Posts

Showing posts from 2019

ಉಪದೇಶ

ಉಪದೇಶ ಮಾಡೋದು ತುಂಬಾ ಸುಲಭ ಉಪದೇಶ ಪಾಲಿಸೋದು ಸ್ವಲ್ಪ ಕಷ್ಟ ಕೆಲಸವನ್ನು ಮಾಡಿಸೋದು ತುಂಬಾ ಸುಲಭ ಕೆಲಸ ಮಾಡೋದು ಇಲ್ಲ ಅಷ್ಟು ಸುಲಭ ಇನ್ನೊಬ್ಬರನು ಟೀಕಿಸೋದು ತುಂಬಾ ಸುಲಭ ಟೀಕೆಗೆ ಒಳಗಾಗಿ ಇರೋದು ಸ್ವಲ್ಪ ಕಷ್ಟ ಏನೂ ಚಿಂತೆ ಇರದೇ ಬದುಕೋದು ಕಷ್ಟ ಚಿಂತೆ ಮಾಡುತ್ತಲೇ ಇದ್ದರೆ ಬದುಕೇ ತುಂಬಾ ಕಷ್ಟ - ಮಾಧವ ಅಂಜಾರು

ಇಂದಿನ ದಿನ

ನನ್ನಿಂದ ನಿನಗ್ಯಾಕೆ ತೊಂದರೆ ಎನ  ಮಾತು ನಿನಗಿಷ್ಟವಾಗಿಲ್ಲವೆಂದರೆ ನಮ್ಮ ಬದುಕೇ ತೊಂದರೆ ಇಂದಿನ ದಿನ ತರದಿರಲಿ ಇನಿತು ಭಯ ನಾಳೆ ಎನಗೆ ಸಿಗುವುದೋ ಇಲ್ಲವೋ ಎಂಬುದೇ ಅಂತರಾಳದ ಭಯ ಎನ ಬಯಕೆ, ಇರದಿರಲಿ ಆತಂಕ ಬರದಿರಲಿ ಮನಸ್ತಾಪ ಹೊಂದಿ ನಡೆಯ ಬಯಸುವೆ ಬಿಡು ನಿನ್ನ ಕೋಪ ನನ್ನುಸಿರು ನಿಂತರೂ ನಿನ್ನುಸಿರು ನಿಲ್ಲದಿರಲಿ ಉಸಿರಿರೋ ತನಕ ದೇವ ಕಾಪಾಡಲಿ ನಿನ್ನ ಕೊನೆತನಕ              -ಮಾಧವ ಅಂಜಾರು

ಒಲವೇ ಜೀವನ

ಮೌನ ಮಾತಾದರೆ ಪ್ರೇಮ ಅಳಿಯದಿರಲಿ ಮನಸು ನೋವಾದರೆ ಹೃದಯ ಬಿರುಕದಿರಲಿ ಒಲವೇ ಜೀವನ ನಮಗೆ ತಿಳಿದಿರಲಿ ಕವನಗಳೇ ಜೀವನ ಪ್ರೀತಿ ಬದುಕಿರಲಿ ಸಿಹಿ ತಿಂದ ಮಾತ್ರಕೆ ಸಿಹಿಯಾಗೋದಿಲ್ಲ ಯಾರೂ ಕಹಿ ಕುಡಿದ ಮಾತ್ರಕೆ ಕಹಿಯಾಗೋದಿಲ್ಲ ನಾನು ರವಿಯಂತೆ ಇರಬೇಕು ಕವಿಯಲ್ಲದಿದ್ದರೇನು ಚಂದಿರನಾಗಿಹೆ ನೀನು ನಮ್ಮಿ ಬದುಕು ಸವಿಜೇನು            -ಮಾಧವ ಅಂಜಾರು

ವಿಷ ಕುಡಿದವರು

ವಿಷ ಕುಡಿದವರು ಪ್ರಾಣ ಕಳೆದುಕೊಳ್ಳುತ್ತಾರೆ ಯಾಕೆಂದರೆ ಅತಿಯಾಗಿ ಒಂದೇ ಸಮಯಕ್ಕೆ ಕುಡಿದಿದ್ದರಿಂದ, ವಿಷ ಕಾರುವವರು ಪ್ರಾಣ ತೆಗೆಯುತ್ತಾರೆ ಯಾಕೆಂದರೆ ಹುಟ್ಟುತ್ತಾ ವಿಷ ಸ್ವಲ್ಪ ಸ್ವಲ್ಪನೇ ತಿಂದಿದ್ದರಿಂದ, ವಿಷ ಕುಡಿಯೋರಿಗೆ ಹಲವು ಕಾರಣ ಇರಬಹುದು ವಿಷ ಕಾರೋರಿಗೆ ಕಾರಣದ ಅಗತ್ಯವಿಲ್ಲ ಕಾರಲೆ ಬೇಕಾಗುತ್ತದೆ.. !         - ಮಾಧವ ಅಂಜಾರು

