(ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ

 (ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ. ಪ್ರಾಣಿ, ಪಕ್ಷಿ ಸಂಕುಲ, ಮನುಜ ಎಲ್ಲವೂ ಹಸಿವನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಲು ಸಾಧ್ಯವಿಲ್ಲ. ಹಸಿದ ಹೊಟ್ಟೆ, ಖಾಲಿ ಕೈ ಕಲಿಸುವ ಪಾಠ ಜೀವನದಲ್ಲಿ ಮನುಷ್ಯರು ಮರೆಯುವುದು ವಿರಳ. ಹಸಿವು ಮನುಷ್ಯನನ್ನು ಹೆಚ್ಚು ಹದ್ದುಬಸ್ತಿನಲ್ಲಿಡುತ್ತದೆ, ಹಸಿವನ್ನು ತಿಳಿದವನು ಹೆಚ್ಚಿನ ಗುಣಗಳನ್ನು ಹೊಂದಿರುತ್ತಾನೆ, ಹಸಿವನ್ನು ನೀಗಿಸಲು ಪ್ರಯತ್ನ ಪಡುತ್ತಾ ಇನ್ನೊಂದು ಜೀವಿಯ ಹಸಿವನ್ನು ನೀಗಿಸಲು ಪ್ರಯತ್ನ ಮಾಡುತ್ತಾನೆ. ಇಂದಿನ ದಿನದಲ್ಲೂ ಹಸಿವಿನಿಂದ ಬಳಲುವ ಮತ್ತು ದಿನದ ಒಂದು ತುತ್ತಿಗಾಗಿ ಹಂಬಲಿಸುವ, ಬೇಡುತ್ತಿರುವ, ಮತ್ತು ಕೆಲಸ ಮಾಡಿಯೂ ದಕ್ಕದೇ ಇರುವ ಹಣದ ಕೊರತೆ, ಇವೆಲ್ಲವೂ ಮನುಜನನ್ನು ಊಹಿಸಲಾಗದ ಕಷ್ಟಕ್ಕೆ ತಳ್ಳುತ್ತ ಇರುತ್ತದೆ. ಹಸಿವನ್ನು ತಿಳಿದವನು ಅಹಂಕಾರವನ್ನು ಹೊಂದಿರುವುದಿಲ್ಲ, ಕಷ್ಟವನ್ನು ತಿಳಿದವನು ಕಷ್ಟವನ್ನು ಕೊಡುವುದೂ ಇಲ್ಲ, ಎಲ್ಲರೂ ಸುಖವಾಗಿ ಇರಲಿ ಇರುವುದರಲ್ಲಿಯೇ ಹಂಚಿ ತಿನ್ನುವ ಅನ್ನುವ ಮನೋಭಾವನೆ ಹೊಂದಿರುತ್ತಾರೆ. 


            ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಅದೆಷ್ಟೋ ಜನರು ಬರೇ ನೀರು ಕುಡಿದು, ಅಥವಾ ಹಸಿವನ್ನು ತಾಳಲಾರದೆ ಒದ್ದಾಡುವ ಅನೇಕ ಜನರನ್ನು ನಾವೆಲ್ಲರೂ ನೋಡುತ್ತೇವೆ. ಆದರೆ ಸಾಮರ್ಥ್ಯವಿದ್ದೂ ಹಸಿವನ್ನು ನೀಗಿಸುವ ಕಾರ್ಯಕ್ಕೆ ಸಹಾಯವನ್ನು ಮಾಡದೆ ಇರುವ ಅನೇಕ ಜನರು ಕೂಡ ಇರಬಹುದು. ಯಾಕೆಂದರೆ ಹಸಿವಿನ ಅನುಭವ ಆ ವ್ಯಕ್ತಿಗೆ ಇರದೇ ಇರುವುದರಿಂದ. ಅಥವಾ ತನ್ನ ವ್ಯಕ್ತಿತ್ವದಿಂದ. ನಮ್ಮ ಊರಿನ ಗಲ್ಲಿ, ಪಟ್ಟಣದಲ್ಲಿ ನಿಜವಾದ ಕಾರಣಗಳಿಂದ ಹೊಟ್ಟೆಗಿಲ್ಲದೆ ಬದುಕುವವರು ಕಂಡರೆ ತನ್ನಿಂದ ಆಗುವಷ್ಟು ಸಹಾಯವನ್ನು ಮಾಡಲು ಮರೆಯಬೇಡಿ. ಒಂದು ಜೀವಿಯ ಹಸಿವನ್ನು ನೀಗಿಸಿದ ಪುಣ್ಯ ಕಾರ್ಯ ನಿಮಗೆ ಇನ್ನೊಂದು ರೀತಿಯಲ್ಲಿ ರಕ್ಷಣೆಯನ್ನು ಮಾಡುತ್ತದೆ ಅಥವಾ ಆ ಕೆಲಸದಿಂದ ಆತ್ಮ ತೃಪ್ತಿ ಸಿಕ್ಕಿಯೇ ಸಿಗುತ್ತದೆ. 



