ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

✍️Madhav. K. Anjar 

( ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ....! ಪೊಲೀಸರೆಂದರೆ  ಭಯದಿಂದ ಓಡುವ ನಮ್ಮ ದೇಶದ ಜನರು ಪೋಲಿಸ್ ವ್ಯವಸ್ಥೆಯಿಂದ  ಸಹಾಯಕ್ಕಿಂತ ಜಾಸ್ತಿ ತೊಂದರೆಯನ್ನು  ಅನುಭವಿಸಿರುವ ಉದಾಹರಣೆಗಳನ್ನು ಹೆಚ್ಚಿನ ಜನರು  ಹೇಳುತ್ತಾರೆ   ಪೊಲೀಸ್ ಠಾಣೆಯಲ್ಲಿ  ಅಥವಾ ಸಂಚಾರಿ ಗಸ್ತು ಪೊಲೀಸರು ಸಾರ್ವಜನಿಕರನ್ನು ವಿನಾಕಾರಣ ಉಪದ್ರವಿಸಿ ಭ್ರಷ್ಟಾಚಾರದಲ್ಲಿ  ತೊಡಗಿಸಿಕೊಂಡಿರುವ  ಉದಾಹರಣೆಗಳು  ಹೆಚ್ಚಾಗಿ ಇದ್ದಿರಬಹುದು. ಹಾಗಾಗಿ  ಅತಿ ಹೆಚ್ಚು ಪ್ರಕರಣಗಳು ಪೊಲೀಸ್ ಠಾಣೆಗೆ  ಹೋಗದೆ   ಮುಚ್ಚಿಹೋಗಿರುತ್ತದೆ. ಅಪಘಾತ, ಬೆದರಿಕೆ, ಕೃತ್ಯಗಳು, ಬಲಾತ್ಕಾರ, ಶೋಷಣೆ, ಜಾತಿನಿಂದನೆಗಳು, ಧರ್ಮ ನಿಂದನೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಭ್ರಷ್ಟಾಚಾರ, ವಂಚನೆ ಪ್ರಕರಣಗಳು   ಪೊಲೀಸ್ ಠಾಣೆಗೆ ಹೋದಾಗ ಸರಿಯಾದ ತನಿಖೆ, ಮತ್ತು ಕಾನೂನಿನ ರೀತಿಯಲ್ಲಿ  ಬೇಕಾಗುವ ಶಿಕ್ಷೆಯನ್ನು ಕೊಡುವ ಬದಲು ಆರೋಪಿಗಳನ್ನು ರಾಜಕೀಯ ಪ್ರಭಾವ ಮತ್ತು ಹಣದಾಸೆಗಾಗಿ  ಹೆಚ್ಚಿನ ಪ್ರಕರಣಗಳನ್ನು  ತಿರುಚಿರುವ  ಉದಾಹರಣೆಗಳು ಹೆಚ್ಚಾಗಿ ಇದ್ದಿರಬಹುದು. ಈಗಲೂ  ಸಮಾಜದಲ್ಲಿ ಅತಿಯಾದ ಜಾತಿ ವ್ಯಾಮೋಹದಿಂದ ಸಮಾಜದಲ್ಲಿ ಬೇದ ಭಾವನೆಗಳು  ಜೀವಂತವಾಗಿವೆ. ಇದರಿಂದ ಅಲ್ಲಲ್ಲಿ ನಡೆಯುವ  ಹಲವಾರು ಪ್ರಕರಣಗಳು  ಪೊಲೀಸ್ ಠಾಣೆ ಹತ್ತಿದರು  ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ದೂರುದಾರರ ಮಾಹಿತಿಯನ್ನು ಪರಿಶೀಲಿಸದೇ ಹೆದರಿಸಿ  ಕಳುಹಿಸುವ ಉದಾರಣೆಗಳು ಕೂಡ  ಇರಬಹುದು. ಇಲ್ಲಿ  ಹೆಚ್ಚಿನ ಪ್ರಕರಣಗಳು  ರಾಜಕೀಯ ವ್ಯಕ್ತಿಗಳ  ಕೈವಾಡದಿಂದ, ಹಣವಂತರ  ಪ್ರಾಬಲ್ಯದಿಂದ  ಪ್ರಕರಣಗಳು ಹಳ್ಳ ಹಿಡಿಯುತ್ತದೆ. ಕೆಲವು ಪೊಲೀಸ್ ಅಧಿಕಾರಿಗಳು  ಕರ್ತಗೆ ಲೋಪವನ್ನು ಮಾಡಿ ಕೆಲವು ಪ್ರಕರಣಗಳನ್ನು  ಹಣಕ್ಕಾಗಿ  ಮಾರುವ ಉದಾಹರಣೆಗಳನ್ನು ಕೂಡ  ನಾವುಗಳು ನೋಡಬಹುದು.



