುನಿಲ್ಲಬೇಡ       ✍️ಮಾಧವ. ಕೆ. ಅಂಜಾರು.

ಹಣಕ್ಕಾಗಿ

ಹಣಕ್ಕಾಗಿ ನ್ಯಾಯ ನೀತಿ ಕೊನೆಯಾಯಿತು  ಹಣಕ್ಕಾಗಿ  ಸತ್ಯ ಧರ್ಮ ಸುಳ್ಳಾಯಿತು  ಹಣಕ್ಕಾಗಿ  ಪ್ರೀತಿ ಪ್ರೇಮ ಇಲ್ಲವಾಯಿತು  ಹಣಕ್ಕಾಗಿ  ಬಂದು ಬಾಂಧವರಿಲ್ಲವಾಯಿತು  ಹಣಕ್ಕಾಗಿ  ಮೋಸ ವಂಚನೆ ಸಹಜವಾಯ್ತು  ಹಣಕ್ಕಾಗಿ  ದೇಹಸುಖವೂ ಸ್ಥಿರವಾಯ್ತು  ಹಣಕ್ಕಾಗಿ  ದೇವರ ಭಯ ನಾಶವಾಯ್ತು  ಹಣಕ್ಕಾಗಿ  ಬಡವ ಬಲ್ಲಿದನ ಹೋಮವಾಯ್ತು  ಹಣಕ್ಕಾಗಿ  ಮಾನ ಮರ್ಯಾದೆ ಸತ್ತೋಯ್ತು.              ✍️ಮಾಧವ. ಕೆ. ಅಂಜಾರು.

ಸಂಸ್ಕಾರ ಒಪ್ಪದವರು

ಸಂಸ್ಕಾರ ಒಪ್ಪದವರು  ಸಂಸಾರವನ್ನೂ ಒಪ್ಪಲಾರರು  ಸಂಸಾರದ ಸದಸ್ಯರನ್ನು  ಒಪ್ಪಲಾರರು  ಸಂಸ್ಕಾರ ಒಪ್ಪದವರು  ಸಂಬಂಧವನ್ನು ಒಪ್ಪಲಾರರು  ನೆರೆ ಕರೆಯನ್ನು ಒಪ್ಪಲಾರರು  ಗೆಳೆಯ ಗೆಳತಿಯನ್ನು  ಹೊಂದಿರಲಾರರು  ಸಂಸ್ಕಾರ ಇಲ್ಲದವರು  ಮಕ್ಕಳನ್ನು ಪೋಷಿಸಲಾರರು  ಜವಾಬ್ದಾರಿ ಹೊಂದಿರಲಾರರು  ಜೀವನದ ಅರ್ಥವೇ ತಿಳಿಯಲಾರರು             ✍️ಮಾಧವ. ಕೆ. ಅಂಜಾರು 

ಕೊಡ ತುಂಬಿದಾಗ

ಜಂಬದ ಕೋಳಿಯೂ  ತನ್ನ ಕೂಗನ್ನು ನಿಲ್ಲಿಸುತ್ತದೆ  ವೇಗವಾಗಿ ಓಡುವ ಕುದುರೆಯೂ  ಓಟವನ್ನು ನಿಲ್ಲಿಸುತ್ತದೆ  ಬಲಿಷ್ಠ ಹುಲಿಯೂ  ತನ್ನ ಬಲ ಕಳೆದುಕೊಳ್ಳುತ್ತದೆ  ಘರ್ಜಿಸುವ ಸಿಂಹವೂ  ಘರ್ಜಿಸುವುದನು ನಿಲ್ಲಿಸುತ್ತದೆ  ನಾಡಿನ ರಾಜನೂ  ಅಧಿಕಾರ ಕಳೆದುಕೊಳ್ಳುತ್ತಾನೆ  ಅದೆಂತಹ ಕಳ್ಳನೂ, ಸುಳ್ಳನೂ  ಸಿಕ್ಕಿಬೀಳುತ್ತಾನೆ  ಸೌಂದರ್ಯದ ರಾಣಿಯೂ  ಬಣ್ಣವನ್ನು ಕಳೆದುಕೊಳ್ಳುತ್ತಾಳೆ  ಜಗದೊಳು ನಿನೊಂದು  ನಶ್ವರ ಜೀವಿ  ಇಂದು ಓಡಾಡುವೆ,  ಮದ ಮತ್ಸರ ಮಾಡುತ್ತ ನಾನೇ  ಮೇಲೇನುವೆ,  ಕೊಡ ತುಂಬಿದಾಗ ಎಲ್ಲವನು  ನಿಲ್ಲಿಸುವೆ,        ✍️ಮಾಧವ. ಕೆ ಅಂಜಾರು 

ನಿನ್ನ ಜೊತೆ ನಾನಿರುವೆ.

ಕಲ್ಲು ಮುಳ್ಳಿನ ದಾರಿಯೋಳು  ಹೆಜ್ಜೆಯನು ಹಾಕುತಿರುವೆ  ಹೊಸ ಕನಸಿನೊಳಗೆ  ನನ್ನ ನಾನು ಮರೆತಿರುವೆ,  ಭರವಸೆಯ ಬದುಕನ್ನು  ರೂಡಿಸಿಯೇ ನಡೆದಿರುವೆ  ಏನೇ ಬರಲಿ ಏನೇ ಇರಲಿ  ಜವಾಬ್ದಾರಿಯನು ಹೊತ್ತಿರುವೆ  ನನಗಾಗಿ ನಾ ನಡೆಯುತ್ತಿಲ್ಲ  ಹೊಲ ಹಸುಗಳ ಮರೆತಿಲ್ಲ  ಮುಂದುವರಿಯಲಿ ಪಯಣ  ಕಾರ್ಮೋಡಗಳ ಭಯವಿಲ್ಲ  ಮುನ್ನುಗ್ಗುವೆ ಎಂದಿಗೂ  ನಾನಿನ್ನೂ ಶಕ್ತನು  ಉಸಿರು ನಿಂತು ಹೋದರೂ  ಮತ್ತೆ ಮರಳಿ ನಾ ಬರುವೆ  ನಡೆ ನಡೆ ಮುನ್ನಡೆ  ಕನಸು ಹೊತ್ತು ಮುನ್ನಡೆ  ಯಾಕೆ ನಿನಗೆ ಭಯ ಹೇಳು  ಓ ನನ್ನ ಮಗುವೇ  ನಿನ್ನ ಜೊತೆ ನಾನಿರುವೆ.        ✍️ಮಾಧವ. ಕೆ. ಅಂಜಾರು 

ಬಯಸಿರುವುದೆಲ್ಲವೂ ಸಿಕ್ಕಿದರೆ

ಬಯಸಿರುವುದೆಲ್ಲವೂ ಸಿಕ್ಕಿದರೆ  ಪ್ರಯತ್ನಕ್ಕೆ ಮೌಲ್ಯವಿಲ್ಲ  ಕಳೆದುಕೊಂಡೆನೆಂಬ ಚಿಂತೆ  ಕಾಡುತಿದ್ದಲ್ಲಿ  ಹೊಸ ಕನಸಿಗೆ ಜಾಗವಿಲ್ಲ  ಬಯಕೆ ಈಡೇರಲು  ಹೊಸ ಕನಸು ನನಸಾಗಲು  ಅವಿರತ ಶ್ರಮ ಪಡದೇ  ಸುಮ್ಮನಿರಲು ಸಾಧ್ಯವಿಲ್ಲ  ಜೀವನ ನೀನಂದುಕೊಂಡಂತೆ  ನಡೆಯುವುದೇ ಇಲ್ಲ  ಕನಸು ಕಾಣುತ್ತಿರು  ಸಂಧರ್ಭಗಳನ್ನೂ ಸ್ವೀಕರಿಸುತ್ತಿರು  ದಿನಕಳೆದಂತೆ ನೀ ಹೇಳುವೆ  ಕಳೆದ ಸಮಯವೆಲ್ಲವೂ  ದೇವರು ನೀಡಿದ ಭಾಗ್ಯ ಗುರು       ✍️ಮಾಧವ. ಕೆ. ಅಂಜಾರು        

