ಜಾಲ ತಾಣ

(ಲೇಖನ -128) ಲೇಖನ - 128( ಜಾಲ ತಾಣ )

ಸಾಮಾಜಿಕ ಜಾಲತಾಣದಲ್ಲಿ ವಾಟ್ಸಪ್ಪ್ ಫೇಸ್ಬುಕ್ ಇನ್ನಿತರ ಜಾಲ ತಾಣ ದಲ್ಲಿ ಮತ್ತು ಫೋನ್ ಕಾಲ್ ಗಳಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಗೊತ್ತಿದ್ದೂ ಗೊತ್ತಿಲ್ಲದೇ ನಡೆಯುವ ಸಂದರ್ಭಗಳು ಉದ್ದೇಶಪೂರ್ವಕ ಅಥವಾ ಉದ್ದೇಶವಿಲ್ಲದೆಯೂ ಮತ್ತೊಬ್ಬರಿಗೆ ವಿನಿಮಯವಾಗಿ, ನಿಮ್ಮನ್ನು ತೊಂದರೆಗೆ ಒಳಪಡಿಸುವ ಸಾಧ್ಯತೆ, ಹುನ್ನಾರಗಳನ್ನು ಅಲ್ಲಗಳೆಯುವಂತಿಲ್ಲ. ಕೆಲವು ವಿಚಾರಗಳು ಸರಿಯೆಂದು ತೋರಿದರೂ ಮತ್ತೊಬ್ಬರಿಗೆ ಸರಿಯಾಗಿ ಕಾಣದು ಮತ್ತು ಬೇರೆ ಬೇರೆ ಕಾರಣಗಳಿಂದ ಒಬ್ಬರನ್ನೊಬ್ಬರು ದ್ವೇಷ ಸಾಧನೆಗೆ ಉಪಯೋಗಿಸುವ ಸಾಧ್ಯತೆಗಳಿರಬಹುದು.  ತಾವುಗಳು ಮಾಡುತ್ತಿರುವ ಮೆಸೇಜ್ ಅಥವಾ ಕಾಲ್ ಗಳನ್ನು ತಿರುಚಿ ಅಥವಾ ತಿರುಚದೆ ಇನ್ನೊಬ್ಬರಿಗೆ ಕಳುಹಿಸಿ ಅವಾಂತರ ಸೃಷ್ಟಿಯಾಗುವ ಸಾಧ್ಯತೆಗಳಿರಬಹುದು. ನಾವುಗಳು ನಮ್ಮ ಮೊಬೈಲ್ ಉಪಯೋಗ ಮಾಡುವಾಗ ಎಚ್ಚರಿಕೆಯಿಂದ ಮೆಸೇಜ್ಗಳನ್ನು ಹಾಕಬೇಕಾಗುತ್ತದೆ. ಇಲ್ಲಿ ನಮ್ಮವೇರೆಂದು ತಿಳಿದುಕೊಂಡವರೇ ಇಕ್ಕಟ್ಟಿಗೆ ಸಿಲುಕಿಸುವ ಅಥವಾ ತೊಂದರೆಗೆ ಒಳಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 

ಸರಿ ತಪ್ಪುಗಳನ್ನು ನಾವುಗಳು ಸರಿಯಾದ ಜನರೊಂದಿಗೆ ಚರ್ಚೆ ಮಾಡಿದಾಗ ಮಾತ್ರ ಉತ್ತಮವಾದ ಅಂತ್ಯ ಕಾಣಬಹುದು ಅಥವಾ ಚರ್ಚೆಗೆ ಬೆಲೆ ಕೊಡುವ ಜನರೊಂದಿಗೆ ಮಾತ್ರ ನಿಮ್ಮ ಮಾತುಕತೆಯನ್ನು ಮುಂದುವರಿಸುವಂತೆ ಆಗಲಿ. ನಾವು ನಮ್ಮವರು ಯಾರೆಂದು ತಿಳಿಯುವ ಹೊತ್ತಿಗೆ ನಮ್ಮಲ್ಲಿ ನಡೆಯುವ ತಪ್ಪುಗಳು ಅನ್ಯರಿಗೆ ಆಹಾರವಾಗಿ ಹೋಗದಂತೆ ಎಚ್ಚರಿಕೆ ವಹಿಸಬೇಕು.

ನಾವೆಲ್ಲರೂ ಅದೆಷ್ಟೋ ಪ್ರಕರಣಗಳನ್ನು ನೋಡುತ್ತಿರುತ್ತೇವೆ, ವಿವಿಧ ಕಾರಣಗಳಿಂದ ಇಂದಿನ ದಿನಗಳಲ್ಲಿ ತೇಜೋವದೆ ಮಾಡುವ ಸಂಧರ್ಭಗಳು ನಡೆಯುತ್ತವೆ. ಫೋಟೋ, ಸ್ವರ ಗಳನ್ನು ಉಪಯೋಗ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ನಿಮಗೂ ನಿಮ್ಮ ಕುಟುಂಬಕ್ಕೂ ತೊಂದರೆಗಳನ್ನು ಉಂಟುಮಾಡುವ ಉದಾಹರಣೆಗಳನ್ನು ಅಲ್ಲಲ್ಲಿ ನೋಡುತ್ತೇವೆ. 