ಆಗಬೇಕಾದದ್ದು

ಆಗಬೇಕಾದದ್ದು ಆಗಿಯೇ ಆಗುತ್ತೆ , ಸಮಯ ಬಂದಾಗ ..! ಹೋಗಬೇಕಾದದ್ದು ಹೋಗಿಯೇ ಹೋಗುತ್ತೆ ಸಮಯ ನಿಲ್ಲದಾಗ . ಸಿಗಬೇಕಾದದ್ದು ಸಿಕ್ಕಿಯೇ ಸಿಗುತ್ತೆ ಸಮಯ ಇರುವಾಗ, ಆಗೋದಕ್ಕೂ ಹೋಗೋದಕ್ಕೂ ಸಿಗೋದಕ್ಕೂ ಬಿಡೋದಕ್ಕೂ ನಿಲ್ಲಿಸೋಕು  ನಮ್ಮಿಂದ ಸಾಧ್ಯವಿಲ್ಲ ಕೈಮೀರಿ ಹೋದಾಗ ....!            -ಮಾಧವ ಅಂಜಾರು

ಆಸೆಬುರುಕನ ಆಸೆ

ಆಸೆಬುರುಕನ ಆಸೆ ಮುಗಿದುಹೋಗದು ಬೆಳ್ಳಗಾದರೂ ಅವನ ಮೀಸೆ , ಮೋಸಗಾರನ ಕಿಸೆ ತುಂಬಲಾರದು ಚರಂಡಿಯೊಳು ಬಿದ್ದರೂ ಇಳಿಯದು ಅವನ ನಶೆ ,           - ಮಾಧವ ಅಂಜಾರು

ನಮ್ಮ ದೇಶದಲ್ಲಿ

ನಮ್ಮ ದೇಶದಲ್ಲಿ ಪ್ರಾಮಾಣಿಕತೆಗೆ ಬೆಲೆ ಕೊಡುವವರು ಬಹಳ ವಿರಳ ...! ತಮ್ಮ ಸ್ವಾರ್ಥಕ್ಕಾಗಿ ಸರಕಾರಿ ಉದ್ಯೋಗದ ದುರುಪಯೋಗ ಹಣ ಸಂಪಾದನೆಗೆ ಲಂಚಾವತಾರದ ಯೋಗ , ಎಷ್ಟು ಕೆಳಮಟ್ಟದಲ್ಲಿ ಅವರ ಬದುಕೆಂದರೆ ನ್ಯಾಯ ಕೊಡಿಸಬೇಕಾದವರು ಅನ್ಯಾಯ ಮಾಡುವರು ರಕ್ಷಕನಾಗಿ ಇರಬೇಕಾದವರು ಭಕ್ಷಕನಾಗಿ ಬದುಕುವರು, ಧಿಕ್ಕಾರವಿರಲಿ ಅಪ್ರಾಮಾಣಿಕರಿಗೆ ನರಕ ಯಾತನೆ ಸಿಗಲಿ ವಂಚನೆ ಮಾಡುವವರಿಗೆ, ಬೆಲೆ ಸಿಗಲಿ ಪ್ರಾಮಾಣಿಕರಿಗೆ ,                     -ಮಾಧವ ಅಂಜಾರು

ನಾವೆಲ್ಲಾ ಒಂದು

ನಾವೆಲ್ಲಾ ಒಂದು ನಾವೆಲ್ಲರೂ ಒಂದೇ ಎಂದು ಕೇಳಿಬರುತ್ತಿದೆ ಅಲ್ಲಲ್ಲಿ ಇಂದು ನಾವೆಲ್ಲಿ ಇಂದು? ನಮ್ಮವರೆಲ್ಲ ಇಲ್ಲವೆಂದು ಹುಟ್ಟಿಸುತಿದ್ದಾರೆ ಹನ್ನೊಂದು ! ಸಂಘಗಳ ಬಿಂದು. ನಾವೆಲ್ಲರೂ ಇಂದು ಒಂದಾಗಬೇಕು ಎಂದು ಕೇಳುತ್ತಿದ್ದೇವೆ ನಿಂದು ಮತ್ತದೇ ! ನೀನೇನು ಇಲ್ಲಿ ಎಂದು?            -ಮಾಧವ ಅಂಜಾರು

ಭಕ್ತಿಯನು ಹುಂಡಿಗೆ ಹಣಹಾಕಿ

ಭಕ್ತಿಯನು ಹುಂಡಿಗೆ ಹಣಹಾಕಿ ವ್ಯಕ್ತಪಡಿಸಬೇಕಾಗಿಲ್ಲ ..! ನಿಮ್ಮ ಬೇಡಿಕೆ ಈಡೇರಿಸಲು ಪ್ರತೀ ಧರ್ಮದವರು ನಿಮ್ಮ ದೇವರಿಗೆ ಲಂಚ ಕೊಡಬೇಕಾಗಿಲ್ಲ... ! ನಿಮ್ಮ ಯುಕ್ತಿಯನು - ಬಡವರ ಮೇಲೆ ತೋರಿಸಬೇಕಾಗಿಲ್ಲ ..! ಅತೀ ಶಕ್ತಿಯನು ಕೈಲಾಗದವರ ಮೇಲೆ ತೋರಿಸೋದು ಸಲ್ಲ ಅದು , ಜೀವನವೇ ಅಲ್ಲ ..! ಕೊಡುವವನೇ ದೇವರು .. ಬೇಡುವವನೇ ಭಕ್ತ ... ! ಕೊಡುವವನು ನೀನಾಗು ಬೇಡುವವನೂ  ನೀನಾಗು ಆದರೆ,ಭಕ್ತ ಕೊಟ್ಟ ಕಾಣಿಕೆ ಹುಂಡಿ ತುಂಬೋದೇ ಇಲ್ಲ ...!     -ಮಾಧವ ಅಂಜಾರು