ನನಗೆ ನೀನೇ ಎಲ್ಲವೂ

ನನಗಾಗಿ ಮರುಗುವವರು  ನಾಳೆ ಇರುತ್ತಾರೋ ಇಲ್ಲವೋ  ನಡೆಯಲಾಗದೆ ಇದ್ದರೆ  ತುತ್ತು ತಿನ್ನಲಾಗದಿದ್ದರೆ  ತನ್ನ ಕೆಲಸ ತಾನೇ ಮಾಡಲಾಗದಿದ್ದರೆ!  ಎನ್ನ ಹೊಗಳುವವರು  ಎನ್ನ ದೂಷಿಸುವವರು  ಸಂತಸದಲಿ ಇದ್ದರೆ ಸಾಕು  ಅವರಿಗೆ ತಪ್ಪಿಯೂ ಬರದಿರಲಿ ಕಷ್ಟ ನಷ್ಟ  ನಾಳೆ ನಾನಿರುತ್ತೇನೋ ಇಲ್ಲವೋ ನಾಳೆಯನು ಬಲ್ಲವ ನೀನು  ಜೊತೆಯಲಿ ಇರುವವರೆಲ್ಲರು  ಹಲವು ತಪ್ಪನು ಮಾಡಿರಲೂ ಬಹುದು  ಮನ್ನಿಸಿ ಮುನ್ನಡೆಸು  ಜಗದೊಡೆಯ ನನಗೆ ನೀನೇ ಎಲ್ಲವೂ.             ✍️ಮಾಧವ. ಕೆ. ಅಂಜಾರು 

ಮೈ ಪರಚುತ್ತಲೇ ಇರಲಿ

ಹೇಳುವವರು ಹೇಳುತ್ತಿರಲಿ  ನಿನ್ನ ಬೆನ್ನ ಹಿಂದೆ  ನಿನ್ನ ಕಣ್ಣ ಮುಂದೆ  ಹೇಳುತ್ತಾ ಹೇಳುತ್ತಾ  ಬೇಸತ್ತು ಹೋಗುವವರೆಗೂ  ಹೇಳುತ್ತಲೇ ಇರಲಿ,  ದೂರುವವರು ದೂರುತ್ತಿರಲಿ  ನಿನ್ನ ಬೆನ್ನ ಹಿಂದ  ನಿನ್ನ ಕಣ್ಣ ಮುಂದೆ  ದೂರು ಹೇಳುತ್ತಾ  ಬೇಸತ್ತು ಹೋಗುವವರೆಗೂ  ದೂರುತ್ತಾ ಇರಲಿ, ನಿನ್ನತನವ ನಿನ್ನಲಿರಲಿ  ಹೃದಯದೊಳು ಸತ್ಯವಿರಲಿ  ಹೇಳುವವರೂ,ದೂರುವವರೂ  ಇಂದಲ್ಲ ನಾಳೆ ನಿನನ್ನ ನೋಡಿ  ಏನೂ ಮಾಡಲಾಗದೆ  ಮೈ ಪರಚುತ್ತಲೇ ಇರಲಿ           ✍️ಮಾಧವ. ಕೆ. ಅಂಜಾರು.

ಗೆಲ್ಲಬೇಕೆಂದಾದರೂ

ಗೆಲ್ಲಬೇಕೆಂಬ ಹಠವಿರಲಿ  ಯಾವಾಗಲೂ  ಗೆಲ್ಲುತ್ತಲೇ ಇರುವೆನೆಂಬ  ಕನಸು ಕಾಣದೆ ಇರಲಿ,  ಸೋಲುತ್ತಲೇ ಇರುವೆನೆಂಬ  ಭಯ ದೂರವಿರಲಿ  ಒಮ್ಮೆಯಾದರೂ ಗೆಲುವೆ  ಎಂಬ ಕನಸು ಕಾಣುತ್ತಿರಲಿ,  ಗೆಲ್ಲಬೇಕೆಂದಾದರೂ  ಸೋಲಬೇಕೆಂದಾದರೂ  ಭಗವಂತನ ನೆನೆಯದ  ದಿನವೇ ಇಲ್ಲದಿರಲಿ,           ✍️ಮಾಧವ. ಕೆ. ಅಂಜಾರು.

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

Image
( ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ, ಜಿಲ್ಲಾವಾರು ಅಥವಾ ಪ್ರಾಂತ್ಯಕ್ಕ್ಕೆ ಅನುಸಾರವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳ ಹಿಂದೆ ಕಾಣದ ಕೈಗಳ ಹಗಲಿರುಳಿನ ಪರಿಶ್ರಮ ಇದ್ದೆ ಇರುತ್ತದೆ. ಅದರಲ್ಲೂ ನಿರ್ದಿಷ್ಟ ಪಂಗಡದ ಅಥವಾ ಜಾತಿ ಮತ್ತು ಧರ್ಮದ ಬಗ್ಗೆ ನಡೆಯುವ ಸಮಾವೇಶಗಳಲ್ಲಿ ಅದೆಷ್ಟು ಜಾಗರೂಕರಾಗಿದ್ದರೂ ಅಲ್ಲೊಂದು ಇಲ್ಲೊಂದು ತಿಳಿದು, ತಿಳಿಯದ ತಪ್ಪುಗಳು ಆಗುವುದು ಸಹಜವಾಗಿ ನಡೆಯುತ್ತದೆ. ತಿಳಿದು ನಡೆಯುವ ಮತ್ತು ಪೂರ್ವ ಯೋಜಿತ ತಪ್ಪುಗಳು ಕೂಡ ನಡೆಯಲು ಸಾಧ್ಯತೆ ಕೂಡ ಅಲ್ಲಗಳೆಯುವಂತೆ ಇಲ್ಲ. ಸಾಮಾನ್ಯವಾಗಿ ದೊಡ್ಡ ಸಮಾವೇಶದ ಪೂರ್ವ ತಯಾರಿ ಸರಿ ಸುಮಾರು 7 ರಿಂದ 8 ತಿಂಗಳು ಎಲ್ಲಾ ಸದಸ್ಯರು ತಮ್ಮ ಪರಿಶ್ರಮವನ್ನು ಹಾಕಿಕೊಳ್ಳುತ್ತಾ ಬರುತ್ತಾರೆ. ಸಮಾವೇಶ ಸಮೀಪಗೊಳ್ಳುತ ಆಯೋಜಕರ ಎದೆ ಬಡಿತ ಜಾಸ್ತಿ ಯಾಗುತ್ತ ಕಡಿಮೆಯಾಗುತ್ತಲು ಇರುತ್ತದೆ.     ವೇದಿಕೆ, ಆಸನ, ದೀಪಾಲಂಕಾರ, ವಾಹನ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಊಟ ಉಪಚಾರ ವ್ಯವಸ್ಥೆ, ವಾಹನ ನಿಲುಗಡೆಯ ವ್ಯವಸ್ಥೆ, ಮುಖ್ಯ ಅಥಿತಿ ಮತ್ತು ಸಮಾರಂಭದ ಪ್ರತೀ ಆಹ್ವಾನಿತ ವ್ಯಕ್ತಗಳನ್ನು ಗೌರವಿಸುವ ಮತ್ತು ಅವರನ್ನು ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮ ದ ಎಲ್ಲಾ ತಯಾರಿ ಇಂತಹ ಅನೇಕ ಜವಾಬ್ದಾರಿಗಳು ಸದಸ್ಯರು ಮಾಡುತ್ತಲೆ ಇರುತ್ತಾರೆ.          ಸಮಾಜಕ್ಕೆ ಒಳಿತನ...

