ನಿನ್ನ ಜೊತೆ ನಾನಿರುವೆ.
ಕಲ್ಲು ಮುಳ್ಳಿನ ದಾರಿಯೋಳು
ಹೆಜ್ಜೆಯನು ಹಾಕುತಿರುವೆ
ಹೊಸ ಕನಸಿನೊಳಗೆ
ನನ್ನ ನಾನು ಮರೆತಿರುವೆ,
ಭರವಸೆಯ ಬದುಕನ್ನು
ರೂಡಿಸಿಯೇ ನಡೆದಿರುವೆ
ಏನೇ ಬರಲಿ ಏನೇ ಇರಲಿ
ಜವಾಬ್ದಾರಿಯನು ಹೊತ್ತಿರುವೆ
ನನಗಾಗಿ ನಾ ನಡೆಯುತ್ತಿಲ್ಲ
ಹೊಲ ಹಸುಗಳ ಮರೆತಿಲ್ಲ
ಮುಂದುವರಿಯಲಿ ಪಯಣ
ಕಾರ್ಮೋಡಗಳ ಭಯವಿಲ್ಲ
ಮುನ್ನುಗ್ಗುವೆ ಎಂದಿಗೂ
ನಾನಿನ್ನೂ ಶಕ್ತನು
ಉಸಿರು ನಿಂತು ಹೋದರೂ
ಮತ್ತೆ ಮರಳಿ ನಾ ಬರುವೆ
ನಡೆ ನಡೆ ಮುನ್ನಡೆ
ಕನಸು ಹೊತ್ತು ಮುನ್ನಡೆ
ಯಾಕೆ ನಿನಗೆ ಭಯ ಹೇಳು
ಓ ನನ್ನ ಮಗುವೇ
ನಿನ್ನ ಜೊತೆ ನಾನಿರುವೆ.
✍️ಮಾಧವ. ಕೆ. ಅಂಜಾರು
Comments
Post a Comment