ದಿನಕ್ಕೆ ಹತ್ತು ನಿಮಿಷ

ದಿನಕ್ಕೆ ಹತ್ತು ನಿಮಿಷ ದೇಶ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ಈಶ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ಜನ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ಬಡವರ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ನಿಮ್ಮ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ನಮ್ಮದೇ  ಸೇವೆಗಾಗಿ              -ಮಾಧವ ಅಂಜಾರು

ನಿಮ್ಮ ಜಾತಿಯವನೊಬ್ಬ

ನಿಮ್ಮ ಜಾತಿಯವನೊಬ್ಬ ಚುನಾವಣೆ ಸ್ಪರ್ದಿಸುತ್ತಿದರೆ ನಮ್ಮ ಜಾತಿಯವನೆಂದು ...! ಮತವನ್ನು ಹಾಕಬೇಡಿ .. ನಿಮ್ಮ ಧರ್ಮದವನೊಬ್ಬ ಚುನಾವಣೆ ಸ್ಪರ್ದಿಸುತ್ತಿದ್ದರೆ ನಮ್ಮ ಧರ್ಮದವನೆಂದು ಮತವನ್ನು ಹಾಕಲೇಬೇಡಿ ಜಾತಿ , ಮತ ಯಾವುದೇ ಇರಲಿ ದೇಶಕ್ಕಾಗಿ ಸ್ಪರ್ದಿಸುತ್ತಿದ್ದರೆ ಭಾರತ ಮಾತೆಗೆ ನಮಿಸಿ ನಿಮ್ಮ ಮತವನ್ನು ಚಲಾಯಿಸಿ ..!            -ಮಾಧವ ಅಂಜಾರು

ಸಮಾಜವೇ ಹಾಗೆ

ಸಮಾಜವೇ ಹಾಗೆ ತಪ್ಪು ಮಾಡದಿದ್ದರೂ ತಪ್ಪಿತಸ್ಥನೆಂದು ಬಿಂಬಿಸುತ್ತಾರೆ ಕಳ್ಳತನ ಮಾಡದಿದ್ದರೂ ಕಳ್ಳನೆಂದು ಹೇಳುತ್ತಾರೆ ಸುಳ್ಳು ಹೇಳದಿದ್ದರೂ ಸುಳ್ಳನೆಂದು ಹೇಳುತ್ತಾರೆ ಸಮಾಜವೇ ಹಾಗೆ ನಿಮ್ಮಿಷ್ಟಕ್ಕೆ ಇದ್ದರೂ ವಕ್ರ ದೃಷ್ಟಿಲಿ ನೋಡುತ್ತಾರೆ ನಗುನಗುತ್ತಾ ಇದ್ದರೆ ಚಿಂತೆ ಇರದವನು ಅನ್ನುತ್ತಾರೆ ಅಳುತ್ತಾ ಇದ್ದರೆ ಪುಕ್ಕಲನೆನ್ನುತ್ತಾರೆ.... -ಮಾಧವ ಅಂಜಾರು

ಅಲ್ಲಿ ಅಧಿಕಾರ ಉಳಿಸಿಕೊಳ್ಳಲು

ಅಲ್ಲಿ ಅಧಿಕಾರ ಉಳಿಸಿಕೊಳ್ಳಲು ರೆಸಾರ್ಟುಗಳಿಗೆ ಓಡಾಟ ಇಲ್ಲಿ ಸರಕಾರಿ ಕಛೆರಿಗೆ ಜನರರೆಲ್ಲರ ಓಡಾಟ ಕೆಲಸವೇ ಆಗದೇ ದಿನವೆಲ್ಲಾ ಪರದಾಟ ಅಲ್ಲಿ ಅಧಿಕಾರ ಗಳಿಸಿಕೊಳ್ಳಲು ಮಂತ್ರಿಗಳ ತಿಕ್ಕಾಟ ಇಲ್ಲಿ ಜನಸಾಮಾನ್ಯರಿಗೆ ಸಿಗುತ್ತಿಲ್ಲ ಒಂದು ಹೊತ್ತಿನೂಟ ಕೆಲಸವೇ ಸಿಗದೇ ದಿನಪೂರ್ತಿ ಕಷ್ಟ ನಷ್ಟ ಅಲ್ಲಿ ಅಧಿಕಾರ ಪಡೆದುಕೊಂಡು ನಡೆಯುತ್ತಿದೆ ರಂಪಾಟ ಇಲ್ಲಿ ವೋಟು ಕೊಟ್ಟವನಿಗೊಂದು ಪಾಠ ಮಂತ್ರಿಗಳ ಕೈಲಿ ದೊಡ್ಡ ಪೇಟ ಮತದಾರನ ಕೈಗೆ ಕೊಟ್ಟರು ಗೂಟ - ಮಾಧವ ಅಂಜಾರು

