ಈಶ್ವರ ಮಲ್ಪೆ

ಇದ್ದರೆ ಇರಬೇಕು 
ಈಶ್ವರ ಮಲ್ಪೆಯಂತೆ 
ತನ್ನೆಲ್ಲಾ ನೋವನು ಬದಿಗಿಟ್ಟು 
ಸಮಾಜದ ನೋವಿಗೆ ಕಿವಿಗೊಟ್ಟು 
ನೊಂದವರ ಬಾಳಿಗೆ 
ಸ್ಪಂದಿಸುವ ಜೀವ 
ಇದ್ದರೆ ಇರಬೇಕು ಈಶ್ವರ ಮಲ್ಪೆಯಂತೆ 

ಹಿತವಾದ ಮಾತು 
ಮಿತವಾದ ಮಾತು 
ಎಲ್ಲರೂ ನನ್ನವರೇ
ಎಲ್ಲರಿಗೂ ಪ್ರೀತಿಯನು ಕೊಡಬಹುದು 
ವಿಶಾಲವಾದ ಮನಸು 
ನನಗಾಗಿ ಇನಿತು ಇದ್ದರೆ 
ಸಾಕೆನ್ನುವವರಿವರು 
ಇದ್ದರೆ ಇರಬೇಕು ಈಶ್ವರ ಮಲ್ಪೆಯಂತೆ 

ಜನಸೇವೆಯಲಿ ದೇವರನು 
ಕಂಡವರು 
ಜನಸೇವೆಯಲಿ ನೋವನುಂಡವರು 
ದಿನಬಿಡದೆ ನಮಗಾಗಿ 
ದಿನಬಿಡದೆ ನಿಮಗಾಗಿ 
ಹಲವು ಜೀವ ಉಳಿಸಿರುವವರೇ 
ಕಲಿಯುಗದ ಈಶ್ವರನಾಗಿ 
ಇದ್ದರೆ ಇರಬೇಕು ಈಶ್ವರ ಮಲ್ಪೆಯಂತೆ
        ✍️ಮಾಧವ. ಕೆ ಅಂಜಾರು.

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