ಲೇಖನ 119 ) ಒಬ್ಬ ಓದುಗನ ಒಂದು ಸ್ಪೂರ್ತಿದಾಯಕ ಮಾತು ಲೇಖನವನ್ನು ಮುಂದುವರಿಸಲು ಕಾರಣವಾಯಿತು,

( ಲೇಖನ 119 ) ಒಬ್ಬ ಓದುಗನ   ಒಂದು ಸ್ಪೂರ್ತಿದಾಯಕ ಮಾತು ಲೇಖನವನ್ನು  ಮುಂದುವರಿಸಲು ಕಾರಣವಾಯಿತು, ಅದೇನೋ  ಹಲವು ಕಾರಣಗಳಿಂದ ಬರವಣಿಗೆಗೆ  ವಿರಾಮವನ್ನು ನೀಡಿದ್ದ ನಾನು, ಪುನಹ  ಪದಗುಂಚಗಳ ಜೋಡಣೆಯನ್ನು ಆರಂಭಿಸಿದ್ದೇನೆ. ಮರಳುಗಾಡಿನೊಳಗಿನ ಓಯಸಿಸ್ ನಂತೆ ಒಬ್ಬ ಲೇಖಕನಿಗೆ  ಅಥವಾ ಕವಿಗೆ ಓದುಗರು  ಅದೆಷ್ಟು ಬಲವನ್ನು ನೀಡುತ್ತಾರೆ ಅನ್ನುವುದು ತಿಳಿಯಿತು. ಅದೇನು ಇತ್ತೀಚೆಗೆ  ನಿಮ್ಮ ಬರವಣಿಗೆಗಳು  ನಮ್ಮ ಗ್ರೂಪ್ನಲ್ಲಿ  ಬರುತ್ತಿಲ್ಲವಲ್ಲ  ಏನಾದರೂ ಗೀಚುತ್ತಾ ಇರಿ ನಿರಾಶರಾಗಬೇಡಿ ಮುಂದುವರಿಯಿರಿ ಎಂದು ಹೇಳಿದ ಮಾತ್ರಕ್ಕೆ  ನನ್ನ ಮನದೊಳಗೆ  ಇನ್ನಷ್ಟು  ಹಲವು  ಪ್ರೇರಣಾ ಶಕ್ತಿಯ ವ್ಯಕ್ತಿಗಳು.