ಅನ್ಯರ ಉದ್ದಾರಕ್ಕೆ

ಅನ್ಯರ ಉದ್ದಾರಕ್ಕೆ ಕಾರಣರಾದರೆ ಪರವಾಗಿಲ್ಲ ಅನ್ಯರ ಅವನತಿಗೆ ಕಾರಣರಾಗಬೇಡಿ ಅನ್ಯರ ನಗುವಿಗೆ ಕಾರಣರಾದರೆ ಪರವಾಗಿಲ್ಲ ಅನ್ಯರ ಅಳುವಿಗೆ, ಕಾರಣರಾಗಬೇಡಿ ಅನ್ಯರ ಪ್ರೀತಿಗೆ ಕಾರಣರಾದರೆ ಪರವಾಗಿಲ್ಲ ಅನ್ಯರ ದ್ವೇಷಕ್ಕೆ ಕಾರಣರಾಗಬೇಡಿ ಅನ್ಯರ ಬದುಕಿಗೆ ಕಾರಣರಾದರೆ ಪರವಾಗಿಲ್ಲ ಅನ್ಯರ ಸಾವಿಗೆ ಕಾರಣರಾಗಬೇಡಿ -ಮಾಧವ ಅಂಜಾರು

ಶ್ರೇಷ್ಠತೆ ಮನುಷತ್ವದಲ್ಲಿ

ಶ್ರೇಷ್ಠತೆ ಮನುಷತ್ವದಲ್ಲಿ ಅಳತೆ ಮಾಡಬೇಕಿದ್ದದ್ದು ವಿವಿಧ ಜಾತಿಯಲ್ಲಿ ಆಗಿಬಿಟ್ಟಿದೆ ಎಲ್ಲರನು ವಿಭಾಗಿಸಿಬಿಟ್ಟಿದೆ ಸಮಾನತೆ ಎಲ್ಲಾ ಧರ್ಮಗಳಲ್ಲಿ ಇರಬೇಕಿತ್ತು ಇಂದು ದ್ವೇಷದ ವಿಷ ಬಿತ್ತೋರು ಅಲ್ಲಲ್ಲಿ ಹುಟ್ಟಿದ್ದಾರೆ        -ಮಾಧವ ಅಂಜಾರು

ಸಂಸ್ಕೃತಿ ಇಲ್ಲದವನ ಕೈಲಿ

ಸಂಸ್ಕೃತಿ ಇಲ್ಲದವನ ಕೈಲಿ ಧರ್ಮಗ್ರಂಥ ಕೊಟ್ಟು ಬೋಧನೆ ಮಾಡಿಸಿದರೆ ಸಂಸ್ಕಾರವನ್ನೇ ಸಂಹಾರಮಾಡುವ ಹೊರತು ಧರ್ಮಗ್ರಂಥವನರಿಯದೇ ಸುಧರ್ಮಿಯನಾಗಿ ಬಾಳಿದವನೊಂದಿಗೆ ಸಂಸ್ಕಾರ ಕಲಿತರೆ ಜೀವನದುದ್ದಕೂ ಒಳಿತು - ಮಾಧವ ಅಂಜಾರು

ಎಲ್ಲರೂ ಸತ್ಯವಂತರಾಗಿದ್ದರೆ

ಎಲ್ಲರೂ ಸತ್ಯವಂತರಾಗಿದ್ದರೆ ಆರಕ್ಷಕರ ಅಗತ್ಯವಿಲ್ಲ ನ್ಯಾಯವಾದಿಗಳಿಗೆ ಕೆಲಸವೇ ಇಲ್ಲ... ಅದಕ್ಕಾಗಿ ನೂರರಲ್ಲಿ ಒಂದಷ್ಟು ಶತಮಾನ ಕಳ್ಳರು ಕಾಕರು ದ್ರೋಹಿಗಳು ಪಾಪಿಗಳು ಈ ಕಳ್ಳಕಾಕರು ದ್ರೋಹಿಗಳು ಪಾಪಿಗಳು ಓದು ಬರಹ ಹೊಂದಿದವರೇ ಜಾಸ್ತಿ ಯಾಕೆಂದರೆ ಅವರ ಆಸೆ ಸಾಯೋ ಮುನ್ನ ಕೂಡಿಡಬೇಕು ಕೊಳೆಯುವಷ್ಟು ಆಸ್ತಿ ಪಾಸ್ತಿ -ಮಾಧವ ಅಂಜಾರು