ಇನ್ನು ನಾವು ಯಾವ ಲೆಕ್ಕ?

ಪ್ರಪಂಚವನ್ನು  ಸಂತುಷ್ಟಗೊಳಿಸುವ ಕೆಲಸ  ಬಿಟ್ಟುಬಿಡು, ಯಾಕೆಂದರೆ? ಪ್ರಪಂಚವನ್ನು ಸಂತೋಷಗೊಳಿಸಲು  ಶ್ರೀ ರಾಮನಿಗೂ ಆಗಲಿಲ್ಲ  ಶ್ರೀ ಕೃಷ್ಣ ದೇವನೂ  ಅಪವಾದ ಕೇಳಬೇಕಾಯಿತು, ಇನ್ನು ನಾವು ಯಾವ ಲೆಕ್ಕ? ಸಂತೋಷಗೊಳಿಸಲು ಮನಸಿದ್ದರೆ  ನಿನ್ನ ಮನಸ್ಸನ್ನು  ಮೊದಲು ಸಂತೋಷಗೊಳಿಸು  ಶ್ರೀ ರಾಮ ನಾಮವ ಪಠಿಸಿ  ಶ್ರೀ ಕೃಷ್ಣ ದೇವನ ನಮಿಸಿ, ತಂದೆ ತಾಯಿಯ ಸೇವೆ ಮಾಡಿ,          ✍️ಮಾಧವ. ಕೆ ಅಂಜಾರು.

(ಲೇಖನ -126) ಚಕ್ರವ್ಯೂಹ

 ನಮಗೆ ನಮ್ಮದೇ ಬದುಕು ಕಲಿಸುವ ಪಾಠ ಅನೇಕ, ದಿನಗಳು ಕಳೆದಂತೆ ಹೊಸ ಹುರುಪು, ಜೀವನದ ಏರಿಳಿತ, ಸುಖ ದುಃಖ ದುಮ್ಮಾನ, ಎಲ್ಲದರ ನಡುವೆ ಒಂದಿಷ್ಟು ಸಂತೋಷ, ಹಲವು ಕನಸು ಇವೆಲ್ಲವೂ ಪ್ರತಿಯೊಬ್ಬರ ಜೀವನದಲ್ಲಿ ಮಿಂಚಿನಂತೆ ಬಂದು ಹೋಗುತ್ತದೆ. ಕೊನೆಗೆ ಎಲ್ಲವೂ ಕ್ಷಣಿಕ ಎಂಬ ಭಾವನೆಗಳ ಪುಟಕ್ಕೆ ಸೇರಿಕೊಳ್ಳುತ್ತದೆ. ಪ್ರಪಂಚವನ್ನು ತಿಳಿಯುವ ಹೊತ್ತಿಗೆ ಜೀವನಚಕ್ರ ಮುಗಿದುಹೋಗುತ್ತದೆ.            ಹುಟ್ಟು ಸಾವಿನ ನಡುವೆ ಎದುರಾಗುವ ಅನೇಕ ಸಂಧರ್ಭಗಳು ಕೆಲವರನ್ನು ಬಹಳಷ್ಟು ದೃಢವಾಗಿಸಿದರೆ, ಇನ್ನು ಕೆಲವರನ್ನು ಪ್ರಪಾತಕ್ಕೆ ತಳ್ಳುತ್ತದೆ. ಅದರಲ್ಲೂ ನಿಜ ಜೀವನದಲ್ಲಿ ಚಟವೆಂಬ ಚಕ್ರವ್ಯೂಹಕ್ಕೆ ಸಿಕ್ಕಿ ಬಿದ್ದಲ್ಲಿ ಹೊರಗೆ ಬರಲಾರದೆ ಮನುಷ್ಯ ಸೋತುಬಿಡುತ್ತಾನೆ.           ನಾಟಕೀಯವಾಗಿ ಇರುವ ಈ ಜಗತ್ತಿನಲ್ಲಿ, ಪ್ರೀತಿ, ವಾತ್ಸಲ್ಯ, ಭರವಸೆ, ನಂಬಿಕೆ, ಸಹಾಯ, ಇವೆಲ್ಲವೂ ಹುಸಿಯಾಗಿರುತ್ತದೆ. ಹೆಚ್ಚಿನ ಪ್ರಸಂಗಗಳು ತನ್ನ ತಟ್ಟೆಯಲ್ಲಿ ಚಿನ್ನ ಹಾಕಿಕೊಳ್ಳುವುದೇ ಆಗಿರುತ್ತದೆ. ಸ್ವಾರ್ಥ ಬದುಕಿನ ಭರದಲ್ಲಿ ಕತ್ತೆಯನ್ನು ಕುದುರೆಯಾಗಿಸಿ, ನರಿಯನ್ನು ಹುಲಿಯೆಂದು ಬಿಂಬಿಸುವ ಈ ಕಾಲದಲ್ಲಿ ಎಲ್ಲಿ ಎಡವಿ ಬೀಳುತ್ತೇವೆ ಎಂಬುವುದೇ ತಿಳಿಯದು. ಅದಕ್ಕೂ ಮುನ್ನ ಬಲೆ ಬೀಸುವ ಜನರ ಮದ್ಯೆ ಬದುಕಿ ತೋರಿಸುವುದೇ ಬಹಳ ದೊಡ್ಡ ಸಾಧನೆ.       ಹೆಜ್ಜೆ ಹೆಜ್ಜೆಗೂ ಸಿಗುವ ...

ಕಾಲ ಕಳೆದಂತೆ

ಕಾಲ ಕಳೆದಂತೆ  ನಿನ್ನ ಪ್ರೇಮಿಸುತಲೇ  ಹೃದಯ ವೀಣೆತಂತಿಯು  ಮಿಡಿಯುತ್ತಿದೆ  ಹಾಯಾಗಿ ಜೊತೆಯಾಗಿರು  ಪ್ರಿಯೇ ನಿನಗಾಗಿ  ಜೀವ ಹಾತೊರೆಯುತ್ತಿದೆ, ಮುಸ್ಸಂಜೆಯ ಸವಿಮಾತು  ಕಿವಿಯೊಳಗೆ ಗುನುಗುತ್ತಲು  ಹಕ್ಕಿಗಳ ಚಿಲಿಪಿಲಿಗೆ  ಹೊಸ ಕನಸು ಚಿಗುರುತ್ತಿದೆ  ದಿನಕಳೆಯುತ್ತಿದ್ದಂತೆ  ನಮ್ಮಿಬ್ಬರ ಪ್ರೀತಿ  ಹೊಸ ಜೀವನ ನೀಡುತಲಿದೆ  ✍️ಮಾಧವ. ಕೆ. ಅಂಜಾರು 

(ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ

Image
 (ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ,  ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕುವೈತ್ ಕನ್ನಡಕೂಟದ ಎಲ್ಲಾ ಸದಸ್ಯರು ಕನ್ನಡ ಭಾಷೆಗೆ ಕೊಡುತ್ತಿರುವ ಗೌರವ,ಪ್ರೀತಿಯಂತೂ ನಿತ್ಯ ಸತ್ಯ. ಹಲವಾರು ವರುಷಗಳಿಂದ ಕನ್ನಡಾಂಬೆಯ ಸೇವೆಯನ್ನು ಮಾಡುತ್ತಿರುವ ಕನ್ನಡಿಗರ ಕೂಟ,  ಕುವೈಟ್ ಕನ್ನಡ ಕೂಟ ವಿವಿಧ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಲೇ ಬರುತ್ತಿದೆ. ಈ ಸುಂದರವಾದ ಕೂಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡುತ್ತ ಹೆಸರುವಾಸಿಯಾಗುತ್ತಿದೆ. ನಾನು ಕಂಡಂತೆ ಕುವೈಟ್ ಕನ್ನಡ ಕೂಟ ಹೇಗೆ ಕೆಲಸ ಮಾಡುತ್ತಿದೆ? ಅದರ ಶಿಸ್ತು ನಿಯಮಗಳೇನು? ಯಾವ ಮನೋಭಾವದ ಸದಸ್ಯರು ಮತ್ತು ಆಡಳಿತ ಮಂಡಳಿ ಇದೆ? ಸಮಾಜಕ್ಕೇನು ಕೊಡುತ್ತಿದೆ, ಕನ್ನಡದ ಪೋಷಣೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನು ಹೇಗೆ ಉಳಿಸಿ ಬೆಳೆಸುತ್ತಿದ್ದಾರೆ? ಆಟೋಟ ಮತ್ತು ವಿವಿಧ ಕಾರ್ಯಕ್ರಮ ಹೇಗೆಲ್ಲ ನಡೆಸುತ್ತಾರೆ? ಸಾಹಿತ್ಯ ಮತ್ತು ಸಂಗೀತ, ಕನ್ನಡ ಬರವಣಿಗೆ ಬಗ್ಗೆ ಎಷ್ಟು ಕಾಳಜಿಯಿಂದ ಕೆಲಸಮಾಡುತ್ತಾರೆ? ಎಂಬುವುದನ್ನು ಹಲವಾರು ವರುಷದಿಂದ ಕಣ್ಣಾರೆ ನೋಡುತ್ತಾ ಅದರೊಂದಿಗೆ ಸೇರಿ ಸಂತೋಷದ ಕಾರ್ಯಕ್ರಮಗಳನ್ನು ಅನುಭವಿಸಿಕೊಂಡು ಬರುತ್ತಿದ್ದೇನೆ.             ಹೌದು, ಒಂದು ಸಂಘಟನೆ ನಡೆಸುವುದು ಸುಲಭವಾದ ಕೆಲಸವಲ್ಲ ಮತ್ತು ಸಂಘಟನೆಯನ್ನು ಉಳಿಸಿ ಬೆಳೆಸುವುದು ಕೂಡ ಅಷ್ಟೇ ಜವಾಬ್ದಾರಿಯಿಂದ ಕೂಡಿರುತ್ತದೆ. ...

(ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ

Image
 (ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ. ಪ್ರಾಣಿ, ಪಕ್ಷಿ ಸಂಕುಲ, ಮನುಜ ಎಲ್ಲವೂ ಹಸಿವನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಲು ಸಾಧ್ಯವಿಲ್ಲ. ಹಸಿದ ಹೊಟ್ಟೆ, ಖಾಲಿ ಕೈ ಕಲಿಸುವ ಪಾಠ ಜೀವನದಲ್ಲಿ ಮನುಷ್ಯರು ಮರೆಯುವುದು ವಿರಳ. ಹಸಿವು ಮನುಷ್ಯನನ್ನು ಹೆಚ್ಚು ಹದ್ದುಬಸ್ತಿನಲ್ಲಿಡುತ್ತದೆ, ಹಸಿವನ್ನು ತಿಳಿದವನು ಹೆಚ್ಚಿನ ಗುಣಗಳನ್ನು ಹೊಂದಿರುತ್ತಾನೆ, ಹಸಿವನ್ನು ನೀಗಿಸಲು ಪ್ರಯತ್ನ ಪಡುತ್ತಾ ಇನ್ನೊಂದು ಜೀವಿಯ ಹಸಿವನ್ನು ನೀಗಿಸಲು ಪ್ರಯತ್ನ ಮಾಡುತ್ತಾನೆ. ಇಂದಿನ ದಿನದಲ್ಲೂ ಹಸಿವಿನಿಂದ ಬಳಲುವ ಮತ್ತು ದಿನದ ಒಂದು ತುತ್ತಿಗಾಗಿ ಹಂಬಲಿಸುವ, ಬೇಡುತ್ತಿರುವ, ಮತ್ತು ಕೆಲಸ ಮಾಡಿಯೂ ದಕ್ಕದೇ ಇರುವ ಹಣದ ಕೊರತೆ, ಇವೆಲ್ಲವೂ ಮನುಜನನ್ನು ಊಹಿಸಲಾಗದ ಕಷ್ಟಕ್ಕೆ ತಳ್ಳುತ್ತ ಇರುತ್ತದೆ. ಹಸಿವನ್ನು ತಿಳಿದವನು ಅಹಂಕಾರವನ್ನು ಹೊಂದಿರುವುದಿಲ್ಲ, ಕಷ್ಟವನ್ನು ತಿಳಿದವನು ಕಷ್ಟವನ್ನು ಕೊಡುವುದೂ ಇಲ್ಲ, ಎಲ್ಲರೂ ಸುಖವಾಗಿ ಇರಲಿ ಇರುವುದರಲ್ಲಿಯೇ ಹಂಚಿ ತಿನ್ನುವ ಅನ್ನುವ ಮನೋಭಾವನೆ ಹೊಂದಿರುತ್ತಾರೆ.              ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಅದೆಷ್ಟೋ ಜನರು ಬರೇ ನೀರು ಕುಡಿದು, ಅಥವಾ ಹಸಿವನ್ನು ತಾಳಲಾರದೆ ಒದ್ದಾಡುವ ಅನೇಕ ಜನರನ್ನು ನಾವೆಲ್ಲರೂ ನೋಡುತ್ತೇವೆ. ಆ...

ಲೇಖನ -123) ಹೊರದೇಶದಲ್ಲಿರುವ ಉದ್ಯೋಗಸ್ಥರು ಅದೆಷ್ಟು ಸುರಕ್ಷಿತರು?

