ಕೊಡ ತುಂಬಿದಾಗ
ಜಂಬದ ಕೋಳಿಯೂ
ತನ್ನ ಕೂಗನ್ನು ನಿಲ್ಲಿಸುತ್ತದೆ
ವೇಗವಾಗಿ ಓಡುವ ಕುದುರೆಯೂ
ಓಟವನ್ನು ನಿಲ್ಲಿಸುತ್ತದೆ
ಬಲಿಷ್ಠ ಹುಲಿಯೂ
ತನ್ನ ಬಲ ಕಳೆದುಕೊಳ್ಳುತ್ತದೆ
ಘರ್ಜಿಸುವ ಸಿಂಹವೂ
ಘರ್ಜಿಸುವುದನು ನಿಲ್ಲಿಸುತ್ತದೆ
ನಾಡಿನ ರಾಜನೂ
ಅಧಿಕಾರ ಕಳೆದುಕೊಳ್ಳುತ್ತಾನೆ
ಅದೆಂತಹ ಕಳ್ಳನೂ, ಸುಳ್ಳನೂ
ಸಿಕ್ಕಿಬೀಳುತ್ತಾನೆ
ಸೌಂದರ್ಯದ ರಾಣಿಯೂ
ಬಣ್ಣವನ್ನು ಕಳೆದುಕೊಳ್ಳುತ್ತಾಳೆ
ಜಗದೊಳು ನಿನೊಂದು
ನಶ್ವರ ಜೀವಿ
ಇಂದು ಓಡಾಡುವೆ,
ಮದ ಮತ್ಸರ ಮಾಡುತ್ತ ನಾನೇ
ಮೇಲೇನುವೆ,
ಕೊಡ ತುಂಬಿದಾಗ ಎಲ್ಲವನು
ನಿಲ್ಲಿಸುವೆ,
✍️ಮಾಧವ. ಕೆ ಅಂಜಾರು
Comments
Post a Comment