ದೇಶ ಬಿಟ್ಟು ವಿದೇಶ

ದೇಶ ಬಿಟ್ಟು ವಿದೇಶ ಕಾಲಿಟ್ಟ ದಿನವೇ ವಿಷ ಕನಸು ಹೊತ್ತು ಪ್ರವೇಶ ನನಸಾಗಲಿಲ್ಲ ಈಶ.. ಮೋಸದ ಬಲೆಗೆ ತುತ್ತಾದೆ ದುಷ್ಟರ ಆಟಕೆ ಬಲಿಯಾದೆ ಕಷ್ಟದ ದಿನಕೆ ಗುರಿಯಾದೆ ದೇಶವ ನೆನೆದು ಕೈಮುಗಿದೆ, ಅನ್ನವ ಅರಸಿ ಬಂದವನಿಗೆ ಕೈ ಕೊಳ ತೊಡಿಸುವರೆಂದಾಗ ನನ್ನ ಮನೆಮಂದಿಯರೆನಿಸಿ ಕಣ್ಣೀರ ಹರಿಸಿ ಸ್ಥಿರವಾದೆ.. ಶಪಿಸುವೆ ನಾನು ಬಲವಾಗಿ ನನ್ನ ಖುಷಿಯನ್ನು ನಶಿಸಿದ ದುಷ್ಟರಿಗೆ ದೇವರೇ ಶಿಕ್ಷಿಸು ಸರಿಯಾಗಿ ನಮ್ಮನು ರಕ್ಷಿಸು ಸುಳಿಯಿಂದ ತಾಯ್ನಾಡಿಗೆ ಮರಳಿಸು ನಾ ನಿನ್ನ ಕಂದ ನನ್ನ ಕೂಗನು ಕೇಳುವೆಯ ಮರಳಿ ತಾಯ್ನಾಡಿಗೆ ಸೇರಿಸು ನಮ್ಮೆಲ್ಲರನು ಉಳಿಸು -ಮಾಧವ ಅಂಜಾರು

ಹೆಸರುಗಳಿಸೋ ಭರದಲ್ಲಿ

ಹೆಸರುಗಳಿಸೋ ಭರದಲ್ಲಿ ಜವಾಬ್ದಾರಿ ಮರೆಯಬೇಡಿ ಉಪಕಾರ ಮಾಡೋ ನೆಪದಲ್ಲಿ ಉಪದ್ರವನ್ನ ಮಾಡಲೇಬೇಡಿ, ದಾನ ಧರ್ಮ ಮಾಡೋದಿದ್ದರೆ ನಯವಿನಯತೆ ರೂಡಿಸಿಕೊಳ್ಳಿ ಧನವಂತರಾದ ಮಾತ್ರಕೆ ನಿಮ್ಮ ಕೆಟ್ಟಗುಣವನ್ನು ತೋರಿಸಬೇಡಿ, ಉಸಿರಿದ್ದರೆ ಹೆಸರು ಗುಣವಿರದಿದ್ದರೂ ಹೆಸರೇ ಹಣವಿದ್ದರೆ ಮತ್ತೂ ಹೆಸರೇ ಇದೆಲ್ಲದರ ನಡುವೆ ನಿಲ್ಲದಿರಲಿ ಉಸಿರೇ... -ಮಾಧವ ಅಂಜಾರು

ಮೊಸಳೆ ಕಣ್ಣೀರು

ಮೊಸಳೆ ಕಣ್ಣೀರು ಹಾಕೋರಿಗೆ ಸೆಗಣಿ ನೀರು ಕುಡಿಸಿ ನಿಜ ಕಣ್ಣೀರು ಸುರಿಸೋರಿಗೆ ಕಣ್ಣ ನೀರ ಒರೆಸಿ ಕಪಟ ಕಣ್ಣೀರು ಸುರಿಸೋರಿಗೆ ಚರಂಡಿ ನೀರು ಕುಡಿಸಿ ಸತ್ಯ ತುಂಬಿದ ಕಣ್ಣೀರ ಹನಿಗೆ ಬೆಲೆಕೊಟ್ಟು ಜಯಕೊಡಿಸಿ        -ಮಾಧವ ಅಂಜಾರು

ಪಕ್ಷದ ಅನುಯಾಯಿಗಳು

ಪಕ್ಷದ  ಅನುಯಾಯಿಗಳು ಅಕ್ಷರಸ್ತರಾಗಿದ್ದರೂ ವಿವೇಚನಾಶಕ್ತಿ ಹೊಂದಿರದಿದ್ದರೆ ..! ಪಕ್ಷ ತಪ್ಪು ಮಾಡಿದ್ದರೂ ...! ಸರಿಯೆಂದೇ ವಾದಿಸುತ್ತಾರೆ ಅಂತವರು  ದೇಶಕ್ಕೆ ಕೆಡುಕು ..! ಕಣ್ಣಿದ್ದೂ ಕುರುಡರಂತೆ ನಟಿಸಿ ಬಾಳುವವರು ಕಿವಿಯಿದ್ದೂ ಕಿವುಡರಂತೆ ವರ್ತಿಸುವವರು ..! ಊರನ್ನು ಆಳಿದರೆ ನಿಮ್ಮ ಪಂಚೇಂದ್ರಿಯವನ್ನು ಮುಚ್ಚಿಬಿಡುತ್ತಾರೆ ..! ಜಾಗ್ರತೆ .              -ಮಾಧವ ಅಂಜಾರು

