ಗೆಲ್ಲಬೇಕೆಂದಾದರೂ

ಗೆಲ್ಲಬೇಕೆಂಬ ಹಠವಿರಲಿ 
ಯಾವಾಗಲೂ 
ಗೆಲ್ಲುತ್ತಲೇ ಇರುವೆನೆಂಬ 
ಕನಸು ಕಾಣದೆ ಇರಲಿ, 

ಸೋಲುತ್ತಲೇ ಇರುವೆನೆಂಬ 
ಭಯ ದೂರವಿರಲಿ 
ಒಮ್ಮೆಯಾದರೂ ಗೆಲುವೆ 
ಎಂಬ ಕನಸು ಕಾಣುತ್ತಿರಲಿ, 

ಗೆಲ್ಲಬೇಕೆಂದಾದರೂ 
ಸೋಲಬೇಕೆಂದಾದರೂ 
ಭಗವಂತನ ನೆನೆಯದ 
ದಿನವೇ ಇಲ್ಲದಿರಲಿ, 
         ✍️ಮಾಧವ. ಕೆ. ಅಂಜಾರು.






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