        ಹಲವಾರು ದೇವಸ್ಥಾನಗಳು ಸಾವಿರಾರು ಜನರಿಗೆ ಅನ್ನದಾನದಂತಹ ಕೆಲಸವನ್ನು ನಿರಂತರ ಮಾಡುತ್ತಲೇ ಇದೆ, ಮತ್ತು ಸದ್ದಿಲ್ಲದೇ ತುಂಬಾ ಜನರು ಅನ್ನ ದಾನದ ಕೆಲಸವನ್ನು ಮಾಡುತ್ತ ಸಮಾಜಕ್ಕೆ ಮತ್ತು ಪ್ರಾಣಿ ಪಕ್ಷಿಗಳ ಪ್ರೀತಿಗೆ ಪಾತ್ರರಾಗುತ್ತಾರೆ. ಉದಾಹರಣೆಗೆ, ನೀವುಗಳು ಸಾಕುತ್ತಿರುವ ನಾಯಿ, ಮೀನು, ಬೆಕ್ಕು, ಪಕ್ಷಿ ಅಥವಾ ಯಾವುದೇ ಸಾಕು ಪ್ರಾಣಿ ಅಥವಾ ಕಾಡುಪ್ರಾಣಿಯ ಹಸಿವನ್ನು ನೀಗಿಸಿದ್ದಲ್ಲಿ ಆ ಪ್ರಾಣಿಗಳು ನಿಮ್ಮ ಮೇಲೆ ತೋರುವ ಪ್ರೀತಿ ನೀವು ಕಾಣಬಹುದು. ಪ್ರಪಂಚದಲ್ಲಿ ಯಾವುದೇ ಜೀವಿ ಹಸಿವಿನಿಂದ ಬಳಲಿ ಸಾಯಬಾರದು, ಪ್ರತೀ ಜೀವಿಗೂ ಆಹಾರ ಸಿಗುತ್ತಲೇ ಇರಲಿ. ಶೃಷ್ಟಿಯಂತೆ ಹಸಿವು ಎಲ್ಲವನ್ನೂ ತಿಳಿಸುತ್ತದೆ.

         ನಿಮಗೆ ಅವಕಾಶ ಸಿಕ್ಕಿದಾಗ ಹಸಿದವರಿಗೆ ಅನ್ನವನ್ನು ಹಾಕಿ, ಪ್ರಾಣಿ ಪಕ್ಷಿಗೂ ತಿನ್ನಲು ಕೊಡಿ, ನೀರಿನ ಪಾತ್ರೆಗಳನ್ನು ಇಟ್ಟು ಸಹಕರಿಸಿ. ತುಂಬಾ ಪ್ರಾಣಿ ಪಕ್ಷಿಗಳು ಬೇಸಿಗೆಯಲ್ಲಿ ನೀರಿಲ್ಲದೇ ಸಾಯುತ್ತವೆ, ಮನುಷ್ಯ ಕೂಡ ಅನ್ನ ನೀರಿಲ್ಲದೆ ಸಾಯುವ ನಿದರ್ಶನ ಕೂಡ ಇದೆ, ವೈರಿಯಾದರೂ ಹಸಿವಿನಿಂದ ಸಾಯಲು ಅವಕಾಶ ಕೊಡಬೇಡಿ. ಹಸಿವಾಗಿದೆ ಎಂದು ಅರಿತಾಗ ಆಹಾರವನ್ನು ತಿನ್ನಲು ತಡಮಾಡ ಬೇಡಿ, ನಾವುಗಳು ಕೆಲಸವನ್ನು ಮಾಡುವುದೇ ಹಸಿವನ್ನು ನೀಗಿಸಲು, ಹೊಟ್ಟೆಗೆ ಬಟ್ಟೆ ಕಟ್ಟಿ ಹಣ ಸಂಪಾದನೆ ಬೇಡ, ಹೋಟೆಲು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಹಾರವನ್ನು ಚೆಲ್ಲಬೇಡಿ, ನಿಮಗೆ ಒಂದು ಹೊತ್ತಿನ ಆಹಾರವನ್ನು ಕೊಟ್ಟವರನ್ನು ಕೂಡ ಮರೆಯಬೇಡಿ, ಅನ್ನದ ಋಣ ಎಲ್ಲಿಯಾದರು ತೀರಿಸುತ್ತಲೆ ಇರಿ.