Image
(ಲೇಖನ -123) ಹೊರದೇಶದಲ್ಲಿರುವ  ಉದ್ಯೋಗಸ್ಥರು  ಅದೆಷ್ಟು  ಸುರಕ್ಷಿತರು? ದೇಶ ಬಿಟ್ಟು  ಹೊರದೇಶಕ್ಕೆ  ಸಾವಿರಾರು ಕನಸುಗಳೊಂದಿಗೆ ಹೆಜ್ಜೆ ಹಾಕಿ  ಸುಂದರ ಬದುಕನ್ನು  ಕಟ್ಟಿಕೊಳ್ಳಲು  ಹರಸಾಹಸ ಪಟ್ಟು ಕೆಲವರು ತನ್ನ ಕನಸನ್ನು ನನಸು ಮಾಡಿಕೊಂಡರೆ, ಇನ್ನು ಕೆಲವರು  ಜೀವನಪರ್ಯಂತ  ವಿದೇಶದಲ್ಲಿ ದುಡಿದು  ಕೊನೆಗಾಲಕ್ಕೆ  ಏನು ಇಲ್ಲದೆ  ಮರುಗುವ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ತರಹದ  ಸಮಸ್ಯೆಗಳು, ಒಂದೊಂದು ತರಹದ  ಜವಾಬ್ದಾರಿಗಳು, ಇನ್ನು ಕೆಲವರಿಗೆ  ಮುಂದಿನ ಬದುಕಿನ  ಅರಿವಿಲ್ಲದೆ  ಸಂಪಾದಿಸಿದ ಹಣವನ್ನು ವ್ಯಯಮಾಡಿ ಕೊನೆಗೆ ಪರಿತಪಿಸುವ  ಅನೇಕ ಮಂದಿ, ತಾನು  ಸಂಪಾದಿಸುವ ಕಾಲದಲ್ಲಿ  ಅನೇಕ ಜನರು  ತನ್ನನ್ನು ಉಪಯೋಗಿಸಿಕೊಳ್ಳಲು ಆರಂಭಿಸುತ್ತಾರೆ. ತನ್ನ ಸಂಪಾದನೆಯಲ್ಲಿ ಬಂದ ಹಣವನ್ನು  ಕುಟುಂಬ, ಸಂಬಂಧಿಗಳು, ಗೆಳೆಯ ಗೆಳತಿಯರು  ಎನ್ನುತ್ತಾ  ಭಾವನೆಗಳಿಗೆ ಅಂಟಿಕೊಂಡು  ಕೈ ಖಾಲಿ  ಮಾಡಿಕೊಂಡು  ಮಾಡಿರುವ ಹಣದ  ಸಹಾಯವನ್ನು ನೆನೆಯುತ್ತಾ  ಕೊರಗಿ  ಬದುಕುವ  ಅದೆಷ್ಟೋ  ಪರದೇಶಿಗಳು.               ಹೊರದೇಶವೆಂದರೆ, ಸುಲಭದಲ್ಲಿ ಹಣ ಸಂಪಾದನೆ ಮಾಡುವ...

ನಿನಗಿನ್ನೂ ತಿಳಿದಿಲ್ಲ

ನಿನಗಿನ್ನೂ ತಿಳಿದಿಲ್ಲ  ನಾನಿನ್ನ ಪ್ರೀತಿಸುವ ರೀತಿ  ನಿನಗಿನ್ನೂ ತಿಳಿದಿಲ್ಲ  ನಾ ನಿನಗಾಗಿ ಹಂಬಲಿಸುವ ರೀತಿ  ತಿಳಿಯುತ್ತಿಲ್ಲ ಎನಗೆ  ಹಗಲು ರಾತ್ರಿ  ನಿನ್ನ ನೆನಪಲ್ಲೇ ಸಾಗುತಿರುವೆ  ದಿನ ದಿನವೂ ನಿನ್ನದೇ ನೆನಪು, ಬರುವೆಯಾ ಜೊತೆಯಾಗಿ  ನನ್ನ ಪ್ರೀತಿಯ ರಾಣಿಯಾಗಿ  ಕಾಯುತಿರುವೆ ನಿನಗಾಗಿ  ಬಿಗಿದಪ್ಪಿ ಮುದ್ದಿನ ಸುರಿಮಳೆಗಾಗಿ  ಓ ನನ್ನ ನಲ್ಲೆ, ನಾನಿರುವೆ ನಿನಗಾಗಿ  ನಿನ್ನ ಪ್ರೀತಿಯ ಕಿವಿ ಮಾತಿಗಾಗಿ        ✍🏿ಮಾಧವ. ಕೆ. ಅಂಜಾರು 

( ಲೇಖನ -122) ಭೂ - ಕೈಲಾಸ

Image
(ಲೇಖನ -122) ಭೂ - ಕೈಲಾಸ, ಕಲಾ ವೈಭವ - ಕುವೈತ್ ಕನ್ನಡ ಕೂಟದಿಂದ ಆಯೋಜಿಸಲ್ಪಟ್ಟ  ದಾಸೋತ್ಸವ ಶೇಕಡಾ ನೂರರಷ್ಟು ಮನ ತಣಿಸಿತು, ಕಲಾ ಮಾತೆಯರು , ಕಲಾಗಾರರು ರೋಮಾಂಚನಗೊಳಿಸಿದ ದೃಶ್ಯಗಳ ಹಿಂದೆ ಸದ್ದಿಲ್ಲದೇ ಶ್ರಮವಹಿಸಿದ "ಶ್ರೀ ಸತೀಶ್ ಆಚಾರ್ಯ "ಇವರ ನಿರ್ದೇಶನ ಪ್ರೇಕ್ಷಕವರ್ಗದ ಹುಬ್ಬೆರಿಸಿತ್ತು,  ಭೂ ಕೈಲಾಸದ ಪ್ರತಿಯೊಂದು ಭಾಗ ಚಪ್ಪಾಳೆಯೊಂದಿಗೆ ಮುಂದುವರಿಯುತಿತ್ತು. ಆರಂಭದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಚಿಣ್ಣರಿಂದ ಹಿರಿಯರವರೆಗೂ ಬಹಳಷ್ಟು ಸ್ಪಷ್ಟ ಮತ್ತು ಸಂತಸದ ವಾತಾವರಣದಿಂದ ಕೂಡಿತ್ತು.        ರಾಮಾಯಣ, ಮಹಾಭಾರತದ ತುಣುಕುಗಳೊಂದಿಗೆ,ಭಕ್ತಿ ಮತ್ತು ರಸದೌತಣದ ಹಬ್ಬ ಕುವೈಟ್ ಕನ್ನಡ ಕೂಟದ ಮೆರುಗನ್ನು ಇನ್ನಷ್ಟು ಹೆಚ್ಚುಗೊಳಿಸಿತ್ತು. ಬಣ್ಣ ಬಣ್ಣದ ಉಡುಗೆ ತೊಡುಗೆ, ಪರಸ್ಪರರ ನಗು ಮುಖದ ಸಂಧರ್ಭಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಇಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರ ನಿಸ್ವಾರ್ಥ ಸೇವೆ ಕನ್ನಡ ಕೂಟದ ಗೌರವ ದ್ವಿಗುಣಗೊಳಿಸುತ್ತಲೇ ಇದೆ. ಪ್ರತಿಯೊಬ್ಬರಲ್ಲೂ ಕಲೆಎಂಬುದಿದೆ ಹಾಗಾಗಿ ಪ್ರತೀ ಸದಸ್ಯರು ಮತ್ತು ಅವರ ಮಕ್ಕಳೂ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತಿದ್ದಾರೆ. ಭಜನೆ, ನಿರೂಪಣೆ, ಸಾತ್ವಿಕ ಆಹಾರ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಕೂಟದ ಶಿಸ್ತನ್ನು ತೋರಿಸುತಿತ್ತು.         ಬಾಲ್ಯದ ಸಮಯದಲ್ಲಿ...

