ಲೇಖನ 121) ನಿಮ್ಮ ಅಮೂಲ್ಯವಾದ ಒಂದು ಮತ ನಿಮ್ಮ ಊರಿನ ಮತ್ತು ದೇಶದ ಚಿತ್ರಣವನ್ನು ಬದಲಾಯಿಸಬಹುದು

 (ಲೇಖನ 121)   ನಿಮ್ಮ ಅಮೂಲ್ಯವಾದ  ಒಂದು ಮತ ನಿಮ್ಮ ಊರಿನ ಮತ್ತು ದೇಶದ ಚಿತ್ರಣವನ್ನು ಬದಲಾಯಿಸಬಹುದು. ಮತವನ್ನು ನೀಡುವಾಗ 10 ಬಾರಿ  ಆಲೋಚಿಸಿ,  ಅವಲೋಕನವನ್ನು ಮಾಡಿ  ಉತ್ತಮ ಅಭ್ಯರ್ಥಿಗೆ  ಮತವನ್ನು ನೀಡಿ. ಒಂದು ವೇಳೆ ನಮ್ಮ ಕ್ಷೇತ್ರದಲ್ಲಿ  ಯಾವುದೇ ಅಭ್ಯರ್ಥಿಯು  ಸರಿ ಇಲ್ಲ ಎಂದು ತಿಳಿದುಕೊಂಡಿದ್ದರೆ  ನೋಟ NOTA ವನ್ನು  ಉಪಯೋಗಿಸಿಕೊಳ್ಳುವ  ಅಧಿಕಾರ ಚುನಾವಣಾ ಆಯೋಗ  ದೇಶದ ಪ್ರತಿಯೊಬ್ಬ  ನಾಗರಿಕನಿಗೆ  ಅವಕಾಶ ಕಲ್ಪಿಸಿದೆ. ಯಾರೋ ಏನೋ ಹೇಳುತ್ತಾರೆಂದು  ಅವರ ಮಾತಿಗೆ  ಮರುಳಾಗದೆ ವೋಟು ಬಂತು ಮತವನ್ನು ಸುಮ್ಮನೆ ಕಡೆಗಣಿಸಬೇಡಿ. ಸರಿಸುಮಾರು  ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ  ಶ್ರಮ ಪಟ್ಟ ಅಭ್ಯರ್ಥಿಗೆ  ಇನ್ನಷ್ಟು  ಅವಕಾಶವನ್ನು  ಕಲ್ಪಿಸಿ ಕೊಡಿ. ಒಂದು ವೇಳೆ ತಮ್ಮ ಕ್ಷೇತ್ರದ ಕಡೆಗೆ ಗಮನ ಕೊಡದೇ ಇರುವ ಅಭ್ಯರ್ಥಿಗಳನ್ನು  ಆಯ್ಕೆ ಮಾಡಿದಲ್ಲಿ ಮತದಾರದ ನಾವುಗಳು  ಅಧಿಕಾರವನ್ನು ಕೊಟ್ಟು ಪರಿತಪಿಸುವಂತಾಗುತ್ತದೆ.  ಪ್ರತಿಯೊಂದು  ಪಕ್ಷಕ್ಕೂ  ಅವರದೇ ಆದ  ಸಿದ್ಧಾಂತಗಳನ್ನು  ಮತ್ತು ಧ್ಯೇಯಗಳನ್ನು  ಇಟ್ಟುಕೊಂಡು  ಮತಯಾಚನೆಗೆ ಬರುತ್ತಾರೆ,  ಆದರೆ ಒಬ್ಬ ಅಭ್ಯರ್ಥಿಯನ್ನು  ತುಲನೆ ಮಾಡುವ  ಶಕ್ತಿ  ಪ್ರತಿ ಮತದಾರರಲ್ಲೂ  ಇರುತ್ತದೆ. ಯಾವುದೇ ಆಮಿಷಗಳಿಗೆ ಒಳಗಾಗದೆ  ತಾವು ಬಯಸುವ ಸದೃಢ ಅಭ್ಯರ್ಥಿಗೆ  ಮತವನ್ನು ನೀಡಿ. 



