(ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ

 (ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ, 

ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕುವೈತ್ ಕನ್ನಡಕೂಟದ ಎಲ್ಲಾ ಸದಸ್ಯರು ಕನ್ನಡ ಭಾಷೆಗೆ ಕೊಡುತ್ತಿರುವ ಗೌರವ,ಪ್ರೀತಿಯಂತೂ ನಿತ್ಯ ಸತ್ಯ. ಹಲವಾರು ವರುಷಗಳಿಂದ ಕನ್ನಡಾಂಬೆಯ ಸೇವೆಯನ್ನು ಮಾಡುತ್ತಿರುವ ಕನ್ನಡಿಗರ ಕೂಟ,  ಕುವೈಟ್ ಕನ್ನಡ ಕೂಟ ವಿವಿಧ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಲೇ ಬರುತ್ತಿದೆ. ಈ ಸುಂದರವಾದ ಕೂಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡುತ್ತ ಹೆಸರುವಾಸಿಯಾಗುತ್ತಿದೆ. ನಾನು ಕಂಡಂತೆ ಕುವೈಟ್ ಕನ್ನಡ ಕೂಟ ಹೇಗೆ ಕೆಲಸ ಮಾಡುತ್ತಿದೆ? ಅದರ ಶಿಸ್ತು ನಿಯಮಗಳೇನು? ಯಾವ ಮನೋಭಾವದ ಸದಸ್ಯರು ಮತ್ತು ಆಡಳಿತ ಮಂಡಳಿ ಇದೆ? ಸಮಾಜಕ್ಕೇನು ಕೊಡುತ್ತಿದೆ, ಕನ್ನಡದ ಪೋಷಣೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನು ಹೇಗೆ ಉಳಿಸಿ ಬೆಳೆಸುತ್ತಿದ್ದಾರೆ? ಆಟೋಟ ಮತ್ತು ವಿವಿಧ ಕಾರ್ಯಕ್ರಮ ಹೇಗೆಲ್ಲ ನಡೆಸುತ್ತಾರೆ? ಸಾಹಿತ್ಯ ಮತ್ತು ಸಂಗೀತ, ಕನ್ನಡ ಬರವಣಿಗೆ ಬಗ್ಗೆ ಎಷ್ಟು ಕಾಳಜಿಯಿಂದ ಕೆಲಸಮಾಡುತ್ತಾರೆ? ಎಂಬುವುದನ್ನು ಹಲವಾರು ವರುಷದಿಂದ ಕಣ್ಣಾರೆ ನೋಡುತ್ತಾ ಅದರೊಂದಿಗೆ ಸೇರಿ ಸಂತೋಷದ ಕಾರ್ಯಕ್ರಮಗಳನ್ನು ಅನುಭವಿಸಿಕೊಂಡು ಬರುತ್ತಿದ್ದೇನೆ. 



           ಹೌದು, ಒಂದು ಸಂಘಟನೆ ನಡೆಸುವುದು ಸುಲಭವಾದ ಕೆಲಸವಲ್ಲ ಮತ್ತು ಸಂಘಟನೆಯನ್ನು ಉಳಿಸಿ ಬೆಳೆಸುವುದು ಕೂಡ ಅಷ್ಟೇ ಜವಾಬ್ದಾರಿಯಿಂದ ಕೂಡಿರುತ್ತದೆ. ಆಡಳಿತ ಮಂಡಳಿ ಮತ್ತು ಸದಸ್ಯರ ಒಪ್ಪಿಗೆಯ ಮೇರೆಗೆ ಇಷ್ಟಪಡುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹೇಗೆ ಮಾಡುತ್ತಾರೆ? ಇವೆಲ್ಲವನ್ನೂ ಅರ್ಥ ಮಾಡಿಕೊಂಡು ಪ್ರತೀ ಕಾರ್ಯಕ್ರಮ ಹೇಗೆ ಯಶಶ್ವಿಗೊಳಿಸುತ್ತಾರೆ? ಎಂಬ ಕುತೂಹಲ ಎಲ್ಲರಿಗೂ ಮೂಡುವಂತದ್ದು. ಪ್ರತೀ ವರುಷ ನಡೆಯುವ ಕಾರ್ಯಕ್ರಮದ ಪಟ್ಟಿಯನ್ನು ಮುಂಚಿತವಾಗಿ ತಯಾರಿಯಲ್ಲಿಟ್ಟು, ಅದಕ್ಕೆ ಬೇಕಾಗುವ ಪ್ರತೀ ಜವಾಬ್ದಾರಿಯುತ ಸದಸ್ಯರನ್ನು ನೇಮಕ ಮಾಡಿ, ಕಾರ್ಯಕ್ರಮ ಸಮೀಪಿಸುವಾಗ ತಮ್ಮ ಬಿಡುವಿನ ಸಮಯದಲ್ಲಿ ಮತ್ತು ಕಛೇರಿಯ ಕೆಲಸದ ನಡುವೆಯೂ ಕನ್ನಡಿಗರು ಕನ್ನಡದ ಸೊಗಡನ್ನು ಹೆಚ್ಚಿಸುತ್ತ ಇರುತ್ತಾರೆ. 