ಕಲಶೋತ್ಸವ

ಬ್ರಮ್ಮ ಕಲಶೋತ್ಸವ.... ಬ್ರಮ್ಮ ಕಲಶೋತ್ಸವ  ನಮ್ಮ ಕಾಪುದ ಮಾರ್ಯಮ್ಮನ, ನಮ್ಮೂರ ದೇವೆರೆ ಪೊಸ ಗುಡಿತ  ಸಂಭ್ರಮೋ ಮಾತೆರೆಗ್ಲಾ  ಮಾತೆರ್ಲ ಬಲೆ  ಅಮ್ಮನ ಸೇವೆ ಮಲ್ಪುಲೇ... ಅಮ್ಮನ ಪಾದ ಸೇವೆ  ನಮ್ಮ ಮಾರ್ಯಮ್ಮ ದೇವೆರೆನ  ಮಲ್ಲಿಗೆ ಪೂ ಪರುಂದು  ಭಕ್ತಿ ಸೇವೆ ಕೊರಿಯರೆ  ಮಾತೆರ್ಲ ಸೇರ್ಲೆ  ನಮ್ಮ ಕಾಪು ಕ್ಷೇತ್ರಡು, ಅಮ್ಮ ಮಾರ್ಯಮ್ಮ ನಿನ್ನನೇ ಸುಗಿಪುವ  ಭಯ ಭಕ್ತಿಡು ನಿನ್ನ ಸೇವೆ ಮಲ್ಪುವ  ಊರುನೇ ಕಾಪುನ ಕಾಪುದ ಮಾರ್ಯಮ್ಮ  ಅಭಯೋನು ಕೊರ್ಲೆ  ಅಮ್ಮ, ಅಮ್ಮ ಅಮ್ಮ 🙏🏿       ✍🏿ಮಾಧವ. ಕೆ. ಅಂಜಾರು 

ಕಾಪುಲೆ ಅಮ್ಮ ಮಾರ್ಯಾಮ್ಮ

ಕಾಪುಲೆ ಅಮ್ಮ ಮಾರ್ಯಾಮ್ಮ  ಕಾಪುಲೆ ಅಮ್ಮ ಮಾರ್ಯಮ್ಮ  ಎಂಚಪ್ಪುನಮ್ಮ ನಿನನ್ ಸುಗಿಪಂದೆ  ಎಂಚಪ್ಪುನಮ್ಮ ನಿನ್ನ ಗುಡಿಕ್ ಬರಂದೆ  ಎಂಚಪ್ಪುನಮ್ಮ ನಿನ್ನ ಸೇವೆ ಮಲ್ಪಂದೆ  ಎಂಚಪ್ಪುನಮ್ಮ ನಿನ್ನ ಕಾರುಗ್ ಬೂರಂದೆ, ಕಾಪುಲೆ ಅಮ್ಮ ಮಾರ್ಯಮ್ಮ  ಕಾಪುಲೆ ಅಮ್ಮ ಮಾರ್ಯಮ್ಮ  ಎಂಚಪ್ಪುನಮ್ಮ ನಿನ್ನ ಮೂರುತಿ ತೂವಂದೆ  ಎಂಚಪ್ಪುನಮ್ಮ  ನಿನ್ನ ಭಜನೆ ಮಲ್ಪಂದೆ  ಎಂಚಪ್ಪುನಮ್ಮ ನಿನ್ನ ಪೂಜೆ ಮಲ್ಪಂದೆ  ಎಂಚಪ್ಪುನಮ್ಮ ಅಮ್ಮಾ ಅಮ್ಮಾ ಪನಂದೆ, ಕಾಪುಲೆ ಅಮ್ಮ ಮಾರ್ಯಮ್ಮ  ಕಾಪುದ ಅಮ್ಮ ಅಮ್ಮ ಮಾರ್ಯಮ್ಮ  ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ  ಎಂಕ್ಲೆನ್ ಕಾಪುಲೆ ಅಮ್ಮಾ           ✍🏿ಮಾಧವ. ಕೆ. ಅಂಜಾರು 

ಲೇಖನ 121) ನಿಮ್ಮ ಅಮೂಲ್ಯವಾದ ಒಂದು ಮತ ನಿಮ್ಮ ಊರಿನ ಮತ್ತು ದೇಶದ ಚಿತ್ರಣವನ್ನು ಬದಲಾಯಿಸಬಹುದು

Image
 (ಲೇಖನ 121)   ನಿಮ್ಮ ಅಮೂಲ್ಯವಾದ  ಒಂದು ಮತ ನಿಮ್ಮ ಊರಿನ ಮತ್ತು ದೇಶದ ಚಿತ್ರಣವನ್ನು ಬದಲಾಯಿಸಬಹುದು. ಮತವನ್ನು ನೀಡುವಾಗ 10 ಬಾರಿ  ಆಲೋಚಿಸಿ,  ಅವಲೋಕನವನ್ನು ಮಾಡಿ  ಉತ್ತಮ ಅಭ್ಯರ್ಥಿಗೆ  ಮತವನ್ನು ನೀಡಿ. ಒಂದು ವೇಳೆ ನಮ್ಮ ಕ್ಷೇತ್ರದಲ್ಲಿ  ಯಾವುದೇ ಅಭ್ಯರ್ಥಿಯು  ಸರಿ ಇಲ್ಲ ಎಂದು ತಿಳಿದುಕೊಂಡಿದ್ದರೆ  ನೋಟ NOTA ವನ್ನು  ಉಪಯೋಗಿಸಿಕೊಳ್ಳುವ  ಅಧಿಕಾರ ಚುನಾವಣಾ ಆಯೋಗ  ದೇಶದ ಪ್ರತಿಯೊಬ್ಬ  ನಾಗರಿಕನಿಗೆ  ಅವಕಾಶ ಕಲ್ಪಿಸಿದೆ. ಯಾರೋ ಏನೋ ಹೇಳುತ್ತಾರೆಂದು  ಅವರ ಮಾತಿಗೆ  ಮರುಳಾಗದೆ ವೋಟು ಬಂತು ಮತವನ್ನು ಸುಮ್ಮನೆ ಕಡೆಗಣಿಸಬೇಡಿ. ಸರಿಸುಮಾರು  ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ  ಶ್ರಮ ಪಟ್ಟ ಅಭ್ಯರ್ಥಿಗೆ  ಇನ್ನಷ್ಟು  ಅವಕಾಶವನ್ನು  ಕಲ್ಪಿಸಿ ಕೊಡಿ. ಒಂದು ವೇಳೆ ತಮ್ಮ ಕ್ಷೇತ್ರದ ಕಡೆಗೆ ಗಮನ ಕೊಡದೇ ಇರುವ ಅಭ್ಯರ್ಥಿಗಳನ್ನು  ಆಯ್ಕೆ ಮಾಡಿದಲ್ಲಿ ಮತದಾರದ ನಾವುಗಳು  ಅಧಿಕಾರವನ್ನು ಕೊಟ್ಟು ಪರಿತಪಿಸುವಂತಾಗುತ್ತದೆ.  ಪ್ರತಿಯೊಂದು  ಪಕ್ಷಕ್ಕೂ  ಅವರದೇ ಆದ  ಸಿದ್ಧಾಂತಗಳನ್ನು  ಮತ್ತು ಧ್ಯೇಯಗಳನ್ನು  ಇಟ್ಟುಕೊಂಡು  ಮತಯಾಚನೆಗೆ ಬರುತ್ತಾರೆ,  ಆದರೆ ಒಬ್ಬ ಅಭ್ಯರ್ಥಿಯನ್ನು  ತುಲನೆ ಮಾಡುವ  ಶಕ್ತಿ  ...