         ಭ್ರಷ್ಟಾಚಾರವೆಂಬುದು  ಎಲ್ಲಾ ದೇಶದಲ್ಲೂ  ಇರುವಂತದ್ದೇ  ಆದರೆ ಅತಿ ಹೆಚ್ಚಿನ ಭ್ರಷ್ಟಾಚಾರ  ದೇಶದ ಜನರನ್ನು ನಲುಗಿಸಿಬಿಡುತ್ತದೆ, ಅದರಲ್ಲೂ ಪ್ರಮುಖ ವ್ಯವಸ್ಥೆಗಳು  ಬ್ರಷ್ಟಾಚಾರದಲ್ಲಿ  ತೊಡಗಿಸಿ ಕೊಂಡಾಗ  ದೇಶವಾಸಿಗಳು  ಭಯದ ವಾತಾವರಣದಿಂದ  ಮತ್ತು ವ್ಯಾಪಾರಸ್ಥರು  ತನ್ನ ವ್ಯಾಪಾರಸ್ಥಳವನ್ನು  ತೊಂದರೆಗಳಿಲ್ಲದ ಜಾಗಕ್ಕೆ ಬದಲಾಯಿಸಲು ಪ್ರಯತ್ನಿಸುತ್ತಾರೆ. ಇದರಿಂದ ನಮ್ಮ ದೇಶದ ಆರ್ಥಿಕ ಅಸಮತೋಲನ ಮತ್ತು ಶೋಷಣೆಗಳು  ನೂರಾರು ವರ್ಷಗಳ ವರೆಗೆ  ಮುಂದುವರೆಯುತ್ತದೆ. ಸಾಮಾನ್ಯವಾಗಿ  ಕೆಲವು ಮುಂದುವರಿದ ದೇಶಗಳಲ್ಲಿ  ಪೋಲಿಸ್ ವ್ಯವಸ್ಥೆ  ತುಂಬಾ ಅಚ್ಚುಕಟ್ಟಾಗಿ  ಮತ್ತು ಪ್ರಾಮಾಣಿಕವಾಗಿ ಹಾಗೆಯೇ ಶಿಸ್ತು ಬದ್ಧವಾಗಿ  ಕಾರ್ಯನಿರ್ವಹಿಸುತ್ತದೆ, ಅದು ಹೇಗೆ ಎಂದರೆ, ರಸ್ತೆಗಳಲ್ಲಿ ಓಡಾಡುವ  ವಾಹನಗಳು  ಅಕಸ್ಮಾತಾಗಿ  ಕೆಟ್ಟು ಹೋದಾಗ  ಮೊದಲು ಮಾಡುವ ಕೆಲಸವೆಂದರೆ  ಫೋನಿನ ಮೂಲಕ ಪೊಲೀಸರನ್ನು ಕರೆದಾಗ  ನಿರ್ದಿಷ್ಟ ಸಮಯದಲ್ಲಿ  ಪೊಲೀಸರು  ವಾಹನ ಕೆಟ್ಟು ನಿಂತ ಸ್ಥಳಕ್ಕೆ ಆಗಮಿಸಿ  ಪರಿಶೀಲಿಸಿ  ಕೆಟ್ಟಂತ ವಾಹನಕ್ಕೆ  ಬೆಂಗಾವಲಾಗಿ  ನಿಲ್ಲುತ್ತಾರೆ. ಒಂದು ವೇಳೆ  ವಾಹನದ ಚಕ್ರ  ಬದಲಾಯಿಸುವ ಸಂದರ್ಭಗಳು ಬಂದಾಗ ಸ್ವತಹ  ಪೊಲೀಸರೇ  ರಿಪೇರಿ ಮಾಡಲು ಸಹಾಯ ಮಾಡಿರುವ  ಉದಾಹರಣೆಗಳು  ತುಂಬಾನೇ ಇದೆ. ಹಾಗೆಯೇ ರಸ್ತೆ ಮಧ್ಯದಲ್ಲಿ  ಕೆಟ್ಟು ನಿಂತಂತಹ ವಾಹನಗಳನ್ನು ರಸ್ತೆ ಬದಿಗೆ  ಸರಿಸಿ ಇನ್ನುಳಿದ ವಾಹನಗಳಿಗೆ  ಸಾಕಷ್ಟು ಬೇಗ  ಓಡಾಡಲು ಅನುವು ಮಾಡುತ್ತಾರೆ. ಒಂದು ವೇಳೆ  ಇಂಧನವಿಲ್ಲದೆ  ವಾಹನವು  ರಸ್ತೆ ಮಧ್ಯದಲ್ಲಿ ನಿಂತರೆ  ಇಂಧನ ದೊಂದಿಗೆ  ದಂಡವನ್ನು  ಹಾಕುತ್ತಾರೆ.