        ಉತ್ತಮವಾದ ಚಿಂತನೆಯುಳ್ಳ ಜನರ ಸಂಘಟನೆಯಾಗಿದ್ದು ಯಾವುದೇ ಅಡ್ಡಿ ಅಡಚಣೆಗಳಿಲ್ಲದೆ ನಡೆಯುವಂತೆ ನೋಡಿಕೊಳ್ಳುತ್ತಾ, ಪ್ರತಿಯೊಬ್ಬ ಸದಸ್ಯರಿಗೆ ಮತ್ತು ಅವರ ಮಕ್ಕಳಿಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡುತ್ತಾ ಬರುತ್ತಿದೆ. ಇಲ್ಲಿ ಗಮನಿಸಬೇಕಾದ ವಿಷಯಗಳೆಂದರೆ, ಎಲ್ಲಾ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಮತ್ತು ವಿವಿಧ ಮಾತ್ರ ಭಾಷೆಯನ್ನು ಉಪಯೋಗಿಸುತಿದ್ದರೂ ಚಿಕ್ಕ ಮಕ್ಕಳಿಗೆ ಶುದ್ಧ ಕನ್ನಡದ ಅಭಿರುಚಿಯನ್ನು ನೀಡುತ್ತಾ ಸಂಪೂರ್ಣವಾಗಿ ಕನ್ನಡದಲ್ಲೇ ಕಾರ್ಯಕ್ರಮವನ್ನು ನೀಡಲು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಪ್ರತೀ ವರುಷ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ, ಮತ್ತು ದಾಸೋತ್ಸವ (ಕನ್ನಡ ಭಜನೆಗಳು ) ಮರಳ ಮಲ್ಲಿಗೆ, ಸಾಹಿತ್ಯ, ಸಂಗೀತಕ್ಕೆ ಸಂಬಂದಿಸಿದ ಅನೇಕ ಕಾರ್ಯಕ್ರಮ ನವ ನವೀನ ರೀತಿಯಲ್ಲಿ ನಡೆಯುತ್ತಿದೆ. 

        ಅತೀ ಹೆಚ್ಚು ಸಂತೋಷವೆಂದರೆ, ಕನ್ನಡದ ನದಿಗಳಾದ ಕಾವೇರಿ, ನೇತ್ರಾವತಿ, ಹೇಮಾವತಿ, ಎಂಬ ಹೆಸರುಗಳನ್ನ ಉಪಯೋಗಿಸಿ ಒಂದೊಂದು ತಂಡಗಳನ್ನು ಮಾಡಿ ನಡೆಸುವ ಕಾರ್ಯಕ್ರಮ ಸೇರಿದ ಎಲ್ಲರಲ್ಲೂ ಹೊಸ ಶಕ್ತಿಯನ್ನು ತುಂಬಿಸುತ್ತಲೇ ಇರುತ್ತದೆ, ನಮ್ಮ ತಂಡ ಗೆಲ್ಲಬೇಕು, ನಮ್ಮ ತಂಡದ ಎಲ್ಲರೂ ಪಾಲ್ಗೊಳ್ಳಬೇಕು, ನಮ್ಮ ತಂಡ ಹೆಚ್ಚಿನ ಅಂಕ ಪಡೆದುಕೊಳ್ಳಬೇಕೆಂಬ ಹಠದೊಂದಿಗೆ ಮುನ್ನುಗ್ಗುವ ಮತ್ತು ಜಯಗಳಿಸುವ ತಂಡ ಬಹಳಷ್ಟು ಸಂತೋಷದಿಂದ ಕುಣಿದು ಕುಪ್ಪಳಿಸುವ ಸಂಧರ್ಭಗಳನ್ನು ನಮ್ಮ ಮನಗಳಲ್ಲಿ ಅಚ್ಚಳಿಯದಂತೆ ಉಳಿಸುತ್ತದೆ. ಕನ್ನಡ ರಾಜ್ಯೋತ್ಸವದಂತಹ ದೊಡ್ಡ ಕಾರ್ಯಕ್ರಮ , ಅದ್ದೂರಿಯಾಗಿ ನಡೆಯುತ್ತದೆ. 