ಅವಿವೇಕಿಗಳು

ಅವಿವೇಕಿಗಳು ರಾಜಕೀಯಕ್ಕೆ  ಸೇರಿ ಅಧಿಕಾರ ಪಡೆದರೆ  ಊರು ತುಂಬಾ ಅವಿವೇಕಿಗಳನ್ನು ಪೋಷಿಸುತ್ತಾರೆ ...! ವಿವೇಕಿಗಳು ರಾಜಕೀಯದಲ್ಲಿ ಅಧಿಕಾರ ಪಡೆದರೆ ಪ್ರಪಂಚದಲ್ಲೆಲ್ಲಾ ದೇಶಭಕ್ತರನ್ನು ಹೆಚ್ಚಿಸುತ್ತಾರೆ ..!             - ಮಾಧವ ಅಂಜಾರು  

ಹುಚ್ಚಾಗಬೇಡಿ

ಹುಚ್ಚಾಗಬೇಡಿ ಪಕ್ಷಗಳ ದೊಂಬರಾಟಕೆ ಸಹನೆ ಕಳೆದುಕೊಳ್ಳಬೇಡಿ ಪಕ್ಷಗಳ ಅವಿವೇಕತೆಗೆ ..! ಬೇಕು ನಮಗೆ ದೇಶ ಒಳ್ಳೆಯ  ನಾಯಕ  ನಮಗೆ ಮುಖ್ಯ ಪಕ್ಷದ ಬಗ್ಗೆ ಒಲವು ಬಿಡಿ ಮೊದಲು ದೇಶವೆಂಬ ಛಲ ಹಿಡಿ ರಾಜನೊಬ್ಬ ಚೆನ್ನಾಗಿದ್ದರೆ ..! ಪ್ರಜೆಗಳೆಲ್ಲಾ ಚಿಂತೆ ಬಿಡಿ ನಿಮ್ಮ ಒಂದು ಮತದ  ಬೆಲೆ ಚಿತ್ರಣವೇ ಬದಲಿಸಬಹುದು ನೋಡಿ ..! ಈ ಸಲದ ಮತದಾನಕ್ಕೆ ಯೋಚನೆ ಮಾಡೊದನು ಬಿಡಿ ದೇಶಾಭಿಮಾನಿಗಳೆಲ್ಲಾ ಒಂದಾಗಿ ದೇಶದ್ರೋಹಿಗಳನ್ನು ಕಿತ್ತು ಹಾಕಿ ..!                      -ಮಾಧವ ಅಂಜಾರು

ತಿಂಗಳ ಬೆಳಕನು

ತಿಂಗಳ ಬೆಳಕನು ನೋಡಲು ಅದೆಷ್ಟು ಆತುರ ಆ ಚಂದಿರನ ಕಂಡಾಗಲೇ ಮನಸೆಲ್ಲಾ  ಹಗುರ , ತಂಬಿಗೆ ನೀರನು ಕುಡಿಯಲು ಅದೆಷ್ಟು ಆತುರ ಹೊಟ್ಟೆತುಂಬಾ ಕುಡಿದಾಗ ದಣಿವಾರಿತು ಬೇಗ. ಇಂದಿನ ದಿನಗಳೆಲ್ಲಾ ಮೊಬೈಲುಗಳೇ ಚಂದಿರ ಹೊಟ್ಟೆ ಚುರುಗುಟ್ಟಿದರೂ ಬೇಡವೇ ಬೇಡ , ಆಹಾರ, ಬರ ಬರುತ್ತಲೇ ಹಾಳಾಗುತ್ತಿದೆ ಸಂಸಾರ ಕೆಲವೇ ವರುಷದಲ್ಲಿ ಇಲ್ಲವಾದೀತು ಸಂಸ್ಕಾರ ...!          - Madhavanjar ...👍

ಏನೂ ಇಲ್ಲದವನ ಕೈಲಿ

ಏನೂ ಇಲ್ಲದವನ ಕೈಲಿ ಬಂದು ಕೂಡಿತು ಕೋಟಿ ಕೋಟಿ ಹಣ ಅದಕ್ಕೆ ಕಾರಣ ದರಿದ್ರ ರಾಜಕಾರಣ...! ಏನೂ ಇಲ್ಲದವನ ಕೈಗೆ ಸಿಕ್ಕಿಯೇ ಬಿಟ್ಟಿತು ಮೂರು ಕೋಟಿ ಹಣ ಅದಕ್ಕೆ ಕಾರಣ ಒಲಿದ ಲಾಟರಿಯ ಹಣ ..!          - Madhavanjar ...👍            

ಯಾರಾದರೂ ನಿಮ್ಮಲ್ಲಿ

ಯಾರಾದರೂ ನಿಮ್ಮಲ್ಲಿ ದೇಶದ ಪ್ರಧಾನಿ ಯಾರಾಗಬೇಕೆಂದು ಕೇಳಿದರೆ ? ಯಾರಾದರೂ ಆಗಲಿ ನಮಗೇನು ಹೇಳಬೇಡಿ ....! ಒಂದು ವೇಳೆ ಅಪ್ಪಿ ತಪ್ಪಿ ಉಪಯೋಗಕ್ಕೆ ಬಾರದವರು ನಮ್ಮ ದೇಶದ ಪ್ರಧಾನಿಯಾದರೆ ..! ನಮ್ಮ ದೇಶವಂತೂ ಉದ್ಧಾರವೇ ಆಗೋದಿಲ್ಲ ಅಂತ ಹೇಳಲೇಬೇಡಿ ..!        - Madhavanjar ...👍       

