ಹಾಡುವೆಯ

ನೀ ನಡೆವ ದಾರಿಯೊಳು
ಹೂವ ಹಾಸಿ ಕಾಯುವೆನು
ನೀನಾಡುವ ಮಾತುಗಳ
ಮನಸಾರೆ ಕೇಳುವೆನು,
ಅದೇನು ಉಲ್ಲಾಸ
ನಿನ್ನ ದನಿಯ ಕೇಳುತಲೆ
ಕೋಗಿಲೆಯೂ ನಾಚಲು 
ಹಾಡುವೆಯ ನನಗಾಗಿ!

ಝರಿಯೊಳು ಹರಿಯುವ 
ತಣ್ಣೀರ ಸಿಂಚನವು
ಮೈಯಲ್ಲ ಬೀಳುತ್ತಲೆ
ಆಗುವ ಅನುಭವವು
ಸರಿಯಾಗಿ ಹೇಳುತಿದೆ 
ನಿನ್ನ ಜೊತೆಯ ಜೀವನವು 
ನನಗೆ ಸಿಕ್ಕ ಭಾಗ್ಯವು
     - ಮಾಧವ. ಕೆ. ಅಂಜಾರು.






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