          ಸಾಂಸ್ಕೃತಿಕ ಕಾರ್ಯಕ್ರಮದ ರೂವಾರಿಗಳು, ಕೂಟದ ಬೆನ್ನೆಲುಬು, ರಂಗು ರಂಗಿನ ಬಣ್ಣ, ವೇಷ ಭೂಷಣ ಗಳನ್ನು ಹಾಕುತ್ತ, ನಿರ್ದೇಶಕರ ಕನಸನ್ನು ನನಸು ಮಾಡುವ ಪ್ರತಿಯೊಬ್ಬರೂ ಕನ್ನಡದ ಮೆರುಗನ್ನು ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ರುಚಿಕರವಾದ ಆಹಾರ, ಸುಂದರವಾದ ಉಡುಗೆ ತೊಡುಗೆಯೊಂದಿಗೆ ಕನ್ನಡದ ಹಬ್ಬವನ್ನು ಮಾಡುತ್ತಿರುವ ಕುವೈಟ್ ಕನ್ನಡಕೂಟ. 

          ಸಂಘವನ್ನು ನಡೆಸಲು ಕಾಂಚಾಣದ ಅಗತ್ಯ ತುಂಬಾನೇ ಇರುತ್ತದೆ, ಎಲ್ಲಾ ಸದಸ್ಯರು ಮತ್ತು ಪ್ರಾಯೋಜಕರು ನೀಡುತ್ತಿರುವ ಹಣವನ್ನು ಸಮಾಜಮುಖಿ ಕೆಲಸಕ್ಕೆ ಉಪಯೋಗಿಸಿ, ಕರ್ನಾಟಕದ ಅನೇಕ ಕಡೆಗಳಲ್ಲಿ ಸಮಾಜಸೇವೆ ಮಾಡಿರುವ ಕೀರ್ತಿ ಕನ್ನಡ ಕೂಟಕ್ಕಿದೆ, ಇದಕ್ಕಾಗಿ ಶ್ರಮಿಸಿದ ಮಾಜಿ ಸದಸ್ಯರು ಮತ್ತು ಪ್ರಸ್ತುತ ಆಡಳಿತ ಮಂಡಳಿ ಮತ್ತು ಸದಸ್ಯರಿಗೆ ನನ್ನ ಧನ್ಯವಾದಗಳು.

          ಕನ್ನಡಕೂಟದ, ನಡೆಯಲ್ಲಿ ಗುಣಮಟ್ಟವಿದೆ, ಮಾತಿನಲ್ಲಿ ಹಿತವಿದೆ, ಕೂಟದಲ್ಲಿ ಗೌರವ, ನಗುವಿದೆ, ಹೆಚ್ಚಾಗಿ ಜೊತೆಯಾಗಿ ನಡೆಯುವ ಕ್ರಮವಿದೆ. ಕೂಟದ ಸುಂದರವಾದ ರಥವನ್ನು ಎಳೆಯುವ ಜನರ ಗುಂಪುಗಳಿವೆ. 

       ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಸಿರಿಗನ್ನಡಂ ಗೆಲ್ಗೆ, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಎಂದು ಬರೇ ಮಾತಿನಲ್ಲಿ ಹೇಳದೆ, ನಮ್ಮ ನಾಡು ಕನ್ನಡ ನಾಡು ಅದಕ್ಕಾಗಿ ನಾವೆಲ್ಲರೂ ಸೇರಿ ಕನ್ನಡವನ್ನು ಪೋಷಿಸೋಣ ಎಂಬ ದ್ಯೇಯದೊಂದಿಗೆ ಕನ್ನಡ ಕೂಟ ಕಾರ್ಯನಿರ್ವಹಿಸುತ್ತಿದೆ.ಕುವೈಟ್ನಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡಕೂಟವನ್ನು ಸೇರಿ ಕನ್ನಡಾಂಬೆಯ ಸೇವೆಯನ್ನು ಮಾಡುವ ಅವಕಾಶವನ್ನು ಪಡೆದುಕೊಳ್ಳಿ, ಕನ್ನಡದ ಸೇವೆಗಯ್ಯುವ ಎಲ್ಲರಿಗೂ ಶುಭವಾಗಲಿ.

                ✍🏿ಮಾಧವ. ಕೆ. ಅಂಜಾರು 


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