ಸಿಕ್ಕ ಸಿಕ್ಕವರಿಗೆ

ಸಿಕ್ಕ ಸಿಕ್ಕವರಿಗೆ ಪಂಗನಾಮ ಹಾಕಿ ಕೂಡಿಟ್ಟ ಆಸ್ತಿ ....! ಅಕ್ಕ ಪಕ್ಕದವರಿಗೆ   ಕರೆದು ತೋರಿಸಿದ ಇದೆಲ್ಲಾ  ನನ್ನ ಆಸ್ತಿ ...! ವಂಚನೆ ಮಾಡುತ್ತಲೇ ... ಇನ್ನಷ್ಟು ಕೂಡಿಟ್ಟ .. ಆಸ್ತಿಯನ್ನು ಜಾಸ್ತಿ ..! ಆಸ್ತಿ ಜಾಸ್ತಿಯಾಯಿತು ಆದರೇನು ಬಂತು ಅವನು ಬದುಕಲಿಲ್ಲ ಜಾಸ್ತಿ ...!              -ಮಾಧವ ಅಂಜಾರು

ಸುಳ್ಳು ಹೇಳಿಯೇ

ಸುಳ್ಳು ಹೇಳಿಯೇ ಸಂಪಾದನೆ ಅವನದು ಮನೆ ತುಂಬಾ ಚಿನ್ನ ಬೆಳ್ಳಿಯದೇ ಖಜಾನೆ ಅವನದು , ಬೆಲ್ಲ ಮಾತಲೇ ಸಂಪಾದನೆ ಅವನದು ಮನೆತುಂಬಾ ಮೃಷ್ಟಾನ್ನ ಭೋಜನದ ಬೀಡು ಅವನದು ಸುಂದರ ಉಡುಗೆ ತೊಟ್ಟು ಸಂಪಾದನೆ ಅವನದು ಮನೆತುಂಬಾ ಸೌಂದರ್ಯ ಲೋಕವೇ ಇದ್ದಂತಿಹುದು ಅವನದು ಅಂತೂ ಸುಳ್ಳೇ ,,,, ಜೀವನವಾಯಿತು ಅವನದು ಮನೆತುಂಬಾ ಸುಳ್ಳಿನ ಗಿಡ ಬೆಳೆಸೋ ಕೆಲಸವೇ ಅವನದು ....           - ಮಾಧವ ಅಂಜಾರು

ಮನೆಯ ಮುಂದೆ

ಮನೆಯ ಮುಂದೆ ನಿಂತಿತ್ತು ಎರಡು ಕಾರು ದಣಿವಾಗಿ ಕಂಡೆ ಅವರ ಸೂರು ಸಿಗಲಿಲ್ಲ ಒಂದು ಲೋಟ ನೀರು ....! ಮನೆಯ ಮುಂದೆ ಬೆಳೆದಿತ್ತು ಹೂವ ತೋಟ ಕೇಳಿದೆ ಹೂವ ಹೆಸರು ಏದುಸಿರು ಬಿಟ್ಟರು ಜೋರು ...! ಮನೆಯ ಮುಂದೆ ಕಾಯೋಕೆ ಎರಡು ನಾಯಿ ಮನೆಯಂಗಳಕೆ ಕಾಲಿಟ್ಟರು ಮನೆಯೊಡೆಯ ತೆರೆಯಲಿಲ್ಲ ಬಾಯಿ ..! ವರುಷ ಕಳೆಯಿತು ಸುಮಾರು ಕಾಣಲಿಲ್ಲ ,ಕಾರು ಇರಲಿಲ್ಲ ಹೂವ ತೋಟ ಮನೇಲಿ ಕಾಣಸಿಗಲಿಲ್ಲ ಯಾರೂ ..!          -ಮಾಧವ ಅಂಜಾರು

ಕಳ್ಳನಾಗಲು

ಕಳ್ಳನಾಗಲು  ಪ್ರಯತ್ನಿಸಿದೆ ಕಳ್ಳನ ಒಳಗುಟ್ಟು ತಿಳಿಯಲು ಸುಳ್ಳನಾಗಲು  ಪ್ರಯತ್ನಿಸಿದೆ ಸುಳ್ಳನ ಸುಳಿ ಮಾತು ತಿಳಿಯಲು ಅಲ್ಪ ಸಮಯಕೆ ಕಳ್ಳನಾದರೂ , ಸುಳ್ಳನಾದರೂ ತಿಳಿಯಲೇ ಇಲ್ಲ ಅವರ ತಿರುಳು , ಅರ್ಥವಾಯಿತು ಕೊನೆಗೆ ಕಳ್ಳ , ಸುಳ್ಳನ- ಕಲೆ ಅವರ ಹುಟ್ಟುಗುಣದ ಕಲೆ .              -ಮಾಧವ ಅಂಜಾರು