     ಉದಾಹರಣೆಗೆ,  ನಿಮ್ಮ ಜೀವನದಲ್ಲಿ ಅದೆಷ್ಟೋ ಬಾರಿ ವಿವಿಧ ಸಂಧರ್ಭದಲ್ಲಿ ಆಹಾರವನ್ನು ಉಚಿತ ವಾಗಿ ತಿಂದಿರುತ್ತೀರಾ, ಅದರ ಬದಲಾಗಿ ಅಲ್ಪವಾದರೂ ನೀವು ಇನ್ನೊಬ್ಬರ ಹಸಿವನ್ನು ಕೂಡ ನೀಗಿಸಲು ಪ್ರಯತ್ನಿಸಿ ಅಥವಾ ಪರೋಕ್ಷವಾಗಿ ಇನ್ನೊಂದು ರೀತಿಯ ಸಹಾಯವನ್ನು ಮಾಡಲು ಮರೆಯಬೇಡಿ, ಯಾಕೆಂದರೆ ಉಚಿತವಾಗಿ ತಿಂದ ಯಾವುದೇ ವಸ್ತು ನಿಮ್ಮ ಶ್ರಮವನ್ನು ಹೊಂದಿರುವುದಿಲ್ಲ ಮತ್ತು ಉಚಿತ ವೆಂಬುದು ನಿಮ್ಮನ್ನು  ಮೇಲೆ ಬರಲು ಬಿಡಲ್ಲ.  ಈಗಾಗಲೇ ಪ್ರಪಂಚದಲ್ಲಿ ಹಸಿವನ್ನು ನೀಗಿಸುವ ಪ್ರತಿಯೊಬ್ಬರಿಗೂ ಆ ಭಗವಂತ ಕಾಪಾಡುತ್ತಿರಲಿ, 

         ಮನೆಯಲ್ಲಿ ಆಹಾರವನ್ನು ಕಸದಬುಟ್ಟಿಗೆ ಹಾಕಬೇಡಿ, ಬೇಕಾಗುವಷ್ಟೇ ಆಹಾರವನ್ನು ತಯಾರಿಸಿ, ಉಳಿದ ಉತ್ತಮ ಆಹಾರವನ್ನು ಇನ್ನೊಂದು ಜೀವಿ ತಿನ್ನುವಂತೆ ಮಾಡಿ, ಅದು ಯಾವುದೇ ಆಗಿರಲಿ, ನೀವು ನೀಡುವ ಆಹಾರ ವಿಷವಾಗಿರದೆ ಇರಲಿ. ಒಬ್ಬ ಮನುಷ್ಯ 40 ವರುಷದಿಂದ ತನ್ನ ಹೊಟ್ಟೆಪಾಡಿಗಾಗಿ ಕಷ್ಟ ಪಡುವ ಒಂದು ವಿಡಿಯೋ ತುಣುಕು ಆ ವ್ಯಕ್ತಿಯ ಕಷ್ಟ ನನಗೆ ಊಹಿಸಲು ಕಷ್ಟವಾಗುತ್ತಿದೆ, ಪ್ರಪಂಚದಲ್ಲಿ ಇಂತಹ ಅನೇಕ ಮುಗ್ದರು ಇರಬಹುದು, ನಾನು ನಲ್ವತ್ತು ವರುಷದಿಂದ ಈ ಪಾತ್ರೆಯಲ್ಲಿ ಲಡ್ಡು ಮಾರಿ ಜೀವಿಸು ತಿದ್ದೇನೆ, ನನ್ನ ಹೊಟ್ಟೆ ತುಂಬಿಸಲು, ನನ್ನ ಮಾತು / ಕಷ್ಟ ಮೋದಿಜಿ ವರೆಗೆ ತಲುಪುತ್ತಿಲ್ಲ, ಕರುಣಾಜನಕ ಅಲ್ಲವೇ? 

       ಹಾಗಾದರೆ ಎಲ್ಲಾ ಪ್ರಜ್ಞಾವಂತ ಜನರು ಇನ್ನಾದರೂ ತನ್ನ ಅಲ್ಪ ಪ್ರಯತ್ನ ಈ ಭೂಮಿಗೆ ನೀಡೋಣವೇ? 

      ✍🏿ಮಾಧವ ಕೆ. ಅಂಜಾರು 

        

 

       

         

       

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