ಲೇಖನ -120) ಅಪ್ಪ ನೆಂಬ ಎರಡಕ್ಷರದ ಶಕ್ತಿ ಜಗತ್ತನ್ನು ಗೆಲ್ಲಿಸುತ್ತದೆ,

Image
 (ಲೇಖನ -120) ಅಪ್ಪ ನೆಂಬ ಎರಡಕ್ಷರದ ಶಕ್ತಿ ಜಗತ್ತನ್ನು ಗೆಲ್ಲಿಸುತ್ತದೆ, ಅಪ್ಪನಿಲ್ಲದ ಬದುಕು ಅಲ್ಲೋಲಕಲ್ಲೋಲ. ನಿಜವಾದ ನೋವನ್ನು ತಿಳಿಯಬೇಕಾದರೆ ಅಪ್ಪನನ್ನು ಬೇಗ ಕಳೆದುಕೊಂಡು ಬದುಕಿದ ಅದೆಷ್ಟೋ ಜನರಲ್ಲಿ ಕೇಳಬಹುದು. ನಿಮ್ಮ ಜೀವನದಲ್ಲಿ ಕೊನೆಯತನಕ ನಿಮ್ಮ ತಂದೆ ತಾಯಿ ಜೊತೆಯಲ್ಲಿ ಇದ್ದಾರೆ ಅಂದರೆ ನಿಮ್ಮ ಪುಣ್ಯವೇ ಸರಿ. ಆದರೆ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ಅನೇಕ ಜನರು ಅಲ್ಲಲ್ಲಿ ಕಾಣಸಿಗುತ್ತಾರೆ. ಕಾರಣಗಳು ಹಲವಾರು ಇದ್ದರೂ ಅತೀ ಕಷ್ಟದಲ್ಲಿ ಜೀವನ ತೆಗೆಯುವ ತುಂಬಾ ಜನರು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೆಷ್ಟು ಆಸ್ತಿ ಅಂತಸ್ತು ಹೊಂದಿದ್ದರೂ ಮುಪ್ಪಾದ ತಂದೆ ತಾಯಿಯರು ಮಕ್ಕಳ ನಿರ್ಲಕ್ಷದಿಂದ ಬೇಗನೆ ಹಾಸಿಗೆ ಹಿಡಿದು, ಅನಾಥಶ್ರಮ ಅಥವಾ ಮನೆಯಿಂದ ಹೊರದಬ್ಬಾಲ್ ಪಡುತ್ತಾರೆ. ಜೀವದ ಅಂತ್ಯ ಭಯಾನಕವಾಗಿ ಅನುಭವಿಸುತ್ತಾರೆ.           ಯಾವುದೊ ಒಂದು ಸಂಧರ್ಭದಲ್ಲಿ ಅಪ್ಪನ ಬೈಗುಳವನ್ನು ಕೇಳುವ ಮಕ್ಕಳು ಅಪ್ಪನ ಒಳ ಮನಸ್ಸನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿರುತ್ತಾರೆ, ಅಪ್ಪನ ತ್ಯಾಗ, ಸಹಾಯ, ಚಿಕ್ಕಂದಿನಿಂದಲು ಬೆಳೆಯುವ ತನಕ ತನಗಾಗಿ ಮಾಡಿ ಇಡದೆ ಸರ್ವಸ್ವವನ್ನು ತನ್ನ ಹೆಂಡತಿ ಮಕ್ಕಳಿಗಾಗಿ ಬದುಕಿದರು ಕೊನೆಗಾಲದಲ್ಲಿ ಅಪ್ಪನನ್ನು ದೂಷಿಸುವ ಅನೇಕ ಮಂದಿ ಅಪ್ಪನನ್ನು ಕಳೆದುಕೊಂಡಾಗ ಮೊಸಳೆ ಕಣ್ಣೀರು ಹಾಕಿ ಅಪ್ಪ ಮಾಡಿದ ಆಸ್ತಿಯ ಹಿಂದೆ ಓಡಾಡುತ್ತಾರೆ...

ಲೇಖನ 119 ) ಒಬ್ಬ ಓದುಗನ ಒಂದು ಸ್ಪೂರ್ತಿದಾಯಕ ಮಾತು ಲೇಖನವನ್ನು ಮುಂದುವರಿಸಲು ಕಾರಣವಾಯಿತು,

Image
( ಲೇಖನ 119 ) ಒಬ್ಬ ಓದುಗನ   ಒಂದು ಸ್ಪೂರ್ತಿದಾಯಕ ಮಾತು ಲೇಖನವನ್ನು  ಮುಂದುವರಿಸಲು ಕಾರಣವಾಯಿತು, ಅದೇನೋ  ಹಲವು ಕಾರಣಗಳಿಂದ ಬರವಣಿಗೆಗೆ  ವಿರಾಮವನ್ನು ನೀಡಿದ್ದ ನಾನು, ಪುನಹ  ಪದಗುಂಚಗಳ ಜೋಡಣೆಯನ್ನು ಆರಂಭಿಸಿದ್ದೇನೆ. ಮರಳುಗಾಡಿನೊಳಗಿನ ಓಯಸಿಸ್ ನಂತೆ ಒಬ್ಬ ಲೇಖಕನಿಗೆ  ಅಥವಾ ಕವಿಗೆ ಓದುಗರು  ಅದೆಷ್ಟು ಬಲವನ್ನು ನೀಡುತ್ತಾರೆ ಅನ್ನುವುದು ತಿಳಿಯಿತು. ಅದೇನು ಇತ್ತೀಚೆಗೆ  ನಿಮ್ಮ ಬರವಣಿಗೆಗಳು  ನಮ್ಮ ಗ್ರೂಪ್ನಲ್ಲಿ  ಬರುತ್ತಿಲ್ಲವಲ್ಲ  ಏನಾದರೂ ಗೀಚುತ್ತಾ ಇರಿ ನಿರಾಶರಾಗಬೇಡಿ ಮುಂದುವರಿಯಿರಿ ಎಂದು ಹೇಳಿದ ಮಾತ್ರಕ್ಕೆ  ನನ್ನ ಮನದೊಳಗೆ  ಇನ್ನಷ್ಟು  ಹಲವು  ಪ್ರೇರಣಾ ಶಕ್ತಿಯ ವ್ಯಕ್ತಿಗಳು.            ಉತ್ತಮ ಕೆಲಸವನ್ನು ಮತ್ತು ಕೆಟ್ಟ ಕೆಲಸವನ್ನು ಪ್ರೇರೇಪಿಸುವ  ಜನರು ನಮ್ಮ ಜೀವನದಲ್ಲಿ ಕಾಣುತ್ತಲೇ ಇರುತ್ತೇವೆ,  ನಮ್ಮ ಸುತ್ತಮುತ್ತಲಿನ ಜನರಲ್ಲಿ ಒಂದಷ್ಟು ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿರುವ ಜನರು  ಮತ್ತು ಅನಾಚಾರ ಹೊಂದಿರುವ ಜನರು ಕೂಡ  ಸೇರಿರುತ್ತಾರೆ. ಯಾವುದೋ ಒಂದು ವ್ಯಕ್ತಿ  ತನ್ನ ಜೀವನದಲ್ಲಿ  ಸಾಧನೆ ಎಂಬ ಮೆಟ್ಟಿಲನ್ನು ಹತ್ತಬೇಕಾದರೆ  ಅದಕ್ಕೆ  ನಿಷ್ಕಲ್ಮಶ  ಜನರ ಬೆಂಬಲ ಮತ್ತು ಆಶೀರ್ವಾದ ಇದ್ದೇ ಇರುತ್ತದೆ. ಅದು ...

ಹಾಡುವೆಯ

ನೀ ನಡೆವ ದಾರಿಯೊಳು ಹೂವ ಹಾಸಿ ಕಾಯುವೆನು ನೀನಾಡುವ ಮಾತುಗಳ ಮನಸಾರೆ ಕೇಳುವೆನು, ಅದೇನು ಉಲ್ಲಾಸ ನಿನ್ನ ದನಿಯ ಕೇಳುತಲೆ ಕೋಗಿಲೆಯೂ ನಾಚಲು  ಹಾಡುವೆಯ ನನಗಾಗಿ! ಝರಿಯೊಳು ಹರಿಯುವ  ತಣ್ಣೀರ ಸಿಂಚನವು ಮೈಯಲ್ಲ ಬೀಳುತ್ತಲೆ ಆಗುವ ಅನುಭವವು ಸರಿಯಾಗಿ ಹೇಳುತಿದೆ  ನಿನ್ನ ಜೊತೆಯ ಜೀವನವು  ನನಗೆ ಸಿಕ್ಕ ಭಾಗ್ಯವು      - ಮಾಧವ. ಕೆ. ಅಂಜಾರು.