ತಂದೆಯಾದವನ ಆಸೆ,

ತಂದೆಯಾದವನ ಆಸೆ, ಮಗ ದೊಡ್ಡವನಾಗಿ ನಮ್ಮನ್ನು ಸಾಕಲಿ ನಡೆಯಲಾಗದಿದ್ದರೆ ಕೈ ಹಿಡಿದು ನಡೆಸಲಿ , ವಿದ್ಯಾವಂತನಾಗಿ ಕೀರ್ತಿಯನು ಗಳಿಸಲಿ ಧೈರ್ಯದಲಿ  ಮುನ್ನಡೆಯೊ ಸಜ್ಜನನಾಗಿ ಬಾಳಲಿ ಮುಪ್ಪಿನ ಸಮಯದಲಿ ತುತ್ತು ಅನ್ನ ಉಣಿಸಲಿ ದೃಷ್ಟಿ ಹೀನವಾಗಿ ಪರದಾಟ ಮಾಡಿದರೆ ಪ್ರೀತಿಯಲಿ ಮಾತಾಡಲಿ ಕೋಲು ಹಿಡಿದು ನಡೆಯುವಾಗ ಹೆಗಲ ಕೊಟ್ಟು ನಡೆಸಲಿ ಪ್ರಾಣ ಪಕ್ಷಿ ಹಾರಿ ಹೋದರೆ ಕಣ್ಣೀರ ಸುರಿಸದಿರಲಿ ,,,, !                 -ಮಾಧವ ಅಂಜಾರು

ಅವಳಿಗೆ

ಅವಳಿಗೆ , ತನ್ನ ಗಂಡನ ತಲೆಗೂದಲು ಉದುರುತ್ತಿದೆ ಅನ್ನೋ ಚಿಂತೆ , ಗಂಡ - ಇನ್ನೇನು ? ಮದುವೆಯಾಗಿ ಎರಡು ಮಕ್ಕಳಾದ್ಮೇಲೆ ಇನ್ಯಾಕೆ ಚಿಂತೆ ಅಯ್ಯೋ ನನ್ನ ಗಂಡನ ಗಡ್ಡವು ಬಿಳಿ ಬಣ್ಣಕೆ ತಿರುಗುತಿರೊ ಚಿಂತೆ , ಗಂಡ -ಇನ್ನೇನು ಬಿಳಿಯಾದ ಮಾತ್ರಕೆ ನಾನು ಮಲ್ಯ ಆಗೋದಿಲ್ಲ ಬಿಡು ಚಿಂತೆ ,,                 -ಮಾಧವ ಅಂಜಾರು

ನಿಮ್ಮ ಓಟು

ನಿಮ್ಮ ಓಟು ನಾಯಕತ್ವ ಇರೋರಿಗೆ  ಹಾಕಿ ಬನ್ನಿ ಬರೀ ಕುರ್ಚಿಗಾಗಿ ಒದ್ದಾಡೋ ನಾಲಯಕರಿಗೆ ಕ್ಯಾಕರಿದು ಉಗಿದುಬನ್ನಿ ನಿಮ್ಮ ಓಟು ಸರಿಯಾದ ನಾಯಕನಿಗೆ ಹಾಕಿ ಬನ್ನಿ ಸಾವಿರದ  ನೋಟು ನಿಮ್ಮ ಕೈಲಿ ಕೊಡೋರು ಇದ್ದರೆ ಆ ದುಡ್ಡು ನಿನ್ನ ಅಪ್ಪನದೇ ಅನ್ನಿ ? ನಿಮ್ಮ ಓಟು ನಾಲಯಕನಿಗೆ ಹಾಕಿ ಬನ್ನಿ ಮತ್ತೆ ದಿನಾಲು ಹೆಕ್ಕಿ ತಿನ್ನಿ ನಿಮ್ಮ ಓಟು ನಿಮಗಾಗಿ ಹಾಕಿಬನ್ನಿ ಫಲಿತಾಂಶ ಬಂದಮೇಲೆ ನನ್ನದೇ ಪಕ್ಷವೆನ್ನಿ , ನಿಮ್ಮ ಓಟು ಸುಭದ್ರ ದೇಶಕ್ಕಾಗಿ ಹಾಕಿಬನ್ನಿ, ನಿಮ್ಮ ನಾಯಕ ಜಯಗಳಿಸಲೆಂದು ನಿಮ್ಮವರ ಓಟು ಹಾಕಿಸಿ ಬನ್ನಿ ......!               -ಮಾಧವ ಅಂಜಾರು

ಆಸೆ ಅಧಿಕಾರಕ್ಕೆ

ಆಸೆ ಅಧಿಕಾರಕ್ಕೆ ಆದರೆ ....... ಜನಸೇವೆಯೇ  ಇಲ್ಲ ಅಧಿಕಾರ ಜನಸೇವೆಗೆ ಆದರೆ ....... ಜನಸೇವೆ ಬಹಳ ವಿರಳ . ಅಸೆ ಇರಲಿ ಅಧಿಕಾರಕ್ಕೆ ಆದರೆ ... ಅತಿಯಾಸೆ ಇರಲಿ ಜನಸೇವೆಗೆ ಅಧಿಕಾರ ಸಿಗಲಿ ಒಳಿತಿಗೆ ಆದರೆ ... ಜನಜೀವನವಾಗಲಿ ಸರಳ (ಸುಲಭ)                        - ಮಾಧವ ಅಂಜಾರು