            ಚಿಕ್ಕ ಪುಟ್ಟ  ಅವಘಡಗಳು ಆದಾಗ  ಹೆಚ್ಚಿನ ಜನರು  ಪೊಲೀಸರನ್ನು ಕರೆಯದೆ  ತನ್ನ ವಿಳಾಸವನ್ನು  ವಿನಿಮಯ ಮಾಡಿಕೊಂಡು  ತನ್ನ ವಾಹನಕ್ಕೆ ಆದ  ತೊಂದರೆಯನ್ನು ಸರಿಪಡಿಸಿಕೊಳ್ಳುವ  ಉದಾಹರಣೆಗಳು  ಕೂಡ  ಇವೆ. ಕೆಲವು ಅನಾಮಿಕ  ವಾಹನಗಳು ಡಿಕ್ಕಿ ಹೊಡೆದು  ಹೋದಾಗ ಅದರ ಬಗ್ಗೆ ಪೋಲಿಸ್ ಠಾಣೆಯಲ್ಲಿ  ಮಾಹಿತಿಯನ್ನು ಕೊಟ್ಟಾಗ ಅಲ್ಲಿ  ಬೇಕಾಗುವ ಕಾಗದ ಪತ್ರವನ್ನು ಪಡೆದು  ತನ್ನ ವಾಹನವನ್ನು  ಸರಿಪಡಿಸಿಕೊಳ್ಳುವ  ವ್ಯವಸ್ಥೆ ಕೂಡ ಇದೆ. ಪರವಾನಿಗೆ ಇಲ್ಲದೇ ಓಡಿಸುವ  ಚಾಲಕರನ್ನು ಹಿಡಿದಾಗ ದೊಡ್ಡ ಮೊತ್ತದ ದಂಡ  ಅದರೊಂದಿಗೆ ಶಿಕ್ಷೆಯನ್ನು ಕೊಡುವ  ಸಂಗತಿಗಳು ಕೂಡ  ನಡೆಯುತ್ತವೆ. ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರುವ  ಚಾಲಕರ ಪರವಾನಿಗೆಯನ್ನು  ರದ್ದುಗೊಳಿಸುತ್ತಾರೆ. ವಿನಾಕಾರಣ ಶಬ್ದ ಮಾಲಿನ್ಯ  ಅತಿಯಾದ ವೇಗ ವನ್ನು ತಡೆಯಲು ಹೆಚ್ಚಿನ ಮುಖ್ಯರಸ್ತೆಗಳಲ್ಲಿ  ಕ್ಯಾಮರಾ  ಅಳವಡಿಸಿರುವ ಕಾರಣಕ್ಕಾಗಿ ವಾಹನ ಚಾಲಕರು  ಹೆಚ್ಚಿನ ಜಾಗೃತಿಯನ್ನು  ಮಾಡುತ್ತಾರೆ. ವಿದೇಶಿಗರಾಗಲಿ, ಸ್ವದೇಶಿಗಳೇ ಆಗಲಿ  ಒಂದು ವೇಳೆ  ತಪ್ಪನ್ನು ಮಾಡಿದ್ದರೆ  ಅಪಘಾತದ  ಬಗ್ಗೆ ಸಂಪೂರ್ಣ ಮಾಹಿತಿಯನ್ನು  ಪಡೆದುಕೊಂಡು ಸರಿಯಾದ  ನಿರ್ಧಾರಕ್ಕೆ ಬಂದು ತಪ್ಪಿತಸ್ಥರನ್ನು  ಭಾರಿ ಮೊತ್ತದ ದಂಡದಿಂದ   ಮತ್ತು ಶಿಕ್ಷೆಗೆ  ಒಳ  ಪಡಿಸುತ್ತಾರೆ. ಒಂದು ವೇಳೆ  ವಾಹನವನ್ನು ತಪಾಸಣೆಗೆ ಒಳಪಡಿಸುವ ಸಂದರ್ಭದಲ್ಲಿ  ಸ್ವತಹ ಪೊಲೀಸರೇ  ವಾಹನದ ಹತ್ತಿರ ಬಂದು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ  ಬಿಡುತ್ತಾರೆ. ಘನವಾಹನಗಳು  ಎಲ್ಲಾ ಸಮಯದಲ್ಲಿ  ರಸ್ತೆಯಲ್ಲಿ ಓಡಾಡುವಂತಿಲ್ಲ  ಶಾಲಾ ಸಮಯ ಮತ್ತು  ಆಫೀಸ್ಸು ಸಮಯಗಳನ್ನು ಹೊರತುಪಡಿಸಿ  ಮತ್ತು  ನಿಯಮಗಳಂತೆ  ಸರಿಯಾಗಿ ಲೋಡ್ ಮಾಡದೆ ಇರುವ  ವಾಹನಗಳನ್ನು  ಸೀಜ್ ಮಾಡುವ ಕೆಲಸವನ್ನು  ಮಾಡುತ್ತಾರೆ.

