ನನಗೆ ನೀನೇ ಎಲ್ಲವೂ

ನನಗಾಗಿ ಮರುಗುವವರು 
ನಾಳೆ ಇರುತ್ತಾರೋ ಇಲ್ಲವೋ 
ನಡೆಯಲಾಗದೆ ಇದ್ದರೆ 
ತುತ್ತು ತಿನ್ನಲಾಗದಿದ್ದರೆ 
ತನ್ನ ಕೆಲಸ ತಾನೇ ಮಾಡಲಾಗದಿದ್ದರೆ! 

ಎನ್ನ ಹೊಗಳುವವರು 
ಎನ್ನ ದೂಷಿಸುವವರು 
ಸಂತಸದಲಿ ಇದ್ದರೆ ಸಾಕು 
ಅವರಿಗೆ ತಪ್ಪಿಯೂ ಬರದಿರಲಿ ಕಷ್ಟ ನಷ್ಟ 
ನಾಳೆ ನಾನಿರುತ್ತೇನೋ ಇಲ್ಲವೋ

ನಾಳೆಯನು ಬಲ್ಲವ ನೀನು 
ಜೊತೆಯಲಿ ಇರುವವರೆಲ್ಲರು 
ಹಲವು ತಪ್ಪನು ಮಾಡಿರಲೂ ಬಹುದು 
ಮನ್ನಿಸಿ ಮುನ್ನಡೆಸು 
ಜಗದೊಡೆಯ ನನಗೆ ನೀನೇ ಎಲ್ಲವೂ.
            ✍️ಮಾಧವ. ಕೆ. ಅಂಜಾರು 













Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