ಕಾಲ ಕಳೆದಂತೆ
ಕಾಲ ಕಳೆದಂತೆ
ನಿನ್ನ ಪ್ರೇಮಿಸುತಲೇ
ಹೃದಯ ವೀಣೆತಂತಿಯು
ಮಿಡಿಯುತ್ತಿದೆ
ಹಾಯಾಗಿ ಜೊತೆಯಾಗಿರು
ಪ್ರಿಯೇ ನಿನಗಾಗಿ
ಜೀವ ಹಾತೊರೆಯುತ್ತಿದೆ,
ಮುಸ್ಸಂಜೆಯ ಸವಿಮಾತು
ಕಿವಿಯೊಳಗೆ ಗುನುಗುತ್ತಲು
ಹಕ್ಕಿಗಳ ಚಿಲಿಪಿಲಿಗೆ
ಹೊಸ ಕನಸು ಚಿಗುರುತ್ತಿದೆ
ದಿನಕಳೆಯುತ್ತಿದ್ದಂತೆ
ನಮ್ಮಿಬ್ಬರ ಪ್ರೀತಿ
ಹೊಸ ಜೀವನ ನೀಡುತಲಿದೆ
✍️ಮಾಧವ. ಕೆ. ಅಂಜಾರು
Comments
Post a Comment