       ಒಟ್ಟಾರೆ ಸಂಚಾರ ನಿಯಮಗಳನ್ನು, ಮತ್ತು ವಾಹನದ ದಾಖಲೆಗಳು ಸರಿಯಾಗಿದ್ದಲ್ಲಿ  ಯಾವುದೇ ತೊಂದರೆಗಳಿಲ್ಲದೆ  ನಿರ್ಭಯದಿಂದ  ತನ್ನ ವಾಹನವನ್ನು  ಚಲಾಯಿಸಬಹುದು.  ಸಾರ್ವಜನಿಕರಿಗೆ ವಿನಾಕಾರಣ  ತೊಂದರೆ ಕೊಡುವ  ಉದಾಹರಣೆಗಳು  ಅತೀ ವಿರಳ  ಎಂದು ಹೇಳಬಹುದು. ಹಾಗೆಯೇ ಅತಿ ವೇಗದ  ವಾಹನಗಳನ್ನು  ಪೊಲೀಸರು  ಸ್ವತಃ  ಚೇಸ್ ಮಾಡಿ  ಗುಜರಿ ಮಾಡಿರುವ  ಘಟನೆಗಳು ಕೂಡ  ನಡೆಯುತ್ತದೆ. ಸಂಸಾರದೊಂದಿಗೆ  ಅಥವಾ ಮಕ್ಕಳೊಂದಿಗೆ ಓಡಾಡುವ  ವಾಹನಗಳನ್ನು  ಉಪದ್ರವಿಸದೆ  ಹೋಗಲು ಬಿಡುವ  ಸಂದರ್ಭಗಳು ಕೂಡ ಇದೆ.  ಪೊಲೀಸರಿಗೆ  ಹಣಕೊಡಲು  ಪ್ರಯತ್ನಿಸಿ  ವಾಹನ ಚಾಲಕರು  ಶಿಕ್ಷೆಯನ್ನು ಅನುಭವಿಸಿದ  ಉದಾಹರಣೆಗಳು ಕೂಡ ಇವೆ. ಅದರ ಅರ್ಥ  ಪೊಲೀಸರಿಗೆ  ಲಂಚವನ್ನು, ಆಮಿಷಒಡ್ದುವುದು ದೊಡ್ಡ ಅಪರಾಧ ಆಗಿರುತ್ತದೆ.