           ಉತ್ತಮ ಕೆಲಸವನ್ನು ಮತ್ತು ಕೆಟ್ಟ ಕೆಲಸವನ್ನು ಪ್ರೇರೇಪಿಸುವ  ಜನರು ನಮ್ಮ ಜೀವನದಲ್ಲಿ ಕಾಣುತ್ತಲೇ ಇರುತ್ತೇವೆ,  ನಮ್ಮ ಸುತ್ತಮುತ್ತಲಿನ ಜನರಲ್ಲಿ ಒಂದಷ್ಟು ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿರುವ ಜನರು  ಮತ್ತು ಅನಾಚಾರ ಹೊಂದಿರುವ ಜನರು ಕೂಡ  ಸೇರಿರುತ್ತಾರೆ. ಯಾವುದೋ ಒಂದು ವ್ಯಕ್ತಿ  ತನ್ನ ಜೀವನದಲ್ಲಿ  ಸಾಧನೆ ಎಂಬ ಮೆಟ್ಟಿಲನ್ನು ಹತ್ತಬೇಕಾದರೆ  ಅದಕ್ಕೆ  ನಿಷ್ಕಲ್ಮಶ  ಜನರ ಬೆಂಬಲ ಮತ್ತು ಆಶೀರ್ವಾದ ಇದ್ದೇ ಇರುತ್ತದೆ. ಅದು  ತಂದೆ ತಾಯಿ ಬಂಧು ಬಳಗ ಅಥವಾ ಉತ್ತಮ ಗೆಳೆಯರ  ರೀತಿಯಲ್ಲಿ  ಇರುತ್ತದೆ. ಒಂದು ವ್ಯಕ್ತಿಯನ್ನು  ಹೊಂಚು ಹಾಕಿ ನಾಶ ಮಾಡುವ  ಪ್ರಯತ್ನದ ನಡುವೆ  ದೇವರಂತೆ  ಬಂದು  ರಕ್ಷಣೆ ಮಾಡುವ ವ್ಯಕ್ತಿಗಳು ಕೂಡ ಇರುತ್ತಾರೆ. ಪ್ರಪಂಚದಲ್ಲಿ ಯಾವುದನ್ನು ಅಪೇಕ್ಷೆ ಮಾಡದೆ  ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವವನು  ಜಯದ ಮೆಟ್ಟಿಲನ್ನು  ಏರುತ್ತಲೇ ಇರುತ್ತಾನೆ. ಆ ವ್ಯಕ್ತಿತ್ವವನ್ನು ನಿಲ್ಲಿಸಲು  ಯಾರಿಂದಲೂ ಸಾಧ್ಯವಿಲ್ಲ. ಮನುಷ್ಯನಿಗೆ  ಗುರಿ ಚಿಕ್ಕದಾಗಲಿ ದೊಡ್ಡದಾಗಲಿ ಇರಲೇಬೇಕು  ಇಲ್ಲವಾದಲ್ಲಿ  ಬದುಕಿಗೊಂದು ಆಕಾರವೇ ಇರುವುದಿಲ್ಲ. ಏನಾದರೂ ಕೆಲಸವನ್ನು ಮಾಡುತ್ತಲೇ ಇರಬೇಕು  ಯಾರು ಏನು ಹೇಳಿದರು  ನಮ್ಮ ಪಯಣ  ಮುಂದುವರೆಯಲೇಬೇಕು. ಶಾಲೆಯಲ್ಲಿ ಗುರುಗಳು  ಮಕ್ಕಳಿಗೆ ಪಾಠವನ್ನು ಮಾಡುತ್ತಾ  ಪ್ರೇರಣೆಯ  ಸಂದರ್ಭಗಳು ಮತ್ತು ಭವಿಷ್ಯಕ್ಕೆ ಬೇಕಾಗುವ  ಉತ್ತಮ ಮಾತುಗಳನ್ನಾಡಿ  ಸಮಾಜಕ್ಕೆ ಬಿಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ  ದಾರಿ ತಪ್ಪಿ ಹೋಗುವ ನಾವೆಲ್ಲರೂ  ಸರಿದಾರಿಗೆ ಬರಬೇಕಾದರೆ  ಉತ್ತಮ ವ್ಯಕ್ತಿಗಳು ನಮ್ಮ ದಾರಿದೀಪವಾಗುತ್ತಾರೆ.

