ನಿನಗಿನ್ನೂ ತಿಳಿದಿಲ್ಲ

ನಿನಗಿನ್ನೂ ತಿಳಿದಿಲ್ಲ 
ನಾನಿನ್ನ ಪ್ರೀತಿಸುವ ರೀತಿ 
ನಿನಗಿನ್ನೂ ತಿಳಿದಿಲ್ಲ 
ನಾ ನಿನಗಾಗಿ ಹಂಬಲಿಸುವ ರೀತಿ 
ತಿಳಿಯುತ್ತಿಲ್ಲ ಎನಗೆ 
ಹಗಲು ರಾತ್ರಿ 
ನಿನ್ನ ನೆನಪಲ್ಲೇ ಸಾಗುತಿರುವೆ 
ದಿನ ದಿನವೂ ನಿನ್ನದೇ ನೆನಪು,

ಬರುವೆಯಾ ಜೊತೆಯಾಗಿ 
ನನ್ನ ಪ್ರೀತಿಯ ರಾಣಿಯಾಗಿ 
ಕಾಯುತಿರುವೆ ನಿನಗಾಗಿ 
ಬಿಗಿದಪ್ಪಿ ಮುದ್ದಿನ ಸುರಿಮಳೆಗಾಗಿ 
ಓ ನನ್ನ ನಲ್ಲೆ, ನಾನಿರುವೆ ನಿನಗಾಗಿ 
ನಿನ್ನ ಪ್ರೀತಿಯ ಕಿವಿ ಮಾತಿಗಾಗಿ
       ✍🏿ಮಾಧವ. ಕೆ. ಅಂಜಾರು 

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ

( ಲೇಖನ -122) ಭೂ - ಕೈಲಾಸ