       ತನ್ನ ವಾಹನವನ್ನು ಚಲಾಯಿಸುವಾಗ  ಎಲ್ಲಾ ಸಾರ್ವಜನಿಕರು  ಸಂಚಾರಿ ಸುರಕ್ಷತೆಯನ್ನು  ಕಾಪಾಡಿಕೊಂಡು  ನಡೆಯುವ ದೊಡ್ಡ ದೊಡ್ಡ ಅಪಘಾತಗಳನ್ನು  ತಡೆಯುವಲ್ಲಿ  ತಮ್ಮದೇ ಕೊಡುಗೆಯನ್ನು  ಮತ್ತು ಜವಾಬ್ದಾರಿಯನ್ನು  ಹೊತ್ತುಕೊಳ್ಳಬೇಕು, ಅತಿ ವೇಗದ ಚಾಲನೆ, ಅಜಾಗ್ರತೆ  ಚಾಲನೆ, ಪೈಪೋಟಿ  ಮಾಡುವ, ರೋಡ್ ಸ್ಟ್ಯಾಂಟುಗಳ  ಚಾಲನೆಗಳು ಕಂಡಲ್ಲಿ  ಪೊಲೀಸ್ ಸಂಖ್ಯೆಗೆ  ದಾಖಲೆಗಳ ಮೂಲಕ  ಅಥವಾ ನಂಬರ್ ಪ್ಲೇಟ್ ಗಳನ್ನು  ಗುರುತಿಸಿ ಸಮಯ ಮತ್ತು ಸ್ಥಳದ ಮಾಹಿತಿಯನ್ನು ಪೊಲೀಸರಿಗೆ  ತಲುಪಿಸುವಲ್ಲಿ  ಸಾರ್ವಜನಿಕರು  ಪ್ರಯತ್ನಪಟ್ಟಾಗ  ಅಲ್ಪವಾದರೂ  ದುರ್ಘಟನೆಗಳು  ಕಡಿಮೆಯಾಗಬಹುದು. ಕೊನೆಯ ಪಕ್ಷ ಕೆಲವು ದಕ್ಷ ಅಧಿಕಾರಿಗಳು  ದೇಶಕ್ಕಾಗಿ ನಿಸ್ವಾರ್ಥ  ಸೇವೆಯನ್ನು ಮಾಡಿ  ಸರ್ಕಾರ ಕೊಡುವ  ಸಂಬಳದಿಂದ  ಗೌರವಯುತವಾಗಿ  ಮತ್ತು ನೆಮ್ಮದಿಯಾಗಿ  ಜನಸೇವೆಯನ್ನು ಮಾಡುವ  ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬಹುದು.

       ✍️ಮಾಧವ. ಕೆ. ಅಂಜಾರು






   









 

             

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.