             ಅಭ್ಯರ್ಥಿಯಲ್ಲಿ ನಾಯಕತ್ವದ ಗುಣ  ಎಷ್ಟರ ಮಟ್ಟಿಗೆ  ಇದೆ? ಅಭ್ಯರ್ಥಿಯ  ಹಿನ್ನಲೆ, ವಾಕ್ಚಾತುರ್ಯ, ಧೈರ್ಯ, ಮತ್ತು ಯುಕ್ತಿವಂತನೇ ನಮ್ಮ ಊರನ್ನು  ಪ್ರಾಮಾಣಿಕವಾಗಿ  ಮುನ್ನಡೆಸುವ  ಶಕ್ತಿಯುಳ್ಳವನೇ  ಅವನು  ಎಷ್ಟು  ವಿದ್ಯಾಭ್ಯಾಸವನ್ನು ಹೊಂದಿದ್ದಾನೆ ಈ ಹಿಂದೆ ಅತಿ ಅಭ್ಯರ್ಥಿಯ ಸ್ವಂತ ಆಸ್ತಿ  ಎಷ್ಟಿತ್ತು  ಈಗ  ಅವನ ಆಸ್ತಿ  ಎಷ್ಟರಮಟ್ಟಿಗೆ  ಇದೆ? ಅವರು ಮಾಡುತ್ತಿರುವ  ಅನ್ಯ ಉದ್ಯೋಗಗಳೇನು? ಯಾವುದಾದರೂ  ಸ್ವಉದ್ಯೋಗವನ್ನು  ಮಾಡಿಕೊಳ್ಳುತ್ತಿರುವನೇ  ಇಂತಹ  ಅನೇಕ ವಿಚಾರಗಳೊಂದಿಗೆ  ನಮ್ಮ ದೇಶಕ್ಕೆ ಬೇಕಾಗುವ  ಸೂಕ್ತ ಅಭ್ಯರ್ಥಿಯೇ ಎಂಬುದನ್ನೆಲ್ಲ ತಿಳಿದಾಗ ನಿಮ್ಮ ಮತ ಸೂಕ್ತ ಅಭ್ಯರ್ಥಿಗೆ  ನೀಡಿದಂತಾಗುತ್ತದೆ. 

        ಮತದಾರರು ಭಾರತದ ಶಕ್ತಿ ಅವರಿಂದಲೇ  ನಮ್ಮ ದೇಶದ ಉನ್ನತಿಯಾಗಬೇಕು, ತಮ್ಮ ಊರಿನಲ್ಲಿ ಭ್ರಷ್ಟಾಚಾರದ ವ್ಯವಸ್ಥೆ  ಎಲ್ಲಿಯವರೆಗೆ  ಬೇರುರಿದೆ? ಎಷ್ಟು ಭ್ರಷ್ಟಾಚಾರ  ಕಡಿಮೆಯಾಗಿದೆ ಎಷ್ಟು ಕೆರೆ, ರಸ್ತೆ, ಮೂಲಭೂತ ಸೌಕರ್ಯ ನೀಡಲಾಗಿದೆ, ನಿರ್ದಿಷ್ಟ ಪಕ್ಷಗಳ ಮುಂದಿನ ಧ್ಯೇಯಗಳೇನು? ಪಾರದರ್ಶಕ ಆಡಳಿತಕ್ಕೆ ಯಾರು ಹೆಚ್ಚು ಒತ್ತು ಕೊಡುತ್ತಾರೆ? ಸಾಮಾಜಿಕ ನ್ಯಾಯ ಎಷ್ಟರ ಮಟ್ಟಿಗೆ ಇದೆ? ಎಷ್ಟು ಅಭಿವೃದ್ಧಿ ಯಾವ ಕ್ಷೇತ್ರದಲ್ಲಿ ಆಗಿದೆ? ಪರಿಸರಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ? ಕೃಷಿಗೆ ಎಷ್ಟು ಬೆಂಬಲ ಇದೆ? ಭಾರತದ ಮತ್ತು ಪ್ರತೀ ರಾಜ್ಯದ ಒಟ್ಟು ಸಾಲ ಎಷ್ಟು? ಸರಾಸರಿ ಎಷ್ಟು ಜನ ಬಡವರು ಮತ್ತು ಅತೀ ಬಡವರು ಇದ್ದಾರೆ? ಅದೆಷ್ಟು ಜನರು ಊಟಕ್ಕಿಲ್ಲದೇ ಉಪವಾಸ ಇದ್ದಾರೆ? ನಿಮ್ಮ ಊರಿನಲ್ಲಿ ನೀರು, ವಿದ್ಯುತ್ ಪಕ್ಕದ ರಸ್ತೆ ಯಾರು ಅಧಿಕಾರದಲ್ಲಿ ಇರುವಾಗ ಸರಿಯಾಗಿ ನಿರ್ವಹಿಸುತ್ತಿದ್ದಾರೆ? ಪಂಚಾಯತ್, ಜಿಲ್ಲಾ ಪಂಚಾಯತ್ ಗಳಲ್ಲಿ ನಡೆಸಿ ಕೊಟ್ಟ ಅಭಿವೃದ್ಧಿ ಕೆಲಸ ಎಷ್ಟರಮಟ್ಟಿಗೆ ಉಪಯೋಗವಾಗಿದೆ ಇಂತಹ ಅನೇಕ ವಿಚಾರದಲ್ಲಿ ಒಮ್ಮೆ ನಿಮ್ಮ ಕಣ್ಣು ಹಾಯಿಸಿ ಮತವನ್ನು ಕೊಟ್ಟುಬಿಡಿ. 