       ಉತ್ತಮವಾದ ಪ್ರೇರಣೆಯನ್ನು ಕೊಡುವಂತಹ  ಶಕ್ತಿ  ಎಲ್ಲಾ ವ್ಯಕ್ತಿಯಲ್ಲಿ  ಇರುವುದಿಲ್ಲ  ಮತ್ತು ಪ್ರೇರಣೆಯ ಮಾತನ್ನು ಗೌರವಿಸುವ ಮತ್ತು ಪಾಲಿಸುವ ಒಳ್ಳೆತನ ಕೂಡ  ಹಲವರಲ್ಲಿ ಇರುವುದಿಲ್ಲ  ಒಂದು ವ್ಯಕ್ತಿಯನ್ನು ಗೌರವಿಸಬೇಕಾದರೆ ಅವನಲ್ಲಿ ಗೌರವದ ಗುಣ ಇದ್ದರೆ ಮಾತ್ರ ಸಾಧ್ಯ  ಇಲ್ಲವಾದಲ್ಲಿ  ಗೌರವವನ್ನು ಪಡೆದುಕೊಳ್ಳುವ  ಮತ್ತು ಗೌರವವನ್ನು ಕೊಡುವ  ರೀತಿ ನೀತಿಗಳು  ಬಹಳ ವ್ಯತ್ಯಾಸವಾಗಿ  ಇರುತ್ತದೆ. ತನ್ನ ಸ್ವಂತ ಲಾಭಕ್ಕಾಗಿ  ಗೌರವನ್ನು ಕೊಡುವ ಜನರೊಂದಿಗೆ ಬಹಳಷ್ಟು ದೂರವಿದ್ದರೆ ನಮಗೆ ಒಳಿತು, ಇಲ್ಲವಾದಲ್ಲಿ  ತಮ್ಮಲ್ಲಿರುವ  ಉತ್ತಮ ಮನಸ್ಸನ್ನು  ಕೆಡವಿ ನಾಶ ಮಾಡಲು  ಪ್ರಯತ್ನಿಸುತ್ತಾರೆ. ನಮ್ಮ ಜೀವನದಲ್ಲಿ  ನಾವು ದೇವರಂತು ಆಗಲು ಸಾಧ್ಯವಿಲ್ಲ  ಆದರೆ ದೇವರಲ್ಲಿರುವ  ಕೆಲವು ಸದ್ಗುಣಗಳನ್ನು  ಪಾಲಿಸಿದಾಗ  ನಮ್ಮ ಬದುಕು  ಆತ್ಮತೃಪ್ತಿಯನ್ನು ಕೊಡುತ್ತದೆ. ಪೈಪೋಟಿಯಿಂದ ಬದುಕುವರು ಉಸಿರುಗಟ್ಟಿ  ಓಡಿ  ಸುಸ್ತಾಗಿ ಬಿಡುತ್ತಾರೆ  ವಿವೇಕ ವಿವೇಚನೆ  ಮತ್ತು ಸಾವಧಾನದಿಂದ  ನಡೆಯುವರು  ತನ್ನ ಗುರಿಯನ್ನು  ನಿರಾಯ ಸವಾಗಿ ತಲುಪುತ್ತಾರೆ.

       ಕವಿಗೆ ಒಂದು ಕವನ ಬರೆಯಲು  ಒಂದು ಶಬ್ದದ ಆರಂಭ ಸಾಕು, ಒಂದು ಲೇಖನವನ್ನು ಬರೆಯಲು  ಒಂದು ವಿಷಯ ಸಾಕು ಮತ್ತೆ ಮುಂದುವರಿಯುವ  ಪದಗಳು ಒಂದು ಪುಸ್ತಕವನ್ನು  ಸೂಚಿಸಬಹುದು. ಅದಕ್ಕೂ  ಉತ್ತಮ ಓದುಗರ ಪ್ರೇರಣೆ ನೂರಾರು ಪುಸ್ತಕಗಳನ್ನು ಬರೆಯುವ  ತಾಕತ್ತನ್ನು ಕೂಡ  ಕೊಡಬಹುದು. ಇತ್ತೀಚಿನ ಕಾಲದಲ್ಲಿ ಕನ್ನಡ ಓದುವವರ ಸಂಖ್ಯೆ  ಕಡಿಮೆಯಾಗುತ್ತಿದ್ದರೂ  ನಾವು ನಿಮ್ಮ ಜೊತೆ ಇದ್ದೇವೆ  ನೀವು ಬರೆಯುತ್ತಲೇ ಇರಿ  ಎಂದು ಹೇಳುವ  ಕೆಲವು ವ್ಯಕ್ತಿಗಳು  ಕನ್ನಡವನ್ನು  ಜೀವಂತವಾಗಿರಿಸಿದ್ದಾರೆ  ಅವರಿಗೆ ನಮಿಸಲೇಬೇಕು. ಕನ್ನಡ ಶಾಲೆಗಳು ಮುಚ್ಚಿ  ಕನ್ನಡ ಶಾಲೆಯ ಗೋಡೆ ಬಾಗಿಲುಗಳು  ಮುರಿದುಬಿದ್ದು ಗೆದ್ದಲು ಹಿಡಿಯುತ್ತಿರುವ ಈ ಕಾಲದಲ್ಲಿ  ಮರಳುಗಾಡಿನ ಓಯಸಿಸಿನಂತೆ  ಸಿಕ್ಕಿರುವ  ನನ್ನ  ಪ್ರೀತಿಯ ಓದುಗರಿಗೆ  ಈ ಲೇಖನ ಅರ್ಪಣೆ .

   ✍️ಮಾಧವ. ಕೆ. ಅಂಜಾರು 🌹

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