ವಕೀಲನಾಗಬೇಡ

ನಿನ್ನ ತಲೆಯನ್ನು ಕಡಿಯುವಷ್ಟು 
ತಲೆ ಬಾಗಬೇಡ
ನಿನ್ನ ಕಲೆಯನ್ನು ಮುಚ್ಚಿಸುವಷ್ಟು 
ಶರಣಾಗಬೇಡ 
ನಿನ್ನ ಗೌರವಕೆ ಕುತ್ತುಬರುವಷ್ಟು 
ಸುಮ್ಮನಾಗಬೇಡ 

ಸಂತೋಷಕ್ಕೆ ಚ್ಯುತಿಯಾಗುವಷ್ಟು 
ಬೇಸರಿಸಬೇಡ 
ಮತ್ತೊಬ್ಬರ ಮನೆ ಹಾಳುಮಾಡುವಷ್ಟು 
ಕ್ರೂರಿಯಾಗಬೇಡ 
ನಿನ್ನನು ನೀನೇ ಹೊಗಳುವಷ್ಟು 
ಮೂರ್ಖನಾಗಬೇಡ 

ಪೌರುಷ ಅಮಾಯಕರ ಮೇಲೆ 
ತೋರಿಸಬೇಡ 
ಜನ ಹಣ ಬಲದ ಕಡೆ 
ವಕೀಲನಾಗಬೇಡ 
ಹೆತ್ತವರ ಜರೆಯುವಷ್ಟು 
ಬೆಳೆದುನಿಲ್ಲಬೇಡ 
     ✍️ಮಾಧವ. ಕೆ. ಅಂಜಾರು.



Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