ಬಯಸಿರುವುದೆಲ್ಲವೂ ಸಿಕ್ಕಿದರೆ

ಬಯಸಿರುವುದೆಲ್ಲವೂ ಸಿಕ್ಕಿದರೆ 
ಪ್ರಯತ್ನಕ್ಕೆ ಮೌಲ್ಯವಿಲ್ಲ 
ಕಳೆದುಕೊಂಡೆನೆಂಬ ಚಿಂತೆ 
ಕಾಡುತಿದ್ದಲ್ಲಿ 
ಹೊಸ ಕನಸಿಗೆ ಜಾಗವಿಲ್ಲ 

ಬಯಕೆ ಈಡೇರಲು 
ಹೊಸ ಕನಸು ನನಸಾಗಲು 
ಅವಿರತ ಶ್ರಮ ಪಡದೇ 
ಸುಮ್ಮನಿರಲು ಸಾಧ್ಯವಿಲ್ಲ 
ಜೀವನ ನೀನಂದುಕೊಂಡಂತೆ 
ನಡೆಯುವುದೇ ಇಲ್ಲ 

ಕನಸು ಕಾಣುತ್ತಿರು 
ಸಂಧರ್ಭಗಳನ್ನೂ ಸ್ವೀಕರಿಸುತ್ತಿರು 
ದಿನಕಳೆದಂತೆ ನೀ ಹೇಳುವೆ 
ಕಳೆದ ಸಮಯವೆಲ್ಲವೂ 
ದೇವರು ನೀಡಿದ ಭಾಗ್ಯ ಗುರು 
     ✍️ಮಾಧವ. ಕೆ. ಅಂಜಾರು 
      



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