ಜೀವಿಸಲೇ ಬೇಡ

ಬೊನಿನೊಳಗಿನ  ಹುಲಿಯಾಗ ಬೇಡ ಪಂಜರದೊಳಗಿನ ಗಿಳಿಯಾಗಬೇಡ ಬೋನಿನೊಳಗಿನ ಇಲಿಯಾಗ ಬೇಡ ಬಲೆಯೊಳಗೆ ಸಿಗುವ ಮೀನಾಗಬೇಡ, ರೆಕ್ಕೆ ಇಲ್ಲದ ಹಕ್ಕಿಯಾಗಬೇಡ ನಾವಿಕನಿಲ್ಲದ ದೋಣಿಯಾಗ ಬೇಡ ವಿವೇಕವಿಲ್ಲದ ಮನುಜನಾಗಬೇಡ  ನಿನ್ನನ್ನು ಮರೆತು  ಜೀವಿಸಲೇ ಬೇಡ!        -ಮಾಧವ ಅಂಜಾರು   

ಹೇಗಿರಲಿ ರಾಮ

ಹೇಗಿರಲಿ ರಾಮ ನಿನ್ನ ನಾಮ ಜಪಿಸದೆ ಹೇಗಿರಲಿ ರಾಮ ನಿನ್ನ ಗುಡಿಯ ಕಾಣದೆ ಹೇಗಿರಲಿ ರಾಮ ನಿನ್ನ ಸೇವೆ ಮಾಡದೆ  ಹೇಗಿರಲಿ ರಾಮ ನಿನ್ನ ಪಾದಕೆರಗದೆ, ಹೇಗಿರಲಿ ರಾಮ ನಿನ್ನ ಮೂರುತಿ ಕಾಣದೆ ಹೇಗಿರಲಿ ರಾಮ ನಿನ್ನ ಭಜನೆ ಮಾಡದೆ ಹೇಗಿರಲಿ ರಾಮ ನಿನ್ನ ಪೂಜೆ ಮಾಡದೆ ಹೇಗಿರಲಿ ರಾಮ ರಾಮ ರಾಮ ಹೇಳದೆ        ✍️ಮಾಧವ. ಕೆ. ಅಂಜಾರು 

ರಾಮ ರಾಮ ರಘುರಾಮ

ರಾಮ ರಾಮ ರಘುರಾಮ ಜಾನಕಿ ವಲ್ಲಭ  ಶ್ರೀರಾಮ ರಾಮ ರಾಮ ಜಯರಾಮ ದಶರಥ ನಂದನ ಶ್ರೀರಾಮ ಕೌಸಲ್ಯನಂದನ ಶ್ರೀರಾಮ ರಾಜೀವಲೋಚನ ಶ್ರೀರಾಮ ರಾಮ ರಾಮ ರಘುರಾಮ ಶ್ರೀ ಜನಾರ್ಧನ ಶ್ರೀರಾಮ ರಾಮ ರಾಮ ಜಯರಾಮ ಸತ್ಯವ್ರತಾಯ ಶ್ರೀರಾಮ  ತ್ರಿವಿಕ್ರಮಯ ಶ್ರೀರಾಮ ಪರಮಾತ್ಮನೇ ಶ್ರೀರಾಮ ರಾಮ ರಾಮ ರಘುರಾಮ ಪರತ್ಪರಾಯ ಶ್ರೀರಾಮ ಸಚಿದಾನಂದ ಶ್ರೀರಾಮ ಸರ್ವದೇವಾತ್ಮ ಜಯರಾಮ ಪರಬ್ರಮ್ಮನೇ ಶ್ರೀರಾಮ ಜಗದ್ ಗುರುವೇ ಶ್ರೀರಾಮ         ✍️ಮಾಧವ. ಕೆ. ಅಂಜಾರು 

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

Image
✍️ Madhav. K. Anjar   ( ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ....! ಪೊಲೀಸರೆಂದರೆ  ಭಯದಿಂದ ಓಡುವ ನಮ್ಮ ದೇಶದ ಜನರು ಪೋಲಿಸ್ ವ್ಯವಸ್ಥೆಯಿಂದ  ಸಹಾಯಕ್ಕಿಂತ ಜಾಸ್ತಿ ತೊಂದರೆಯನ್ನು  ಅನುಭವಿಸಿರುವ ಉದಾಹರಣೆಗಳನ್ನು ಹೆಚ್ಚಿನ ಜನರು  ಹೇಳುತ್ತಾರೆ   ಪೊಲೀಸ್ ಠಾಣೆಯಲ್ಲಿ  ಅಥವಾ ಸಂಚಾರಿ ಗಸ್ತು ಪೊಲೀಸರು ಸಾರ್ವಜನಿಕರನ್ನು ವಿನಾಕಾರಣ ಉಪದ್ರವಿಸಿ ಭ್ರಷ್ಟಾಚಾರದಲ್ಲಿ  ತೊಡಗಿಸಿಕೊಂಡಿರುವ  ಉದಾಹರಣೆಗಳು  ಹೆಚ್ಚಾಗಿ ಇದ್ದಿರಬಹುದು. ಹಾಗಾಗಿ  ಅತಿ ಹೆಚ್ಚು ಪ್ರಕರಣಗಳು ಪೊಲೀಸ್ ಠಾಣೆಗೆ  ಹೋಗದೆ   ಮುಚ್ಚಿಹೋಗಿರುತ್ತದೆ. ಅಪಘಾತ, ಬೆದರಿಕೆ, ಕೃತ್ಯಗಳು, ಬಲಾತ್ಕಾರ, ಶೋಷಣೆ, ಜಾತಿನಿಂದನೆಗಳು, ಧರ್ಮ ನಿಂದನೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಭ್ರಷ್ಟಾಚಾರ, ವಂಚನೆ ಪ್ರಕರಣಗಳು   ಪೊಲೀಸ್ ಠಾಣೆಗೆ ಹೋದಾಗ ಸರಿಯಾದ ತನಿಖೆ, ಮತ್ತು ಕಾನೂನಿನ ರೀತಿಯಲ್ಲಿ  ಬೇಕಾಗುವ ಶಿಕ್ಷೆಯನ್ನು ಕೊಡುವ ಬದಲು ಆರೋಪಿಗಳನ್ನು ರಾಜಕೀಯ ಪ್ರಭಾವ ಮತ್ತು ಹಣದಾಸೆಗಾಗಿ  ಹೆಚ್ಚಿನ ಪ್ರಕರಣಗಳನ್ನು  ತಿರುಚಿರುವ  ಉದಾಹರಣೆಗಳು ಹೆಚ್ಚಾಗಿ ಇದ್ದಿರಬಹುದು. ಈಗಲೂ  ಸಮಾಜದಲ್ಲಿ ಅತಿಯಾದ ಜಾತಿ ವ್ಯಾಮೋಹದಿಂದ ಸಮಾಜದಲ್ಲಿ ಬೇದ ಭಾವನೆಗಳು  ಜೀವಂತವಾಗಿವೆ. ಇದರಿಂದ ಅಲ್ಲ...