ವಿರೋಧ, ಅವಿರೋಧ, ಒಪ್ಪಿಗೆ, ದಿಕ್ಕಾರ ಗಳ ನಡುವಿನ ಸಂಭಾಷಣೆ ಕ್ಲಿಷ್ಟ ಸಮಯಕ್ಕೆ ಕೊಂಡು ಹೋಗುವ ಸಾಧ್ಯತೆ ಕೂಡ ಇರಬಹುದು. ಒಟ್ಟಾರೆ ಬಕ ಬಕ್ಷಿಗಳಿಗೆ ಆಹಾರವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿ ಯಾರನ್ನು ವಿಶ್ವಾಸ ಮಾಡಿಕೊಳ್ಳಬೇಕು ಯಾರನ್ನು ಬಿಡಬೇಕು ಅನ್ನುವ ವಿಚಾರ ಕೊನೆಯದಾಗಿ ಅರ್ಥವಾಗುತ್ತದೆ.

ನಿಮ್ಮ ಮೊಬೈಲ್ ಸರಿಯಾದ ಸೆಕ್ಯೂರಿಟಿ ಕೋಡ್ ಹೊಂದಿರಲಿ, ನಿಮ್ಮ ಸಂಭಾಷಣೆ  ಖಾಸಗಿ ಆಗಿದ್ದಲ್ಲಿ ನಿಮಗೆ ಅವರ ಮೇಲೆ ಸರಿಯಾದ ಮಾಹಿತಿ ಇದ್ದಲಿ ಮಾತ್ರ ವಿನಿಮಯ ಮಾಡಿಕೊಳ್ಳಿ. ಇಂದಿನ ಸಮಾಜದಲ್ಲಿ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಧರ್ಭಗಳು ಅತಿಯಾಗಿ ಆಗುವ ಸಾಧ್ಯತೆ ಇರಬಹುದು. ಹಾಗಾಗಿ ನಿಮ್ಮ ಕಾಲ್ ಮೇಸಜ್ ಗಳ ಬಗ್ಗೆ ನಿಗಾವಿರಲಿ, 

ನಾವೆಲ್ಲರೂ ಮನುಜರು ಒಂದಲ್ಲ ಒಂದು ರೀತಿಯ ತಪ್ಪುಗಳನ್ನು ಮಾಡುತ್ತೇವೆ, ತಪ್ಪುಗಳನ್ನು ಉಲ್ಬಣಗೊಳಿಸುವ ಮನುಜರು ಮತ್ತು ನಿಮ್ಮನ್ನು ತಿಳಿ ಹೇಳುವ ಜನರು ಕೂಡ ಇರುತ್ತಾರೆ, ಹಾಗಾಗಿ ಹೆಚ್ಚಿನ ಸಂಧರ್ಭದಲ್ಲಿ ನಿಮಗಿಂತ ಹೆಚ್ಚು ವಿವೇಕಉಳ್ಳವರೊಂದಿಗೆ ಮಾತ್ರ ಸಂಭಾಷಣೆ ಇರಲಿ. ವಿನಾ ಕಾರಣ ನಿಮ್ಮನ್ನು ಸಮಸ್ಯೆಗೆ ದೂಡಿಹಾಕುವ ಜನರೊಂದಿಗೆ ಅಂತರ ಕಾಯ್ದುಕೊಳ್ಳಿ. ನೀವು ಸತ್ಯವಂತರಾಗಿದ್ದರೆ ಯಾರಿಗೂ ಹೆದರುವ ಅಥವಾ ತಲೆತಗ್ಗಿಸುವ ಸಮಯ ಎದುರಿಸುವುದಿಲ್ಲ. ಮೋಸದಿಂದ ನಿಮ್ಮನ್ನು ಬಲಿಪಶು ಮಾಡಿದವರ ಕರ್ಮಗಳು ಮುಂದಿನ ದಿನದಲ್ಲಿ ಕಾಣಸಿಗುತ್ತದೆ ಇದು ಜಗತ್ತಿನ ನಿಯಮ. ಇಲ್ಲಿ ಯಾರೂ ಶಾಶ್ವತ ಅಲ್ಲ, ಎಲ್ಲವನ್ನೂ ಬಿಟ್ಟು ಒಂದಲ್ಲ ಒಂದು ದಿನ ಬಿಟ್ಟು ಹೋಗಲೇಬೇಕು. ಅನ್ಯಾಯ ದಾರಿಯನ್ನು  ಹಿಡಿದು ಅಲ್ಪ ದಿನ ಓಡಾಡುತ್ತಾರೆ. ಕದ್ದವನು  ಯಾವಾಗಲೂ ಹೆದರಿಕೆಯಿಂದ ಓಡಾಡುತ್ತಾನೆ.

ಎಲ್ಲರಿಗೂ ಶುಭವಾಗಲಿ. 🙏🌹
         ✍️ಮಾಧವ. ಕೆ. ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