       ರಾಜಕೀಯವೆಂಬುವುದು, ರಾಜಕೀಯ ನಾಯಕರ ಜಟಾಪಟಿಯ ಒಳಗೆ ಸಾಮಾನ್ಯ ಜನರು ಒದ್ದಾಡುವ ಪರಿಸ್ಥಿತಿ ಅತಿಯಾದರೆ ನಿಮ್ಮ ಮತಕ್ಕೆ ಬೆಲೆ ಇರುವುದಿಲ್ಲ, ಬುದ್ದಿವಂತ ಜಿಲ್ಲೆಯ ಮತದಾರರು ನಾವೆಲ್ಲರೂ ತಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಿ ಮತವನ್ನು ನೀಡಿ ದೇಶಕ್ಕೆ ಬೆನ್ನೆಲುಬಾಗೋಣ. ಹಂಚಿ ತಿನ್ನುವ ರಾಜಕೀಯ ಪಕ್ಷ ಮತ್ತು ಅಧಿಕಾರಿಗಳನ್ನು ನಮ್ಮ ಕ್ಷೇತ್ರದಲ್ಲಿ ಬರದಂತೆ ನೋಡಿಕೊಳ್ಳೋಣ ಅಲ್ಲವೇ? 

        ಈ ಬಾರಿಯ ಮತ ಕೇಳಿದವರಿಗೆ ಕೊಡುವ ನಿರ್ಧಾರಕ್ಕೆ ಹೋಗಬೇಡಿ, ಪ್ರಜೆಗಳಾದ ನಾವುಗಳು ಆಯ್ಕೆ ಮಾಡುವ ಜನ ಪ್ರತಿನಿಧಿ ಅಧಿಕಾರಕ್ಕೆ ಬರಲಿ.  ಅಧಿಕಾರಕ್ಕೆ ಬಂದವರು ನಮ್ಮ ಊರನ್ನು ಮತ್ತು ದೇಶವನ್ನು ಪ್ರಾಮಾಣಿಕವಾಗಿ ಮುನ್ನಡೆಸುವಂತಾಗಲಿ, ಎಲ್ಲಾ ಮತದಾರರಲ್ಲಿ ಕಳ ಕಳಿಯ ವಿನಂತಿ ನಮ್ಮ ಮತ ದೇಶಕ್ಕೆ ಹಿತ, ನಮ್ಮ ಊರು ಉದ್ದಾರವಾದರೆ ನಮ್ಮ ದೇಶವೂ ಉದ್ಧಾರವಾಗುತ್ತದೆ. 

     ನನ್ನ ಅನಿಸಿಕೆಯ ಎರಡಕ್ಷರ ಹೆಚ್ಚಿನ ಮತದಾರರಿಗೆ ತಲುಪಲಿ, ಸರ್ವರಿಗೂ ಮಂಗಳವಾಗಲಿ, ಶಾಂತಿಯುತ ಜೀವನ ನಮ್ಮ ಭಾರತದಲ್ಲಿ ನೆಲೆಸಲಿ. ಶಕ್ತಿಯುತ ಭಾರತ ಪ್ರಪಂಚಕ್ಕೆ ಮಾದರಿಯಾಗಲಿ. 

      ✍🏿ಮಾಧವ. ಕೆ. ಅಂಜಾರು 


      

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