(ಲೇಖನ -126) ಚಕ್ರವ್ಯೂಹ

 ನಮಗೆ ನಮ್ಮದೇ ಬದುಕು ಕಲಿಸುವ ಪಾಠ ಅನೇಕ, ದಿನಗಳು ಕಳೆದಂತೆ ಹೊಸ ಹುರುಪು, ಜೀವನದ ಏರಿಳಿತ, ಸುಖ ದುಃಖ ದುಮ್ಮಾನ, ಎಲ್ಲದರ ನಡುವೆ ಒಂದಿಷ್ಟು ಸಂತೋಷ, ಹಲವು ಕನಸು ಇವೆಲ್ಲವೂ ಪ್ರತಿಯೊಬ್ಬರ ಜೀವನದಲ್ಲಿ ಮಿಂಚಿನಂತೆ ಬಂದು ಹೋಗುತ್ತದೆ. ಕೊನೆಗೆ ಎಲ್ಲವೂ ಕ್ಷಣಿಕ ಎಂಬ ಭಾವನೆಗಳ ಪುಟಕ್ಕೆ ಸೇರಿಕೊಳ್ಳುತ್ತದೆ. ಪ್ರಪಂಚವನ್ನು ತಿಳಿಯುವ ಹೊತ್ತಿಗೆ ಜೀವನಚಕ್ರ ಮುಗಿದುಹೋಗುತ್ತದೆ. 

          ಹುಟ್ಟು ಸಾವಿನ ನಡುವೆ ಎದುರಾಗುವ ಅನೇಕ ಸಂಧರ್ಭಗಳು ಕೆಲವರನ್ನು ಬಹಳಷ್ಟು ದೃಢವಾಗಿಸಿದರೆ, ಇನ್ನು ಕೆಲವರನ್ನು ಪ್ರಪಾತಕ್ಕೆ ತಳ್ಳುತ್ತದೆ. ಅದರಲ್ಲೂ ನಿಜ ಜೀವನದಲ್ಲಿ ಚಟವೆಂಬ ಚಕ್ರವ್ಯೂಹಕ್ಕೆ ಸಿಕ್ಕಿ ಬಿದ್ದಲ್ಲಿ ಹೊರಗೆ ಬರಲಾರದೆ ಮನುಷ್ಯ ಸೋತುಬಿಡುತ್ತಾನೆ. 

         ನಾಟಕೀಯವಾಗಿ ಇರುವ ಈ ಜಗತ್ತಿನಲ್ಲಿ, ಪ್ರೀತಿ, ವಾತ್ಸಲ್ಯ, ಭರವಸೆ, ನಂಬಿಕೆ, ಸಹಾಯ, ಇವೆಲ್ಲವೂ ಹುಸಿಯಾಗಿರುತ್ತದೆ. ಹೆಚ್ಚಿನ ಪ್ರಸಂಗಗಳು ತನ್ನ ತಟ್ಟೆಯಲ್ಲಿ ಚಿನ್ನ ಹಾಕಿಕೊಳ್ಳುವುದೇ ಆಗಿರುತ್ತದೆ. ಸ್ವಾರ್ಥ ಬದುಕಿನ ಭರದಲ್ಲಿ ಕತ್ತೆಯನ್ನು ಕುದುರೆಯಾಗಿಸಿ, ನರಿಯನ್ನು ಹುಲಿಯೆಂದು ಬಿಂಬಿಸುವ ಈ ಕಾಲದಲ್ಲಿ ಎಲ್ಲಿ ಎಡವಿ ಬೀಳುತ್ತೇವೆ ಎಂಬುವುದೇ ತಿಳಿಯದು. ಅದಕ್ಕೂ ಮುನ್ನ ಬಲೆ ಬೀಸುವ ಜನರ ಮದ್ಯೆ ಬದುಕಿ ತೋರಿಸುವುದೇ ಬಹಳ ದೊಡ್ಡ ಸಾಧನೆ.

      ಹೆಜ್ಜೆ ಹೆಜ್ಜೆಗೂ ಸಿಗುವ , ಮಾದಕ ದ್ರವ್ಯ, ಸಿಗರೇಟು, ಗಾಂಜಾ, ಸೆಕ್ಸ್ ರ್ಯಾಕೆಟ್, ಕೆಟ್ಟ ರಾಜಕೀಯದ ಚಕ್ರವ್ಯೂಹದೊಳಗೆ ಸಿಕ್ಕಿ ಬಿದ್ದಲ್ಲಿ ಅಂತ್ಯವೆಂಬುವುದು ಕಟ್ಟಿಟ್ಟ ಬುತ್ತಿ. ತಿಳಿದು ಹೋಗುವ ಮಕ್ಕಳು, ತಿಳಿಯದೆ ಹೋಗುವ ಮಕ್ಕಳು ಇಬ್ಬರೂ ತನಗರಿವಿಲ್ಲದೆ ಜೀವನಕ್ಕೆ ಪೂರ್ಣವಿರಾಮವನ್ನು ಹಾಕಿಕೊಳ್ಳುತ್ತಾರೆ. 

      ಅತಿಯಾದರೆ ಅಮೃತವು ವಿಷವೆಂಬ ಮಾತು ಸತ್ಯ, ಮಾತಿನ ಅರಮನೆಎಂಬ ಚಕ್ರವ್ಯೂಹ, ಹೆಣ್ಣಿನ ಮೋಹವೆಂಬ ಚಕ್ರವ್ಯೂಹ, ಎಲ್ಲಾ ದುಷ್ಟ ಚಟಗಳ ಚಕ್ರವ್ಯೂಹಕ್ಕೆ ಒಮ್ಮೆ ಬಲಿಯಾದರೆ ತಪ್ಪಿಸಿಕೊಂಡು ಬರುವ ಜನರು ಅಲ್ಪವೇ.

          ಪ್ರಪಂಚದಲ್ಲಿ ಎಲ್ಲವನ್ನು ಅನುಭವಿಸಬೇಕು ಎಂದು ಹೇಳುತ್ತಾ ದುಮುಕಿದ ಅದೆಷ್ಟೋ ಯುವಕ ಯುವತಿಯರು ಚಟಗಳಿಂದ ಹೊರಗೆ ಬರಲಾರದೆ ಅಂತ್ಯ ಕಾಣುತಿದ್ದಾರೆ.

                 ✍️ಮಾಧವ. ಕೆ. ಅಂಜಾರು 

      

     

         

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.